ನೀರಿನ ಅಭಾವ ಪರಿಹರಿಸುತ್ತಿರುವ ಬದ್ಯಾರು ಕೆರೆ
Team Udayavani, Nov 22, 2018, 10:06 AM IST
ಪುಂಜಾಲಕಟ್ಟೆ: ನೀರಿನ ಅಭಾವದಿಂದ ತತ್ತರಿಸುವ ಈ ಸಮಯದಲ್ಲಿ ನೀರಿಂಗಿಸುವ ಉದ್ದೇಶದಿಂದ ಅಲ್ಲಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಗಳು ನಡೆಯುತ್ತಿದೆ. ಕೆರೆಗಳನ್ನು ಅಭಿವೃದ್ಧಿ ಪಡಿಸಿ ನೀರಿಂಗಿಸುವಿಕೆಗೆ ಅವಕಾಶ ನೀಡಿದಲ್ಲಿ ನೀರಿನ ಸಮಸ್ಯೆ ಬಾಧಿಸದು. ಬಂಟ್ವಾಳ ತಾ| ಕುಕ್ಕಿಪಾಡಿ ಗ್ರಾ.ಪಂ. ವ್ಯಾಪ್ತಿಯ ಎಲಿಯನಡುಗೋಡಿನ ಬದ್ಯಾರಿನಲ್ಲಿ ಒಂದೂವರೆ ಎಕ್ರೆಯಷ್ಟು ವಿಸ್ತಾರ ಪ್ರದೇಶದಲ್ಲಿ ವ್ಯಾಪಿಸಿರುವ ಬದ್ಯಾರು ಕೆರೆ ಪರಿಸರದ ಜನತೆಯ ನೀರಿನ ಅಭಾವವನ್ನು ನೀಗಿಸುತ್ತಿದೆ.
40 ಲಕ್ಷ ರೂ. ಅನುದಾನದಲ್ಲಿ ಕೆರೆ ಅಭಿವೃದ್ಧಿ
ಮಣ್ಣು, ಗಿಡಗಂಟಿಗಳಿಂದ ತುಂಬಿ ನೀರಿಲ್ಲದೆ ನಿರುಪಯುಕ್ತ ಆಗಿದ್ದ ಈ ಕೆರೆಯನ್ನು ಕಳೆದ ವರ್ಷ ಆಗ ಶಾಸಕರಾಗಿದ್ದ ಬಿ. ರಮಾನಾಥ ರೈ ಅವರ ಸತತ ಪ್ರಯತ್ನದ ಮೇರೆಗೆ ನಬಾರ್ಡ್‌ನ 40 ಲಕ್ಷ ರೂ. ಅನುದಾನದಲ್ಲಿ ಕೆರೆ ಅಭಿವೃದ್ಧಿಗೊಳಿಸಲಾಗಿತ್ತು. ಈ ಕೆರೆಯ ಯಥೇತ್ಛ ನೀರಿನಿಂದ ಪರಿಸರದ ಬಹಳಷ್ಟು ಜನರಿಗೆ ಪ್ರಯೋಜನವಾಗುತ್ತಿದೆ. ಸರಕಾರಿ ಜಮೀನಿನಲ್ಲಿರುವ ಈ ಕೆರೆ ಪರಂಬೋಕು ಕೆರೆಯಾಗಿದ್ದು, ಸುಮಾರು 100 ವರ್ಷಗಳ ಹಿಂದಿನಿಂದ ಅಸ್ತಿತ್ವದಲ್ಲಿತ್ತು ಎನ್ನಲಾಗಿದೆ. ಮೊದಲು ಸುತ್ತಮುತ್ತಲಿನಲ್ಲಿ ವಾಸವಾಗಿದ್ದ ಜನರು ಕೃಷಿ ಹಾಗೂ ಇನ್ನಿತರ ಬಳಕೆಗೆ ಈ ನೀರನ್ನು ಉಪಯೋಗಿಸುತ್ತಿದ್ದರು. ಜಾನುವಾರು ಗಳಲ್ಲದೇ ಕಾಡುಪ್ರಾಣಿಗಳೂ ನೀರು ಕುಡಿಯಲು ಬರುತ್ತಿದ್ದವು ಎನ್ನುತ್ತಾರೆ. ಕಾಲಕ್ರಮೇಣ ಸಂಪರ್ಕದ ರಸ್ತೆಗಳು ಹೆಚ್ಚಾಗಿ ಡಾಮರು ಕಾಮಗಾರಿಯಾದ ಬಳಿಕ ಮನೆಗಳು ಹೆಚ್ಚಾಗಿವೆ.
ಆಹ್ಲಾದಕರ ವಾತಾವರಣ
ಈ ಕೆರೆಯಲ್ಲಿ ನೀರು ತುಂಬುವ ಕಾರಣ ಸದಾ ನೀರಿನ ಒರತೆಯಿಂದ ಪರಿಸರದ ಕೃಷಿಕರಿಗೆ ಬಹು ಪ್ರಯೋಜನಕಾರಿಯಾಗಿದೆ. ಅಗತ್ಯಕ್ಕೆ ತಕ್ಕಂತೆ ಇರಿಗೇಶನ್ ಮೂಲಕ ನೀರು ಹಾಯಿಸಿಕೊಳ್ಳಬಹುದಾಗಿದೆ. ಕೆರೆ ಯಲ್ಲಿ ನೀರು ತುಂಬಿರುವುದರಿಂದ ಪಕ್ಷಿ ಸಂಕುಲಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಬಾತುಕೋಳಿಯಂತಹ ಪಕ್ಷಿಗಳು ವಲಸೆ ಬಂದು ಇಲ್ಲಿ ನೆಲೆಯಾಗುತ್ತವೆ. ವಿನಾಶದಂಚಿನಲ್ಲಿರುವ ಪಕ್ಷಿಗಳಿಗೆ ಕುಡಿಯಲು ಕೆರೆಯಲ್ಲಿ ನೀರು ದೊರಕುತ್ತದೆ. ಸಂಜೆ ಹೊತ್ತು ಪಕ್ಷಿಗಳು ಬಂದು ಸೇರುವುದರಿಂದ ಅವುಗಳ ಕಲರವ ಆಹ್ಲಾದಕರ ವಾತಾವರಣವನ್ನು ಸೃಷ್ಟಿಸುತ್ತದೆ ಎನ್ನುತ್ತಾರೆ ಸ್ಥಳೀಯರಾದ ಪಕ್ಷಿ ಸಂಕುಲದ ಉಳಿವಿನ ಜಾಗೃತಿ ಗುಬ್ಬಚ್ಚಿಗೂಡು ಕಾರ್ಯಾಗಾರದ ಸಂಚಾಲಕ ನಿತ್ಯಾನಂದ ಶೆಟ್ಟಿ ಬದ್ಯಾರು.
ತಡೆಗೋಡೆ
ಸರಕಾರ ಈ ಕೆರೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ತಡೆಗೋಡೆ ರಚಿಸಿದಲ್ಲಿ ಕುಡಿಯುವ ನೀರು, ಮೀನು ಸಾಕಣೆ, ಈಜುಕೊಳ ಮತ್ತಿತರ ಪ್ರಯೋಜನಗಳನ್ನು ಪಡೆಯಬಹುದು.
ಬಹೂಪಯೋಗಿ
ಕೆರೆಯಲ್ಲಿ ನೀರು ತುಂಬಿದ್ದು, ಪರಿಸರದ ಬಾವಿಗಳಲ್ಲಿ ಅಂತರ್ಜಲ ಹೆಚ್ಚಿರುವುದರಿಂದ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಕಾಡದು. ಈ ಕೆರೆಯ ನೀರು ಗದ್ದೆ, ತೋಟಗಳಿಗೆ ಹರಿದು ಹೋಗಿ ಹಂಚಿಕೆಯಾಗುತ್ತದೆ. ಕೃಷಿಯನ್ನೇ ನಂಬಿದ ಜನತೆಗೆ ಇದು ಸಮಾಧಾನಕರವಾಗಿದೆ. ಬೇಸಗೆಯಲ್ಲಿ ನೀರನ್ನರಸಿ ಬರುವ ಜಾನುವಾರುಗಳ ಬಾಯಾರಿಕೆಯನ್ನು ತಣಿಸುತ್ತದೆ.
ತಡೆಗೋಡೆ ನಿರ್ಮಾಣಕ್ಕೆ ಮನವಿ
ಬದ್ಯಾರು ಕೆರೆಯ ಪುನಶ್ಚೇತನದಿಂದ ಪರಿಸರದ ಗ್ರಾಮಸ್ಥರಿಗೆ ಅನುಕೂಲವಾಗಿದೆ. ಇದರ ನೀರನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಿದೆ. ಕೆರೆಗೆ ತಡೆಗೋಡೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದೆ.
– ದಿನೇಶ್ ಸುಂದರ ಶಾಂತಿ
ಅಧ್ಯಕ್ಷರು, ಕುಕ್ಕಿಪಾಡಿ ಗ್ರಾ.ಪಂ.
ರತ್ನದೇವ್ ಪುಂಜಾಲಕಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.