ಬಜತ್ತೂರು: ಕುಸಿಯುವ ಹಂತದಲ್ಲಿ ಗುಡ್ಡ
Team Udayavani, Jul 13, 2018, 12:31 PM IST
ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಎಂಜಿರಡ್ಕ ಜನತಾ ಕಾಲನಿಯಲ್ಲಿ ಗುಡ್ಡವೊಂದು ಕುಸಿಯುವ ಹಂತದಲ್ಲಿದೆ. ಪಕ್ಕದಲ್ಲೇ 2 ಮನೆಗಳು ಇದ್ದು, ಗುಡ್ಡ ಯಾವುದೇ ಸಂದರ್ಭದಲ್ಲಿ ಈ ಮನೆಗಳ ಮೇಲೆ ಕುಸಿದು ಬೀಳುವ ಸಾಧ್ಯತೆ ಇದೆ. ಅಪಾಯದ ಅಂಚಿನಲ್ಲಿರುವ ಎರಡೂ ಮನೆಯವರು ದಿನಂಪ್ರತಿ ಭೀತಿಯಿಂದಲೇ ದಿನ ಕಳೆಯುವಂತಾಗಿದೆ.
ಎಂಜಿರಡ್ಕ ಜನತಾ ಕಾಲನಿ ನಿವಾಸಿ ಹಸೈನಾರ್ ಅವರ ಮನೆಗೆ ತಾಕಿಕೊಂಡು ಗುಡ್ಡ ಇದೆ. ಪಕ್ಕದಲ್ಲಿ ರಾಮಣ್ಣ ಅವರ ಮನೆ ಇದೆ. ನಿರಂತರ ಮಳೆಯ ನೀರು ಗುಡ್ಡದ ಬದಿಯಿಂದಲೇ ಹೋಗುತ್ತಿದ್ದು, ಗುಡ್ಡದ ಮಣ್ಣು ಮೃದುವಾಗುತ್ತಿರುವುದು ಕಂಡುಬಂದಿದೆ. ಯಾವುದೇ ಸಂದರ್ಭದಲ್ಲಿ ಧರೆ ಕುಸಿದು ಬೀಳುವ ಲಕ್ಷಣ ಇದೆ. ಕುಸಿದರೆ ಎರಡೂ ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.
ಅಧಿಕಾರಿಗಳೇ ಇತ್ತ ಗಮನ ಹರಿಸುವಿರಾ?
ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹಲವು ಕಡೆ ಗುಡ್ಡ ಕುಸಿದು ಮನೆಗಳಿಗೆ ಹಾನಿಯಾಗಿರುವುದು ವರದಿಯಾಗುತ್ತಲೇ ಇದೆ. ಮೊನ್ನೆಯಷ್ಟೇ ಪುತ್ತೂರು ಹೆಬ್ಟಾರ ಬೈಲುವಿನಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಸಂಭವನೀಯ ಅವಘಡ ತಪ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಎಂಜಿರಡ್ಕದತ್ತ ಗಮನ ಹರಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
ದೂರು ನೀಡಿದ್ದೇವೆ; ಪ್ರಯೋಜನವಾಗಿಲ್ಲ
ಅಪಾಯಕಾರಿ ಗುಡ್ಡದ ಕುರಿತು ಗ್ರಾ.ಪಂ.ಗೆ ದೂರು ನೀಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಾನು ಕೂಲಿ ಮಾಡಿಕೊಂಡು ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಜೀವನ ನಿರ್ವಹಿಸುತ್ತಿದ್ದೇನೆ. ಅದೇ ರೀತಿ ನೆರೆಮನೆಯ ರಾಮಣ್ಣ ಅವರು ಪತ್ನಿ, ಮೂವರು ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ನಾವು ಎರಡೂ ಮನೆಯವರು ಯಾವಾಗ ಏನಾಗುತ್ತದೋ ಎನ್ನುವ ಭೀತಿಯಲ್ಲೇ ದಿನ ಕಳೆಯುತ್ತಲಿದ್ದೇವೆ. ಅದರಲ್ಲೂ ರಾತ್ರಿಯಲ್ಲಿ ಮಳೆಯ ಸದ್ದಾಗುತ್ತಲೇ ಎಚ್ಚರವಾಗುತ್ತದೆ. ನಿದ್ದೆಯೂ ಸರಿಯಾಗಿ ಹತ್ತುವುದಿಲ್ಲ.
– ಹಸೈನಾರ್
ಎಂಜಿರಡ್ಕ ನಿವಾಸಿ
ಪರಿಶೀಲನೆ ನಡೆಸಿ ಕ್ರಮ
ಗುಡ್ಡ ಕುಸಿತ ಸಾಧ್ಯತೆ ಬಗ್ಗೆ ಗಮನಕ್ಕೆ ಬಂದಿದೆ. ಗುಡ್ಡಕ್ಕೆ ತಡೆಗೋಡೆ ನಿರ್ಮಿಸಲು ಗ್ರಾ.ಪಂ.ನಲ್ಲಿ ಅನುದಾನ ಇಲ್ಲ. ಆದರೂ ಸ್ಥಳೀಯರ ಮನವಿಯಂತೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮಕ್ಕೆ ಪ್ರಯತ್ನಿಸುತ್ತೇನೆ.
- ಸಂತೋಷ್ ಕುಮಾರ್
ಬಜತ್ತೂರು ಗ್ರಾ.ಪಂ. ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.