Monsoon ಆರಂಭದ ಹಿನ್ನೆಲೆ: ಹಡಗು ತೆರವು ಕಾರ್ಯಾಚರಣೆ ಅರ್ಧಕ್ಕೆ ಬಾಕಿ
Team Udayavani, Jun 19, 2023, 6:23 AM IST
ಮಂಗಳೂರು: ಅರಬಿ ಸಮುದ್ರದಲ್ಲಿ ಬಾಕಿಯಾಗಿ ನಿಂತಿ ರುವ ಎರಡು ಹಡಗುಗಳ ತೆರವು ಕಾರ್ಯಾಚರಣೆ ಮುಂಗಾರು ಆಗಮನದ ಕಾರಣ ಅರ್ಧದಲ್ಲೇ ನಿಂತಿದೆ.
ಮಳೆಗಾಲದೊಂದಿಗೆ ಕಡಲು ಭೋರ್ಗರೆಯಲು ಆರಂಭಿಸಿದ್ದು ಕಾರ್ಯಾಚರಣೆ ಅಸಾಧ್ಯವಾಗಿದೆ.
ಸುರತ್ಕಲ್ ಸಮೀಪ ಸಮುದ್ರದಲ್ಲಿ ತೀರದ ಲ್ಲಿಯೇ ನಿಂತಿರುವ ಭಗವತಿ ಪ್ರೇಮ್ ಡ್ರೆಜ್ಜಿಂಗ್
ಹಡಗನ್ನು ಒಡೆದು ತೆರವು ಮಾಡುವ ಕಾರ್ಯವನ್ನು ಸದ್ಯಕ್ಕೆ ಗುತ್ತಿಗೆದಾರರು ಸ್ಥಗಿತ ಗೊಳಿಸಿದ್ದಾರೆ.
4 ತಿಂಗಳುಗಳಿಂದ ಸೋನಾರ್ ಇಂಪೆಕ್ಸ್ ಗುತ್ತಿಗೆದಾರ ಕಂಪೆನಿ ಹಡಗನ್ನು ಒಡೆಯುವ ಕೆಲಸ ನಡೆ ಸಿತ್ತು. ಅದರ ಹಲವು ಭಾಗಗಳನ್ನು ಬಿಚ್ಚಿ, ತುಂಡು ಮಾಡಿ ತೆಗೆದು ಗುಜರಿಗೆಸಾಗಿಸಲಾಗಿದೆ. ಇನ್ನೂ ಹಲವು ಭಾಗ ತೆರವು ಬಾಕಿ ಇದ್ದು ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗಿದೆ. ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಸಮುದ್ರ ಅಬ್ಬರಿಸುತ್ತಿರುವುದರಿಂದ ಜಿಲ್ಲಾಡಳಿತದ ಸೂಚನೆಯಂತೆ ಸದ್ಯ ತೆರವು ಸ್ಥಗಿತಗೊಳಿಸಲಾಗಿದೆ.
ಬಟ್ಟಪ್ಪಾಡಿಯಲ್ಲೂ ಸ್ಥಗಿತ
ಬಟ್ಟಪ್ಪಾಡಿಯಲ್ಲಿ ಪ್ರಿನ್ಸೆಸ್ ಮಿರಾಲ್
ಹಡಗಿನಲ್ಲಿದ್ದ ತೈಲವನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಆದರೆ ಹಡಗು ತೆರವು ಕಾರ್ಯವನ್ನು ಮುಂಗಾರು ಋತು ಮುಗಿದ ಬಳಿಕವೇ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.ಹಡಗಿನಲ್ಲಿದ್ದ 220 ಟನ್ ತೈಲಕ್ಕೆ ನೀರು ಸೇರಿಕೊಂಡಿದ್ದು 160 ಟನ್‌ನಷ್ಟು ತೈಲ ಮಾತ್ರ ಸಿಕ್ಕಿರುವುದಾಗಿ ತಿಳಿದುಬಂದಿದೆ. ಬಟ್ಟಪ್ಪಾಡಿ ಕಡಲ ತೀರದಿಂದ ತುಸು ದೂರದಲ್ಲಿ ನೆಲಕ್ಕೆ ತಾಗಿ ನಿಂತಿರುವ ಪ್ರಿನ್ಸೆಸ್ ಮಿರಾಲ್ ಆ ಭಾಗದಲ್ಲಿ ಸಂಚರಿಸುವ ಬೋಟ್‌ಗಳಿಗೆ ಅಪಾಯಕಾರಿಯಾಗಿರುವುದರಿಂದ ತೆರವು ಮಾಡುವಂತೆ ಸೂಚನೆ ನೀಡಲಾಗಿದೆ. ಬನ್ಸಲ್ ಎಂಡವರ್ಸ್ ಗುತ್ತಿಗೆದಾರ ಕಂಪೆನಿ ಜನವರಿಯಿಂದ ಕಾರ್ಯಾಚರಣೆ ನಡೆಸಿ ಹಡಗಿನಿಂದ ತೈಲ ಹೊರತೆಗೆದಿದೆ. ಅದರಲ್ಲಿ 8 ಸಾವಿರ ಟನ್ ತೂಕದ ಸ್ಟೀಲ್ ಕಾಯಿಲ್ ಕೂಡ ಇದೆ.
ನವಮಂಗಳೂರು ಬಂದರಿ ನಲ್ಲಿ ಡ್ರೆಜ್ಜಿಂಗ್ ನಡೆಸಲು ಬಂದಿದ್ದ ಭಗವತಿ ಪ್ರೇಮ್ ಡ್ರೆಜ್ಜರ್ ಹಡಗಿನಲ್ಲಿ ರಂಧ್ರ ಉಂಟಾಗಿ ಮುಳುಗುವ ಹಂತ ತಲಪಿತ್ತು. ಅದನ್ನು 2019ರಲ್ಲಿ ಸುರತ್ಕಲ್ ಬೀಚ್ ಬಳಿ ತಂದು ನಿಲ್ಲಿಸಲಾಗಿತ್ತು. ಅಲ್ಲಿಂದ ಸ್ಥಳಾಂತರಿಸುವುದಾಗಿ ಎನ್‌ಎಂಪಿಎ ಹೇಳಿ ದ್ದರೂ ಅದು ಪೂರೈಸಲೇ ಇಲ್ಲ. ಕೊನೆಗೆ ಹಡಗನ್ನೇ ವಿಲೇವಾರಿ ಮಾಡಲು ನಿರ್ಧರಿಸಲಾಗಿತ್ತು.
2021ರ ಜೂನ್ 21ರಂದು ಉಳ್ಳಾಲ ಬಟ್ಟಪ್ಪಾಡಿಯಲ್ಲಿ ಪ್ರಿನ್ಸೆಸ್ ಮಿರಾಲ್ ಅಪಾ ಯಕ್ಕೆ ಸಿಲುಕಿತ್ತು.
ರಂಧ್ರ ಕಾಣಿಸಿಕೊಂಡು ನೀರು ಒಳ ಸೇರಿತ್ತು ಅದರಲ್ಲಿದ್ದ 15 ಸಿರಿಯನ್ ನಾವಿಕರನ್ನು ಸುರಕ್ಷಿತ ವಾಗಿ ಕೋಸ್ಟ್‌ಗಾರ್ಡ್ ರಕ್ಷಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.