ಬಣ್ಣ ಬಳಿದು ಸುಂದರಗೊಳಿಸುವ ಕಾರ್ಯ ಆರಂಭ
ಬಿ.ಸಿ.ರೋಡ್‌ನ ಫ್ಲೈ ಓವರ್
Team Udayavani, May 6, 2022, 9:20 AM IST
ಬಂಟ್ವಾಳ: ನಿರ್ಮಾಣ ಹಂತದಲ್ಲೇ ಸಾಕಷ್ಟು ಟೀಕೆಗಳಿಗೆ ಗುರಿ ಯಾಗಿ ಪ್ರಸ್ತುತ ಬಣ್ಣ ಮಾಸಿ ಸಂಪೂರ್ಣ ಕಳೆಗುಂದಿದ್ದ ಬಿ.ಸಿ.ರೋಡ್‌ನ ಫ್ಲೈ ಓವರ್‌ಗೆ ಇದೀಗ ಬಣ್ಣ ಬಳಿದು ಸುಂದರಗೊಳಿಸುವ ಕಾರ್ಯ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ಫ್ಲೈ ಓವರ್ ವಿವಿಧ ಚಿತ್ತಾರಗಳಿಂದ ಮಿಂಚಲಿದೆ.
ಬಿ.ಸಿ.ರೋಡ್ ಸುಂದರೀಕರಣದ ಭಾಗವಾಗಿ ಈ ಕಾಮಗಾರಿ ನಡೆ ಯುತ್ತಿದೆ. ಇದೀಗ ಫ್ಲೈ ಓವರ್ ಮೇಲ್ಭಾಗದಲ್ಲಿ ಸಾರಿಗೆ ನಿಯಮದಂತೆ ಎರಡೂ ಬದಿಯ ತಡೆಗೋಡೆಗಳಿಗೆ ಕಪ್ಪು ಹಾಗೂ ಹಳದಿ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ಉಳಿದಂತೆ ಅದರ ಬದಿಯನ್ನು ತೊಳೆಯುವ ಕಾರ್ಯ ಕೂಡ ಪ್ರಗತಿಯಲ್ಲಿದೆ. ತಳಭಾಗದಲ್ಲಿ ತೊಳೆಯುವ ಕಾರ್ಯ ಪೂರ್ಣಗೊಂಡ ಬಳಿಕ ಮ್ಯಾಟ್ ಫಿನಿಶ್ ಬಣ್ಣ ಬಳಿಯಲಾಗುತ್ತದೆ.
ಫ್ಲೈ ಓವರ್ ನಿರ್ಮಾಣದ ಬಳಿಕ ಯಾವುದೇ ರೀತಿಯ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಫ್ಲೈ ಓವರ್ ಸಂಪೂರ್ಣ ಕಳೆಗುಂದಿದ ಸ್ಥಿತಿಗೆ ಬಂದಿತ್ತು. ಒಂದು ಹಂತದಲ್ಲಿ ಬಿ.ಸಿ.ರೋಡ್‌ನ ಫ್ಲೈ ಓವರನ್ನು ತೆಗೆಯುವ ಮಾತುಗಳು ಕೇಳಿಬಂದಿದ್ದು, ಪ್ರಸ್ತುತ ಅದರ ಪ್ರಸ್ತಾಪವೇ ಇಲ್ಲದಾಗಿದೆ. ಮಳೆ ನೀರು ಅದರ ಕೆಳಭಾಗಕ್ಕೆ ಇಳಿದು ಪಾಚಿ ಹಿಡಿದ ಸ್ಥಿತಿಗೆ ತಲುಪಿತ್ತು. ನಿರ್ಮಾಣ ಗೊಂಡ ಬಳಿಕ ಇದೇ ಮೊದಲ ಬಾರಿಗೆ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದ್ದು ಮುಂದೆ ಫ್ಲೈ ಓವರ್ ಬಣ್ಣಗಳೊಂದಿಗೆ ಮಿಂಚುವ ಸಾಧ್ಯತೆ ಇದೆ.
ಮಿಂಚಲಿದೆ ಬಣ್ಣದ ಚಿತ್ತಾರ
ಫ್ಲೈ ಓವರ್‌ನ ತಳಭಾಗದಲ್ಲಿ ಮ್ಯಾಟ್ ಫಿನಿಶ್ ಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡ ಬಳಿಕ ವಿವಿಧ ಬಗೆಯ ಕಲಾಕೃತಿಗಳನ್ನು ಬಿಡಿಸುವ ಚಿಂತನೆ ನಡೆಸಲಾಗಿದೆ. ಮಂಗಳೂರಿನ ಕೊಟ್ಟಾರಚೌಕಿ, ಕೂಳೂರು, ಸುರತ್ಕಲ್‌ನ ಫ್ಲೈ ಓವರ್‌ಗಳ ತಳಭಾಗದಲ್ಲಿ ಈಗಾಗಲೇ ಚಿತ್ತಾರಗಳನ್ನು ಬಿಡಿಸಲಾಗಿದ್ದು, ಅದೇ ಮಾದರಿಯಲ್ಲಿ ಬಿ.ಸಿ.ರೋಡ್‌ನಲ್ಲೂ ಚಿತ್ರಗಳನ್ನು ಬಿಡಿಸಲು ಉದ್ದೇಶಿಸಲಾಗಿದೆ.
ತಳಭಾಗಕ್ಕೆ ಇಂಟರ್‌ಲಾಕ್
ಕೆಸರು ನೀರು, ಕಲ್ಲು ತುಂಡುಗಳು ತುಂಬಿ ನಿರ್ಲಕ್ಷ್ಯ ಸ್ಥಿತಿಯಲ್ಲಿದ್ದ ಫ್ಲೈ ಓವರ್‌ನ ತಳಭಾಗಕ್ಕೆ ಇಂಟರ್ ಲಾಕ್ ಹಾಕುವ ದೃಷ್ಟಿಯಿಂದ ಈಗಾಗಲೇ ಸಮತಟ್ಟು ಮಾಡುವ ಕಾಮಗಾರಿ ಪೂರ್ಣಗೊಂಡಿದೆ. ಮುಂದೆ ಪಿಲ್ಲರ್‌ಗಳಲ್ಲಿ ಚಿತ್ರಗಳನ್ನು ಬಿಡಿಸುವ ಮುನ್ನ ಇಂಟರ್‌ಲಾಕ್ ಅಳವಡಿಕೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ಫ್ಲೈ ಓವರ್ ಒಂದು ಬದಿಯ ತಳಭಾಗದಲ್ಲಿ ಸಾರ್ವಜನಿಕ ಶೌಚಾಲಯದ ಕಾಮಗಾರಿ ಕೂಡ ಪೂರ್ಣಗೊಂಡರೆ ಬಿ.ಸಿ.ರೋಡ್ ನಗರದ ಸೌಂದರ್ಯ ವೃದ್ಧಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.