ಆಯುಷ್ಮಾನ್ ಯೋಜನೆ: 17,056 ಮಂದಿಗೆ ಚಿಕಿತ್ಸೆ
Team Udayavani, Jan 20, 2021, 1:59 AM IST
ಮಂಗಳೂರು: ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2020ರ ಎಪ್ರಿಲ್‌ನಿಂದ ಡಿಸೆಂಬರ್‌ವರೆಗೆ 17,056 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು 60.54 ಕೋ.ರೂ. ವಿನಿಯೋಗಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಚಂದ್ರ ಬಾಯಿರಿ ಅವರು ಮಂಗಳವಾರ ಜರಗಿದ ಜಿ.ಪಂ. ಸಭೆಯಲ್ಲಿ ಮಾಹಿತಿ ನೀಡಿದರು.
ಇದೇ ವೇಳೆ ಆಯುಷ್ಮಾನ್ ಯೋಜನೆ ಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ದಾಖಲಾಗುವವರ ತಪಾಸಣೆ ವೆಚ್ಚವನ್ನು ಕೂಡ ಸೇರಿಸುವಂತೆ ಸರಕಾರವನ್ನು ಕೋರುವಂತೆ ಸದಸ್ಯೆ ಮಮತಾ ಗಟ್ಟಿ ಅವರು ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರನ್ನು ಆಗ್ರಹಿಸಿದರು. ಸದಸ್ಯರಾದ ಎಂ.ಎಸ್. ಮಹಮ್ಮದ್, ಶಾಹುಲ್ ಹಮೀದ್ ದನಿಗೂಡಿಸಿದರು. 9 ತಿಂಗಳಿನಲ್ಲಿ 4,461 ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆ 24.88 ಕೋ.ರೂ. ಹಾಗೂ 12,895 ಇತರ ಚಿಕಿತ್ಸೆಗೆ 35.76 ಕೋ.ರೂ. ಪಾವತಿಸ ಲಾಗಿದೆ ಎಂದು ಡಾ| ಬಾಯರಿ ತಿಳಿಸಿದರು.
ವಾರದೊಳಗೆ ಅತಿಥಿ ಶಿಕ್ಷಕರ ನೇಮಕ :
ಜಿಲ್ಲೆಯಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಯಾಗದೆ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ ಎಂದು ಸದಸ್ಯರು ಗಮನ ಸೆಳೆದಾಗ ಅತಿಥಿ ಶಿಕ್ಷಕರ ನೇಮಕಕ್ಕೆ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದ್ದು ಪಟ್ಟಿ ಸಿದ್ಧಗೊಂಡಿದೆ. ವಾರದೊಳಗೆ ನೇಮಕಾತಿ ನಡೆಯಲಿದೆ ಎಂದು ಡಿಡಿಪಿಐ ತಿಳಿಸಿದರು.
ಶಾಲೆಗೆ ಸುರಕ್ಷಾ ಪತ್ರ ಕಡ್ಡಾಯ :
ವಿದ್ಯಾರ್ಥಿಗಳ ಸುರಕ್ಷೆ ಹಿನ್ನೆಲೆಯಲ್ಲಿ ಶಾಲೆಗಳು ಸುರಕ್ಷಾ ಪತ್ರ ಹೊಂದುವುದು ಕಡ್ಡಾಯ. ಪತ್ರ ಇದ್ದರೆ ಮಾತ್ರ ಶಾಲೆಗಳ ಮಾನ್ಯತೆಯನ್ನು ನವೀಕರಿಸಲಾಗುತ್ತದೆ. ಮಾನ್ಯತೆ ಇಲ್ಲದ ಶಾಲೆಗಳ ವಿದ್ಯಾರ್ಥಿ ಗಳಿಗೆ ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುವುದಿಲ್ಲ ಎಂದು ಡಿಡಿಪಿಐ ಹೇಳಿದರು.
ಸುರಕ್ಷಾ ಪತ್ರ ಪ್ರಕ್ರಿಯೆಗೆ ಸಾವಿರಾರು ರೂ. ಭರಿಸಬೇಕಾಗಿದ್ದು, ನಿಯಮದಲ್ಲಿ ವಿನಾಯತಿ ನೀಡಬೇಕು ಎಂದು ಸದಸ್ಯ ಸುಚರಿತ ಶೆಟ್ಟಿ ಆಗ್ರಹಿಸಿದರು.
ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಿಇಒ ಡಾ| ಆರ್. ಸೆಲ್ವಮಣಿ, ಸ್ಥಾಯೀ ಸಮಿತಿ ಸದಸ್ಯರಾದ ರವೀಂದ್ರ ಕಂಬಳಿ, ಧನಲಕ್ಷ್ಮೀ ಗಟ್ಟಿ, ಮಮತಾ ಎಂ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.