ಬೈಕಂಪಾಡಿ : ಹೆದ್ದಾರಿ ಹೊಂಡಗಳೇ ಇಲ್ಲಿ ಸ್ಪೀಡ್ ಬ್ರೇಕರ್!
Team Udayavani, Jul 18, 2017, 3:25 AM IST
ಬೈಕಂಪಾಡಿ: ಹೆದ್ದಾರಿ 66ರ ಕುಳಾಯಿ, ಬೈಕಂಪಾಡಿ ಮತ್ತಿತರೆಡೆ ರಸ್ತೆ ನಡುವೆಯೇ ಬೃಹತ್ ಹೊಂಡಗಳಾಗಿ ಸಂಪ್ರದಾ ಯದಂತೆ ವಾಹನಗಳು ಮತ್ತೆ ಸರತಿ ಸಾಲಿನಲ್ಲಿ ಚಲಿಸಬೇಕಾದ ಸಂದರ್ಭ ಬಂದೊದಗಿದೆ.
ಮಳೆಗಾಲದಲ್ಲಿ ಹೊಂಡ ಬೀಳುವುದು ಸಾಮಾನ್ಯ. ಆದರೆ ತಾತ್ಕಾಲಿಕ ಹೊಂಡ ಮುಚ್ಚಲೂ ಹೆದ್ದಾರಿ ಇಲಾಖೆ ಇದುವರೆಗೆ ಪ್ರಯತ್ನ ನಡೆಸಿಲ್ಲ. ಹೀಗಾಗಿ ಹೊನ್ನಕಟ್ಟೆ ವೃತ್ತ ಹಾಗೂ ಬೈಕಂಪಾಡಿ ಕೈಗಾರಿಕಾ ಪ್ರದೇಶದ ವೃತ್ತದಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ಸೃಷ್ಟಿಯಾಗಿ ಸಣ್ಣ ವಾಹನಗಳು ಚಲಿಸಲಾಗದಷ್ಟು ಪ್ರಮಾಣದಲ್ಲಿ ದೊಡ್ಡ ದಾಗುತ್ತಾ ಹೋಗುತ್ತಿವೆ.
ವಾಹನಗಳ ಡ್ಯಾನ್ಸ್ !
ಹೊಂಡ ತಪ್ಪಿಸುವ ಭರದಲ್ಲಿ ವಾಹನಗಳು ದಿಢೀರನೇ ತಿರುಗುವ ಕಾರಣ ಎಲ್ಲಿ ಅಪ ಘಾತವಾಗುವುದೋ ಎಂದು ಭಯಪಡುವಂತಾಗಿದೆ. ಈ ಪ್ರದೇಶಗಳು ತಿರುವು ಮುರುವು ರಸ್ತೆ ಹೊಂದಿದ್ದು, ಹೊಂಡದ ಅರಿವಿಲ್ಲದೆ ಅಪಾಯ ಮೈಮೇಲೆ ಎಳೆದುಕೊಳ್ಳುವ ಸ್ಥಿತಿ ಉಂಟಾಗಿದೆ. ಮಳೆಗಾಲದಲ್ಲಿ ಹೊಂಡ ತುಂಬ ನೀರು ನಿಂತು ಆಳ ತಿಳಿಯದೆ ಘನ ವಾಹನಗಳು ಸಿಲುಕಿಕೊಳ್ಳುತ್ತಿವೆ. ತತ್‌ಕ್ಷಣ ತಾತ್ಕಾಲಿಕ ನೆಲೆಯಲ್ಲಾದರೂ ಹೊಂಡ ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಉಮೇಶ್ ದೇವಾಡಿಗ ಇಡ್ಯಾ ಒತ್ತಾಯಿಸಿದ್ದಾರೆ.
ಹೊಂಡಗಳಿಂದ ಕೂಡಿದ ರಸ್ತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
MUST WATCH
ಹೊಸ ಸೇರ್ಪಡೆ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.