ಚುನಾವಣಾ ಕರ್ತವ್ಯ ಹಿನ್ನೆಲೆ: ಪಾಲಿಕೆ ಅಧಿಕಾರಿ, ಸಿಬಂದಿಗೆ ಕಚೇರಿಯಲ್ಲೇ ದೀಪಾವಳಿ !
Team Udayavani, Oct 27, 2019, 4:19 AM IST
ಮಹಾನಗರ: ಮ.ನ.ಪಾ.ಚುನಾವಣೆಯ ಹಿನ್ನೆಲೆಯಲ್ಲಿ ಹಲವು ಮಂದಿ ಅಧಿಕಾರಿ, ಸಿಬಂದಿ ದೀಪಾವಳಿ ರಜೆಯಿಂದ ವಂಚಿತರಾಗಿದ್ದಾರೆ. ನ. 12ರಂದು ಪಾಲಿಕೆಗೆ ಮತದಾನ ನಡೆಯಲಿದ್ದು ಪಾಲಿಕೆಯಲ್ಲಿ ಚುನಾವಣಾ ಪ್ರಕ್ರಿಯೆ ಈಗಾಗಲೇ ಚುರುಕುಗೊಂಡಿದೆ. ಕಂದಾಯ ವಿಭಾಗ ಸಹಿತ ಬಹುತೇಕ ಎಲ್ಲ ವಿಭಾಗಗಳ ಅಧಿಕಾರಿ, ಸಿಬಂದಿಗೆ ಚುನಾ ವಣೆಗೆ ಸಂಬಂಧಿಸಿದ ಒಂದಿಲ್ಲೊಂದು ಹೊಣೆ ಹೊರಿಸಲಾಗಿದೆ. ಅ. 26ರಂದು ನಾಲ್ಕನೇ ಶನಿವಾರದ ರಜಾ ದಿನವಾಗಿದ್ದರೂ ಮಹಾನಗರ ಪಾಲಿಕೆಯ ಹೆಚ್ಚಿನ ಎಲ್ಲ ಇಲಾಖೆಗಳು ಕಾರ್ಯ ನಿರ್ವಹಿಸಿವೆ. ರಾತ್ರಿಯವರೆಗೂ ಕಚೇರಿ ಕೆಲಸಗಳು ನಡೆಯುತ್ತಿವೆ.
ಸಮಯ ಕಡಿಮೆ
ಅ. 20ಕ್ಕೆ ಚುನಾವಣಾ ಆಯೋಗ ದಿನಾಂಕ ನಿಗದಿ ಮಾಡಿತ್ತು. ಅ. 24ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಯಿತು. ಒಂದು ರೀತಿಯಲ್ಲಿ ಈ ಬಾರಿಯದ್ದು ತರಾತುರಿಯ ಚುನಾವಣಾ ಪ್ರಕ್ರಿಯೆ. ಸಿದ್ಧತೆಗೆ ಹೆಚ್ಚು ಸಮಯ ಇಲ್ಲದಿದುದರಿಂದ ಹೆಚ್ಚಿನ ಸಂಖ್ಯೆಯ ಅಧಿಕಾರಿ, ಸಿಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
“ಹಿಂದೆ ಇಂತಹ ಸಂದರ್ಭ ಬಂದಿಲ್ಲ. ಈ ವರ್ಷ ದೀಪಾವಳಿ ರಜೆ ಸಿಗುವುದಿಲ್ಲ. ಹೊಂದಾ ಣಿಕೆ ಮಾಡಿಕೊಳ್ಳುತ್ತೇವೆ. ದೀಪಾವಳಿ ಜತೆಗೆ ಪ್ರಜಾಪ್ರಭುತ್ವದ ಹಬ್ಬವನ್ನೂ ಆಚರಿಸಿದಂತೆ ಆಗುತ್ತದೆ. ಕರ್ತವ್ಯವೂ ಮುಖ್ಯ’ ಎಂದು ಪಾಲಿಕೆ ಅಧಿಕಾರಿಯೋರ್ವರು ಪ್ರತಿಕ್ರಿಯಿಸಿದ್ದಾರೆ. “ಮನೆಯಲ್ಲಿ ರಾತ್ರಿ ದೀಪಾವಳಿ ಆಚರಣೆ, ಕಚೇರಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತೇವೆ’ ಎಂದು ಸಿಬಂದಿಯೋರ್ವರು ಹೇಳಿದರು.
300ಕ್ಕೂ ಅಧಿಕ ಸಿಬಂದಿ
ಸರಿಸುಮಾರು 12 ಮಂದಿ ಚುನಾವಣಾಧಿಕಾರಿಗಳು, 12 ಸಹಾಯಕ ಚುನಾವಣಾಧಿಕಾರಿಗಳು, ಮೂವರು ಚುನಾವಣಾ ವೆಚ್ಚ ವೀಕ್ಷಕರು, 6 ವೆಚ್ಚ ಪರಿಶೀಲನಾ ಅಧಿಕಾರಿಗಳು, ಸದಾಚಾರ ಸಂಹಿತೆ ತಂಡ (12ಮಂದಿ), ಏಕಗವಾಕ್ಷಿ ತಂಡ(10), ಚುನಾವಣಾ ಸಾಮಾಗ್ರಿ ಸಿದ್ಧತೆ (20 ಮಂದಿ), 2,300 ಮಂದಿ ಮತಗಟ್ಟೆ ಸಿಬಂದಿ, 16 ಮಂದಿ ಮಾಹಿತಿ ಸಂಗ್ರಾಹಕರು, 36 ಚುನಾವಣಾ ಸಹಾಯಕ ಸಿಬಂದಿ ಸೇರಿದಂತೆ ಒಟ್ಟು ಸುಮಾರು 2,663ರಷ್ಟು ಮಂದಿ ಅಧಿಕಾರಿ/ಸಿಬಂದಿ ಪಾಲಿಕೆ ಚುನಾವಣೆಯ ಕರ್ತವ್ಯ ನಿರತರಾಗಿದ್ದಾರೆ. ಇದರಲ್ಲಿ 300ಕ್ಕೂ ಅಧಿಕ ಮಂದಿ ಪಾಲಿಕೆಯ ಅಧಿಕಾರಿ/ಸಿಬಂದಿ ಇದ್ದಾರೆ.
ಚುನಾವಣೆಯೇ ಮುಖ್ಯ
ದೀಪಾವಳಿ ಬೇಕು. ಆದರೆ ಈ ಬಾರಿ ಚುನಾವಣೆ ಬಂದಿರುವುದರಿಂದ ಚುನಾವಣೆಯೇ ಮುಖ್ಯವಾಗಿದೆ. ಪಾಲಿಕೆ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿ, ಸಿಬಂದಿಗೆ ಹಬ್ಬದ ರಜೆ ರದ್ದು ಮಾಡಿದ್ದೇವೆ. ಕೆಲಸದ ಅವಧಿ ಕೂಡ ಸಾಮಾನ್ಯವಾಗಿ ಕೆಲವು ದಿನಗಳ ಕಾಲ ಹೆಚ್ಚಾಗಿರುತ್ತದೆ. ಎಲ್ಲರ ಸಹಕಾರದಿಂದ ಚುನಾವಣೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇವೆ.
- ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಆಯುಕ್ತರು, ಪಾಲಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.