ಕೆಸರುಮಯವಾದ ನಯನಾಡು – ಊರ್ಲ ಸಂಪರ್ಕ ರಸ್ತೆ
Team Udayavani, Jul 24, 2018, 11:32 AM IST
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ನಯನಾಡು ಜಂಕ್ಷನ್‌ನಿಂದ ಊರ್ಲ ಸಂಪರ್ಕ ರಸ್ತೆ ಕೆಸರುಮಯವಾಗಿದ್ದು ಜನ ಮತ್ತು ವಾಹನ ಸಂಚಾರಕ್ಕೆ ತೊಡಕನ್ನುಂಟು ಮಾಡಿದೆ. ಮಣ್ಣಿನ ಈ ಕಚ್ಛಾ ರಸ್ತೆಯನ್ನು ಅಭಿವೃದ್ಧಿಗೊಳಿಸಿ ಡಾಮರು ರಸ್ತೆಯಾಗಿ ಪರಿವರ್ತಿಸಬೇಕೆಂದು ಗ್ರಾಮಸ್ಥರು ಬಹಳ ಸಮಯದಿಂದ ಕೇಳುತ್ತಿದ್ದರೂ ಅವರ ಬೇಡಿಕೆ ಕೈಗೂಡಿಲ್ಲ. ನೆರೆಯ ಕುಕ್ಕೇಡಿ ಗ್ರಾಮ ಹಾಗೂ ಕೊಳಕ್ಕೆಬೈಲು ಮೂಲಕ ಮೂರ್ಜೆಗೆ ಸಾಗಲು ಇದು ಹತ್ತಿರದ ದಾರಿಯಾಗಿದೆ. ಆ ಭಾಗದ ಜನರು ನಯನಾಡಿಗೆ ವ್ಯವಹಾರ ಮತ್ತಿತರ ಕಾರ್ಯಗಳಿಗೆ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪ.ಪೂ. ಕಾಲೇಜಿಗೆ ಮತ್ತು ಹಾಲಿನ ಡಿಪೋಗೆ ಬರುವವರಿಗೆ ಕೆಸರಿಂದಾಗಿ ತೊಂದರೆಯಾಗಿದೆ. ದ್ವಿಚಕ್ರ ಸಹಿತ ಯಾವುದೇ ವಾಹನಗಳು ಸಂಚರಿಸುವಂತಿಲ್ಲ.
ಈ ಬಗ್ಗೆ ಪಿಲಾತಬೆಟ್ಟು ಗ್ರಾ.ಪಂ.ಗೆ ಮನವಿ ನೀಡಿದ್ದು ಸಂಬಂಧಿತರು ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರಿ ಪದವಿಪೂರ್ವ ಕಾಲೇಜಿನ ಮೇಲುಸ್ತುವಾರಿ ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ನೆಲ್ವಿಸ್ಟರ್ ಪಿಂಟೋ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.