ಪ್ರಾಮಾಣಿಕತೆ ಮೆರದು 13 ಸಾವಿರ ಹಣವಿದ್ದ ಪರ್ಸ್ ಮರಳಿಸಿದ ಶಾಲಾ ವಿದ್ಯಾರ್ಥಿಗಳಿಗೆ ಸನ್ಮಾನ
Team Udayavani, Feb 18, 2020, 11:04 AM IST
ಬಜಪೆ: ಇಲ್ಲಿನ ಶಾಲೆಯ ಮಕ್ಕಳಿಬ್ಬರು ತಮಗೆ ದಾರಿಯಲ್ಲಿ ದೊರೆತ 13 ಸಾವಿರ ಹಣ ಮತ್ತು ದಾಖಲೆಗಳನ್ನು ಹೊಂದಿದ್ದ ಪರ್ಸೊಂದನ್ನು ವಾರೀಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಬಜಪೆಯ ಪಾಪ್ಯುಲರ್ ಶಾಲೆಯ ವಿದ್ಯಾರ್ಥಿಗಳಾದ ಎಂಟನೇ ತರಗತಿ ವಿದ್ಯಾರ್ಥಿ ನಿಶಾಂತ್ ಶೆಟ್ಟಿ ಮತ್ತು ಆರನೇ ತರಗತಿ ವಿದ್ಯಾರ್ಥಿ ಚೇತನ್ ಬಿ ಅಮೀನ್ ತಮಗೆ ಸಿಕ್ಕಿದ ಹಣವನ್ನು ಸರಿಯಾದ ವಾರೀಸುದಾರರಿಗೆ ತಲುಪಿಸಿದವರು.
ಇವರಿಬ್ಬರಿಗೆ ಎರಡು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಪರ್ಸ್ ಸಿಕ್ಕಿತ್ತು. ಪರಿಶೀಲಿಸಿದಾಗ ಅದರಲ್ಲಿ 13 ಸಾವಿರ ಹಣ ಮತ್ತು ಅಮೂಲ್ಯ ದಾಖಲೆ ಪತ್ರಗಳಿದ್ದವು. ವಿದ್ಯಾರ್ಥಿಗಳು ಶಾಲಾ ಮುಖ್ಯ ಶಿಕ್ಷಕರ ಮುಖೇನ ಆ ಪರ್ಸನ್ನು ವಾರೀಸುದಾರರಾದ ಮೊಹಮ್ಮದ್ ರವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ನಿಟ್ಟಿನಲ್ಲಿ ಶಾಲೆಯ ಪ್ರಾರ್ಥನಾ ಸಮಯದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಸಿರಾಜ್ ಹುಸೇನ್ ರ ನೇತೃತ್ವದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪರ್ಸಿನ ವಾರೀಸುದಾರರಾದ ಮೊಹಮ್ಮದ್, ಊರಿನ ಗಣ್ಯರಾದ ಅಶ್ರಫ್ ಮದನಿ, ಬಿ.ಎಂ. ಮುಸ್ತಫ, ಶಾಲಾ ಮುಖ್ಯೋಪಧ್ಯಾಯಿನಿ ಸಹನಾ, ಶಾಲಾ ಶಿಕ್ಷಕಿಯರು ಮತ್ತು ಸಿಬಂದಿ ವರ್ಗದವರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.