ಮತ್ತೆ ಕೊಳೆರೋಗ: ಅಡಿಕೆ ಬೆಳೆಗಾರರು ಕಂಗಾಲು

ನಿರಂತರ ಮಳೆ ಪ್ರಭಾವ: ನಾಲ್ಕು ವರ್ಷಗಳಿಂದ ಸತತ ನಷ್ಟ; ದಿಕ್ಕು ತೋಚದ ಸ್ಥಿತಿ

Team Udayavani, Sep 27, 2019, 5:13 AM IST

2509BDR1-2

ಬಡಗನ್ನೂರು: ನಾಲ್ಕು ವರ್ಷಗಳಿಂದ ಅಡಿಕೆಗೆ ಕೊಳೆ ರೋಗ ಉಂಟಾಗಿ ಕೃಷಿಕರು ಸಂಕಷ್ಟದಲ್ಲಿಯೇ ಇದ್ದು, ಸರಕಾರದ ಪರಿಹಾರ ಇನ್ನೂ ಅತಂತ್ರವಾಗಿರುವ ಸಂದರ್ಭದಲ್ಲಿ ಮತ್ತೆ ಕೊಳೆರೋಗ ಬಾಧಿಸಿದ್ದು, ಕೃಷಿಕರಲ್ಲಿ ಇನ್ನಷ್ಟುಪ ಆತಂಕ ಸೃಷ್ಟಿಯಾಗಿದೆ. ಲಕ್ಷಾಂತರ ಎಳೆ ಅಡಿಕೆಗಳು ನಾಶವಾಗಿದ್ದು, ದಿಕ್ಕು ತೋಚದ ರೈತರು ಪರಿಹಾರಕ್ಕಾಗಿ ಮೊರೆಹೋಗಿದ್ದಾರೆ.

ಮೂರು ತಿಂಗಳಿನಿಂದ ಸುರಿಯುತ್ತಿರುವ ಭಾರೀ ಮಳೆ ಹಾಗೂ ಸೆಪ್ಟಂಬರ್‌ ತಿಂಗಳ ಆರಂಭದಲ್ಲಿ ಕೆಲವು ದಿನಗಳ ಬಿಸಿಲು ಅಡಿಕೆ ಮತ್ತೆ ಕೊಳೆರೋಗಕ್ಕೆ ತುತ್ತಾಗಲು ಕಾರಣವಾಗಿದೆ.

ಸತತವಾಗಿ ಮೂರು ವರ್ಷಗಳಿಂದ ಕೊಳೆರೋಗ ಉಂಟಾಗುತ್ತಿದ್ದು, ಹವಾಮಾನದ ವೈಪರೀತ್ಯ ಮತ್ತು ಭಾರೀ ಮಳೆಯೇ ಇದಕ್ಕೆ ಮೂಲ ಕಾರಣ ಎನ್ನಲಾಗಿದೆ. ಈ ಬಾರಿ ತಡವಾಗಿ ಕೊಳೆರೋಗ ಉಂಟಾಗಿದ್ದು, ತಾಲೂಕಿನ ಗ್ರಾಮೀಣ ಭಾಗ ಸಹಿತ ಜಿÇÉೆಯ ಅನೇಕ ಕಡೆಗಳಲ್ಲಿ ರೋಗ ಕಾಣಿಸಿಕೊಂಡಿದೆ. ಕೆಲವೊಂದು ಕಡೆಗಳಲ್ಲಿ ಸಾವಿರಾರು ಎಳೆ ಅಡಿಕೆ ಉದುರಲು ಪ್ರಾರಂಭವಾಗಿದೆ.

ಅವುಗಳನ್ನು ಏನೂ ಮಾಡಲಾಗದೆ ಕೃಷಿಕರು ಕಂಗಾಲಾಗಿದ್ದಾರೆ.ಫ‌ಲ ಕೊಡುತ್ತಿಲ್ಲ ಬೋಡೋ ಮಿಶ್ರಣ ಸಾಧಾರಣವಾಗಿ ಅಡಕೆಗೆ ಕೊಳೆರೋಗ ಬಾರದಂತೆ ವರ್ಷದಲ್ಲಿ 3-4 ಬಾರಿ ಬೋಡೋಮಿಶ್ರಣವನ್ನು ಸಿಂಪಡಣೆ ಮಾಡುತ್ತಾರೆ. ಜುಲೈ ತಿಂಗಳಲ್ಲಿ ಸಿಂಪಡನೆ ಆರಂಭವಾದರೆ ಸೆಪ್ಟಂಬರ್‌ ತಿಂಗಳ ವರೆಗೂ ನಿರಂತರವಾಗಿ ನಡೆಯುತ್ತದೆ. ಆದರೆ ಈ ಬಾರಿ ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ಭಾರೀ ಮಳೆ ಇದ್ದ ಕಾರಣ ಔಷಧ ಸಿಂಪಡನೆ ಸಾಧ್ಯವಾಗಲಿಲ್ಲ. ಆಗಸ್ಟ್‌ ಕೊನೇ ವಾರದಲ್ಲಿ ಮಳೆ ಕಡಿಮೆಯಾದರೂ ಹಗಲು ಬಿಸಿಲು, ರಾತ್ರಿ ಮಳೆ ಬರುವ ಸಮಶೀತೋಷ್ಣ ವಾತಾವರಣ ಸೃಷ್ಟಿಯಾದ ಕಾರಣ ಅಡಿಕಗೆ ಇನ್ನಷ್ಟು ಹಾನಿಯನ್ನು ತಂದೊಡ್ಡಿತು. ಆಗಸ್ಟ್‌ ಕೊನೇ ವಾರದವರೆಗೂ ಅಷ್ಟಾಗಿ ಕೊಳೆರೋಗ ಕಾಣಿಸಿಕೊಂಡಿರಲಿಲ್ಲ. ಸೆಪ್ಟಂಬರ್‌ ತಿಂಗಳ ಆರಂಭದಿಂದಲೇ ಬಹುತೇಕ ಕಡೆಗಳಲ್ಲಿ ರೋಗ ಕಾಣಿಸಿಕೊಂಡಿದೆ.

ಪರಿಹಾರ ಏನು?
ಸದ್ಯಕ್ಕೆ ಏನೂ ಮಾಡಲಾಗದ ಸ್ಥಿತಿ ಕೃಷಿಕರದ್ದಾಗಿದೆ. ಏಕೆಂದರೆ ಎಳೆ ಅಡಿಕೆ ಆಧಾರಣ ಗಾತ್ರಕ್ಕೆ ಬಲಿತಿದ್ದು, ಅತ್ತ ಹಣ್ಣು ಅಲ್ಲ ಇತ್ತ ಕಾಯಿಯೂ ಅಲ್ಲ ಎಂಬಂತೆ ಇದೆ. ಒಂದು ಮರದಲ್ಲಿ ರೋಗ ಕಾಣಿಸಿಕೊಂಡರೆ ಅದು ಇಡೀ ತೋಟಕ್ಕೆ ಆವರಿಸಿ ಬಿಡುತ್ತದೆ. ಬೋಡೋì ಮಿಶ್ರಣ ಸಿಂಪಡಣೆ ಮಾತ್ರ ಏಕೈಕ ಪರಿಹಾರವಾಗಿದ್ದು, ಔಷಧ ಸಿಂಪಡಣೆ ಮಾಡಿದರೆ ಫ‌ಲ ಕಾಣದ ಹಿನ್ನೆಲೆಯಲ್ಲಿ ಕೆಲವು ಕೃಷಿಕರು ಕೈಚೆಲ್ಲಿದ್ದಾರೆ. ಕೆಲವೊಂದು ತೋಟಗಳಲ್ಲಿ ಸಾವಿರಾರು ಎಳೆ ಅಡಿಕೆಗಳು ನಾಶವಾಗಿವೆ.

ರಾಶಿ ರಾಶಿ ಎಳೆ ಅಡಿಕೆ
ಕೊಳೆ ರೋಗ ಬಾಧಿಸಿದ ಕೂಡಲೇ ಎಳೆ ಅಡಿಕೆಗಳು ಉದುರಲು ಪ್ರಾರಂಭವಾಗುತ್ತವೆ. ಅಡಿಕೆ ಹಣ್ಣಾಗುವ ಹಂತಕ್ಕೆ ಬಂದಿರುವ ಈ ಸಮಯದಲ್ಲಿ ಕೊಳೆ ರೋಗ ಬಾಧಿಸಿರುವುದರಿಂದ ರೈತರಿಗೆ ಬಹಳಷ್ಟು ನಷ್ಟ ಉಂಟಾಗಿದೆ. ಅಡಿಕೆ ಮರದ ಬುಡದಲ್ಲಿ ರಾಶಿರಾಶಿ ಎಳೆ ಅಡಿಕೆಗಳು ಸಿಗುತ್ತಿದ್ದು, ಇವುಗಳನ್ನು ಏನು ಮಾಡಬೇಕು ಎಂಬುದು ಕೃಷಿಕನಿಗೆ ತೋಚದಾಗಿದೆ.

ಸರ್ವೆ ನಡೆಸಿ ಮಾಹಿತಿ ಸಂಗ್ರಹ
ಕೊಳೆರೋಗದ ಕುರಿತು ತಾಲೂಕು ಮಟ್ಟದ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸರ್ವೆ ನಡೆಸಿ ಮಾಹಿತಿ ಸಂಗ್ರಹ ಮಾಡುತ್ತಾರೆ. ಕೃಷಿಕರು ಸಲ್ಲಿಸಿದ ಅರ್ಜಿಯನ್ನು ಇಲಾಖೆಗೆ ಸಲ್ಲಿಸಲಿದ್ದೇವೆ. ಸರಕಾರ ಪರಿಹಾರ ಮೊತ್ತ ಬಿಡುಗಡೆ ಮಾಡಿದಾಗ ಅದನ್ನು ಕೃಷಿಕರಿಗೆ ವಿತರಣೆ ಮಾಡಲಾಗುತ್ತದೆ.
– ಎಚ್‌.ಆರ್‌.ನಾಯಕ್‌
ತೋಟಗಾರಿಕಾ ಉಪನಿರ್ದೇಶಕ, ಮಂಗಳೂರು

ಆ್ಯಪ್‌ ಮೂಲಕ ಸಮೀಕ್ಷೆ
ಕೊಳೆರೋಗ ಬಾಧಿಸಿರುವ ಅಡಿಕೆ ಕೃಷಿಕರು ಗ್ರಾಮ ಕರಣಿಕರಲ್ಲಿ ಅರ್ಜಿ ನೀಡಬಹುದು. ಅರ್ಜಿಗಳನ್ವಯ ಸರ್ವೆ ನಡೆಸಿ ಬಳಿಕ ಕಂದಾಯ ಇಲಾಖೆಗೆ ವರದಿ ಮಾಡಲಾಗುತ್ತಿದೆ. ಗ್ರಾಮಕರಣಿಕರು ಆ್ಯಪ್‌ ಮುಖಾಂತರ ಸಮೀಕ್ಷೆ ನಡೆಸುತ್ತಿದ್ದಾರೆ.
– ರೇಖಾ, ಹಿರಿಯ ಸಹಾಯಕ ನಿರ್ದೇಶಕಿ, ತೋಟಗಾರಿಕಾ ಇಲಾಖೆ ಪುತ್ತೂರು.

ಹೀಗೆ ಅರ್ಜಿ ಸಲ್ಲಿಸಿ
ಕೊಳೆರೋಗ ಬಾಧಿಸಿದ್ದಲ್ಲಿ ಕೃಷಿಕರು ಪರಿಹಾರಕ್ಕಾಗಿ ಸರಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಸ್ಥಳೀಯ ಗ್ರಾಮಕರಣಿಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.
ದಾಖಲೆಗಳು ಕೃಷಿಕನ ಆಧಾರ ಕಾರ್ಡ್‌, ಆರ್‌ಟಿಸಿ (ಪಹಣಿಪತ್ರ), ಬ್ಯಾಂಕ್‌ ಖಾತೆಯ ಪ್ರತಿ ಹಾಗೂ ನಾಶವಾದ ಅಡಿಕೆಯ ಫೋಟೋ (ಇದ್ದಲ್ಲಿ ಮಾತ್ರ). ಪ್ರಕೃತಿ ವಿಕೋಪದಿಂದ ಅಡಕೆ ಮರ ನಾಶವಾದವರು ಇದೇ ಯೋಜನೆಯಡಿ ಅರ್ಜಿ ಸಲ್ಲಿಸಬಹುದು. ಶೇ. 33 ಅಡಿಕೆ ಕೊಳೆರೋಗ ಅಥವಾ ಪ್ರಕೃತಿ ವಿಕೋಪದಿಂದ ನಾಶವಾಗಿದ್ದಲ್ಲಿ ಸರಕಾರ ಕೊಡುವ ಪರಿಹಾರವನ್ನು ಫ‌ಲಾನುಭವಿಗಳು ಪಡೆದುಕೊಳ್ಳಬಹುದು.

 ಪರಿಹಾರ ನೀಡದಿದ್ದರೆ ಪ್ರತಿಭಟನೆ
ಈ ವರ್ಷವೂ ಜಿಲ್ಲೆಯಲ್ಲಿ ಕೊಳೆರೋಗದಿಂದ ಶೇ. 90ರಷ್ಟು ಅಡಿಕೆ ನಾಶವಾಗಿದೆ. ಕಳೆದ ವರ್ಷ 56 ಸಾವಿರ ಅರ್ಜಿದಾರರಿಗೆ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಆದರೆ ಪರಿಹಾರ ಸಿಕ್ಕಿಲ್ಲ. ಈ ವರ್ಷವೂ ರೈತರು ಅರ್ಜಿ ನೀಡುತ್ತಿದ್ದಾರೆ. ಶೀಘ್ರವಾಗಿ ಪರಿಹಾರ ನೀಡದಿದ್ದರೆ ಮುಂದಿನ ವಾರದಿಂದಲೇ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ.
– ಶ್ರೀಧರ ಶೆಟ್ಟಿ ಪುಣಚ ಬೈಲುಗುತ್ತು,
ಜಿಲ್ಲಾಧ್ಯಕ್ಷರು, ರೈತ ಸಂಘ

 ಕೈಗೆ ಬಂದ ತುತ್ತು ಬಾಯಿಗಿಲ್ಲ
ಕಳೆದ ವರ್ಷದಂತೆಯೇ ಈ ಬಾರಿಯೂ ಕೊಳೆರೋಗ ಬಂದು ಸಾವಿರಾರು ಅಡಿಕೆ ನಾಶವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗಿದೆ ಕೃಷಿಕರ ಪರಿಸ್ಥಿತಿ. ಸರಕಾರ ಸೂಕ್ತ ಪರಿಹಾರವನ್ನು ನೀಡಬೇಕು.
– ಸತೀಶ್‌ ರೈ ಕರ್ನೂರು,
ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರು

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.