10 ಕಂಪೆನಿಗಳಿದ್ದರೂ ಗ್ರಾಮ ಅಭಿವೃದ್ಧಿಯಾಗಿಲ್ಲ!
Team Udayavani, Sep 1, 2021, 4:00 AM IST
ಬಡಗುಳಿಪಾಡಿ ಗ್ರಾಮದಲ್ಲಿ ಸುಮಾರು 10 ಕಂಪೆನಿಗಳು ಕಾರ್ಯಾಚರಿಸುತ್ತಿರುವ ಕಾರಣ ವಿಶೇಷವಾಗಿ ಮೂಲಸೌಲಭ್ಯಅಭಿವೃದ್ಧಿಗೆ ಒತ್ತು ನೀಡಬೇಕಿದೆ. ತ್ಯಾಜ್ಯ ಸಂಗ್ರಹ ಘಟಕ ನಿರ್ಮಾಣ, ಕಚ್ಚಾರಸ್ತೆಗಳಿಗೆ ಡಾಮರು ಹಾಕಬೇಕು. ಈ ಬಗ್ಗೆ ಸಂಬಂಧಪಟ್ಟವರ ಗಮನಸೆಳೆಯಲು ಉದಯವಾಣಿ ಸುದಿನದ “ಒಂದು ಊರು–ಹಲವು ದೂರು‘ ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.
ಕೈಕಂಬ: ಬಡಗುಳಿಪಾಡಿ ಗ್ರಾಮವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ರಫ್ತು ಹಾಗೂ ಆಮದು ವಿಶೇಷ ಆರ್ಥಿಕ ವಲಯದ 10 ಕಂಪೆನಿಗಳು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೊರ ರಾಜ್ಯ, ಜಿಲ್ಲೆಯ ಸುಮಾರು 6 ಸಾವಿರ ಕಾರ್ಮಿಕರು ಇಲ್ಲಿ ದುಡಿಯುತ್ತಿದ್ದಾರೆ. 22ಕ್ಕಿಂತ ಹೆಚ್ಚು ವಸತಿ ಸಮುಚ್ಚಯಗಳು ತಲೆ ಎತ್ತಿವೆ. ಅದಕ್ಕೆ ತಕ್ಕಂತೆ ಮೂಲಸೌಲಭ್ಯಗಳ ಅಭಿವೃದ್ಧಿ ಗ್ರಾಮದಲ್ಲಿ ಆಗಬೇಕಿದೆ.
ಜನರ ಬೇಡಿಕೆಗೆ ಅನುಕೂಲವಾಗಿ ಅಭಿವೃದ್ಧಿ ಹೊಂದಬೇಕಾದ ಇಲ್ಲಿನ ಮಾರುಕಟ್ಟೆ ಮಾತ್ರ ಅರೆಬರೆಯಲ್ಲಿದೆ. ಇದರಿಂದಾಗಿ ಸ್ಥಳೀಯರು ಸಮೀಪದ ಕೈಕಂಬ ಪೇಟೆಗೆ ಹೋಗುತ್ತಿದ್ದಾರೆ. ಇಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾಗಬೇಕಿದೆ. ಇನ್ನು ಪ್ಲಾಸ್ಟಿಕ್ ಪಾರ್ಕ್ ಕೂಡ ಬರಲಿದೆ. ಇದರಿಂದ ಬಡುಗುಳಿಪಾಡಿ ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕಿದೆ.
ಮಂಗಳೂರು -ಮೂಡುಬಿದಿರೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169 ವಿಸ್ತರಣೆಗೆ ಈಗಾಗಲೇ ಸರ್ವೇ ಕಾರ್ಯ ನಡೆಯುತ್ತಿದೆ. ಗುರುಪುರ, ಕೈಕಂಬ, ಗಂಜಿಮಠದಲ್ಲಿರುವ ಪೇಟೆಗಳ ಅಂಗಡಿಗಳು ಈಗಾಗಲೇ ಭೂಸ್ವಾಧೀನದ ಪ್ರಕ್ರಿಯೆಯಲ್ಲಿ ಬರುತ್ತಿದೆ. ಈ ಪ್ರಕ್ರಿಯೆಯಲ್ಲಿ ಗಂಜಿಮಠ ಗ್ರಾ.ಪಂ. ಕಟ್ಟಡ ಜತೆ ಮಾರುಕಟ್ಟೆಯ ಎದುರು ಭಾಗ ಅಂಗಡಿ ಕಟ್ಟಡಗಳು ಬರುತ್ತಿವೆ. ಸದ್ಯ ಗುರುವಾರ ನಡೆಯುವ ಸಂತೆಗೂ ಸ್ಥಳಾವಕಾಶದ ಕೊರತೆ ಕಾಣುತ್ತಿದ್ದು, ಹೆದ್ದಾರಿಯವರೆಗೆ ಸಂತೆಗಳು ಬರುತ್ತವೆ. ಇದರಿಂದಾಗಿ ಇಲ್ಲಿ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆೆ ಎಂಬ ದೂರು ಕೇಳಿಬಂದಿದೆ. ಪಂಚಾಯತ್ ಸುಸಜ್ಜಿತ ಮಾರುಕಟ್ಟೆಗೆ ಯೋಜನೆ ರೂಪಿಸಬೇಕಿದೆ. ಗಂಜಿಮಠ ಮಾರುಕಟ್ಟೆಯನ್ನೇ ಕಾಂಪ್ಲೆಕ್ಸ್ ಮಾಡಿದ್ದಲ್ಲಿ ಗ್ರಾಮಸ್ಥರ ಜತೆ ಕಂಪೆನಿಗಳ ಕಾರ್ಮಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಪಂಚಾಯತ್ ಕಟ್ಟಡಕ್ಕೂ ಮಾಸ್ಟರ್ ಪ್ಲ್ರಾನ್ ಅಗತ್ಯ :
ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಯಿಂದ ಪಂಚಾಯತ್ ಕಟ್ಟಡದ ಎದುರುಭಾಗ ಹೋಗುವು ದರಿಂದ ಪಂಚಾಯತ್ ಕಟ್ಟಡಕ್ಕೂ ಮಾಸ್ಟರ್ ಪ್ಲ್ರಾನ್ ಅಗತ್ಯ. ಒಂದೇ ಸೂರಿನಡಿ ಪಂಚಾಯತ್‌ನ ಎಲ್ಲ ಆವಶ್ಯಕತೆಗಳನ್ನು ಪೂರೈಸುವ ಇಲಾಖೆ, ಅಂಚೆ, ಬ್ಯಾಂಕ್, ಗ್ರಾಮ ಕರಣಿಕರ ಕೊಠಡಿ, ಸಭಾಭವನಗಳು ಬಂದರೆ ಗ್ರಾಮಸ್ಥರ ಅಲೆದಾಟಕ್ಕೆ ಪರಿಹಾರ ಸಿಗಲಿದೆ. ಈ ಬಗ್ಗೆ ಪಂಚಾಯತ್ ನಿರ್ಧಾರ ತೆಗೆದುಕೊಳ್ಳಬೇಕಿದೆ. ಅನುದಾನದ ಕ್ರೋಡೀಕರಣದ ಬಗ್ಗೆಯೂ ಚಿಂತನೆ ನಡೆಸಬೇಕಿದೆ.
ಗಂಜಿಮಠ ಪ್ರಾ.ಆ. ಕೇಂದ್ರ ಮೇಲ್ದರ್ಜೆಗೇರಿಸಿ:
ಮೂಡುಬಿದಿರೆಯಿಂದ ಮಂಗಳೂರು ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಣ ಸಿಗುವ ಒಂದೇ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಗಂಜಿಮಠದಲ್ಲಿದೆ. ತುರ್ತು ಸೇವೆ ಅಗತ್ಯಬಿದ್ದಲ್ಲಿ ಮೂಡುಬಿದಿರೆ ಇಲ್ಲವೇ ಮಂಗಳೂರಿಗೆ ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ, ಸೌಕರ್ಯಗಳನ್ನು ಹೆಚ್ಚಿಸಬೇಕಿದೆ. ಬಡಗುಳಿಪಾಡಿ, ಮೂಡುಪೆರಾರ, ಮೂಳೂರು ಮತ್ತು ಕಂದಾವರ ಗ್ರಾಮವನ್ನೊಳಗೊಂಡ ಪುರಸಭೆ ರಚನೆಗೆ ಪಂಚಾಯತ್‌ನಿಂದ ನಿರ್ಣಯಗೊಂಡು ಸರಕಾರದ ಪ್ರಸ್ತಾವನೆಯಲ್ಲಿದೆ.
ಇತರ ಸಮಸ್ಯೆಗಳೇನು? :
- ಕೈಕಂಬದಲ್ಲಿ ಅರ್ಧದಲ್ಲಿರುವ ನಿಂತಿರುವ ಹಿಂದೂ ರುದ್ರಭೂಮಿ ಕಾರ್ಯಗತವಾಗಬೇಕು.
- ತಾಜ್ಯ ಸಂಗ್ರಹ ಘಟಕ ಆರಂಭಿಸುವುದು ಅಗತ್ಯ.
- ವಿಶೇಷ ಆರ್ಥಿಕ ವಲಯಕ್ಕೆ ಬರುವ ವಾಹನಗಳನ್ನು ಮಳಲಿ ಕ್ರಾಸ್ ಹಾಗೂ ಇತರೆಡೆ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡುವ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ದೂರುಗಳು ಕೇಳಿ ಬಂದಿದ್ದು ವಿಶೇಷ ಆರ್ಥಿಕವಲಯದಲ್ಲಿ 5 ಎಕರೆ ಜಾಗ ಟ್ರಕ್‌ಪಾರ್ಕ್‌ಗೆ ಮೀಸಲಿರಿಸಿದ ಬಗ್ಗೆ ಮಾಹಿತಿ ಇದ್ದು ಅದರಲ್ಲಿ ಶೌಚಾಲಯ, ಸ್ನಾನಗೃಹ ನಿರ್ಮಾಣವಾಗಬೇಕು.
- ಮಳಲಿ ಕ್ರಾಸ್ ಹಾಗೂ ಕೈಕಂಬದಲ್ಲಿರುವ ವಿಶೇಷ ಆರ್ಥಿಕ ವಲಯದಿಂದ ಗಂಜಿಮಠ ಗ್ರಾ.ಪಂ. ಕುಡಿಯುವ ನೀರಿಗಾಗಿ ನಿರ್ಮಾಣಗೊಂಡ ಓವರ್ ಹೆಡ್‌ಟ್ಯಾಂಕ್‌ನ ಶುದ್ಧೀಕರಣ ಘಟಕವನ್ನು ಸರಿಪಡಿಸಬೇಕಿದೆ.
- ಗಣೇಶ್ ಕ್ಯಾಶ್ಯೂ ಕಂಪೆನಿ ಎದುರುಗಡೆಯಿಂದ ಮಳಲಿ ಸೈಟ್‌ವರೆಗೆ ಕಚ್ಚಾರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು.
- ಪೂವಾರ್‌ನಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲ.
- ಪೂವಾರ್ ಅಂಗನವಾಡಿ ಎದುರುಗಡೆ ರಸ್ತೆ ಹಾಳಾಗಿದ್ದು, ಇದನ್ನು ಅಭಿವೃದ್ಧಿಪಡಿಸಬೇಕು.ಯವಕ ಮಂಡಲ
- ಕಟ್ಟಡದಲ್ಲಿ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಹೆದ್ದಾರಿಗೆ ಜಾಗ ಒತ್ತುವರಿ ಮಾಡುವಾಗ ಈ ಕಟ್ಟಡ ತೆರವಾಗಲಿದೆ. ಗ್ರಂಥಾಲಯಕ್ಕೆ ಜಾಗ ಕಾದಿರಿಸಿ, ನೂತನ ಕಟ್ಟಡ ನಿರ್ಮಾಣವಾಗಬೇಕು.ಅಳಿಕೆ ಕ್ರಾಸ್ ಕಚ್ಚಾರಸ್ತೆಯನ್ನು ಅಭಿವೃದ್ಧಿಗೊಳಿಸಬೇಕಿದೆ.
-ಸುಬ್ರಾಯ್ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.