ಬಜಪೆ : ಮನೆಯೇ ಅಂಗನವಾಡಿ ಕೇಂದ್ರ
Team Udayavani, Mar 9, 2018, 4:32 PM IST
ಬಜಪೆ: ಗರ್ಭಿಣಿಯರು, ತಾಯಂದಿರು ಮತ್ತು ಮಕ್ಕಳು ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಈ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೇಂದ್ರವೇ ಸರಿಯಾಗಿಲ್ಲದಿದ್ದರೆ ಹೇಗೆ?
ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಪೆರಾರ ಗ್ರಾಮದ ಅಂಗನವಾಡಿಯೊಂದು ಜಾಗವಿಲ್ಲದೆ ಬಜಪೆ ಗ್ರಾಮದ ಕೊರಕಂಬ್ಳದ ಖಾಸಗಿ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸ್ಥಳೀಯ ಆಡಳಿತದಿಂದ ನಿರ್ಲಕ್ಷ
ಅದೆಷ್ಟೋ ಸರಕಾರಿ ಜಾಗಗಳು ಖಾಲಿ ಬಿದ್ದಿದ್ದು, ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಸದ್ಬಳಕೆ ಮಾಡಬಹುದು. ಆದರೆ ಸ್ಥಳೀಯ ಆಡಳಿತ ಈ ನಿಟ್ಟಿನಲ್ಲಿ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ.
ಅಸಮರ್ಪಕ ವ್ಯವಸ್ಥೆ
ಪಡು ಪೆರಾರ ಗ್ರಾ.ಪಂ.ನ ಉಪಾಧ್ಯಕ್ಷರ ವಾರ್ಡ್ ನಲ್ಲಿರುವ ಈ ಅಂಗನವಾಡಿಯು 2006ರಿಂದ ಖಾಸಗಿ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಅಂಗನವಾಡಿ ಕೇಂದ್ರದಲ್ಲಿ ಬಜಪೆಯ 5, ಪಡುಪೆರಾರದ 6 ಮಂದಿ ಮಕ್ಕಳಿದ್ದಾರೆ.
ಕುಡುಬಿ ಹಾಗೂ ಮುಸ್ಲಿಂ ಸಮಾಜಕ್ಕೆ ಸೇರಿದ ಮಕ್ಕಳೇ ಹೆಚ್ಚಾಗಿದ್ದು, ಇಲ್ಲಿ ಸಮರ್ಪಕ ವ್ಯವಸ್ಥೆಯಿಲ್ಲದೆ ಮಕ್ಕಳೂ ಇಲ್ಲಿ ಹೇಗೆ ಇರುತ್ತಾರೋ ಎಂದು ಪ್ರಶ್ನಿಸಿಕೊಳ್ಳುವಂತಿದೆ.
ಅಂಗನವಾಡಿಯಲ್ಲಿದ್ದ ಸಮಸ್ಯೆಗಳನ್ನು ನೋಡಿದ ಸ್ಥಳೀಯರು ಈ ಮನೆಯನ್ನು ಅಂಗನವಾಡಿಗೆಂದು ಮೊದಲು ಉಚಿತ ವಾಗಿ ನೀಡಿದ್ದರು. ಈಗ ಬಾಡಿಗೆ ಪಾವತಿಸಲಾಗುತ್ತಿದೆ. ಇಕ್ಕಟ್ಟಾದ ಕೋಣೆಯಲ್ಲಿ ಮಕ್ಕಳು ಕುಳಿತುಕೊಳ್ಳಬೇಕಾದ ಪರಿ ಸ್ಥಿತಿ ಇಲ್ಲಿದೆ. ಪಡುಪೆರಾರ ಗ್ರಾಮ ಪಂಚಾಯತ್ ಜಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಬಹುದು. ಜಾಗ ಇದ್ದರೆ ಕಟ್ಟಡವನ್ನು ಸರಕಾರದ ಯೋಜನೆ, ದಾನಿಗಳ ಸಹಾಯ ಹಾಗೂ ನರೇಗಾ ಯೋಜನೆಯಡಿಯಲ್ಲಿ ಮಾಡಬಹುದಾಗಿದೆ ಎನ್ನು ತ್ತಾರೆ ಸ್ಥಳೀಯರು.
ಅಧ್ಯಕ್ಷರಿಗೆ ಮಾಹಿತಿ ಇಲ್ಲವಂತೆ
ಪಡುಪೆರಾರದ ಗ್ರಾಮದ ಅಂಗನವಾಡಿ ಕೇಂದ್ರ ಬಜಪೆ ಖಾಸಗಿ ಕಟ್ಟಡ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದೆಯಲ್ಲ ಈ ಬಗ್ಗೆ ಏನಂತೀರಿ ಎಂದು ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಾ ಅವರನ್ನು ಪ್ರಶ್ನಿಸಿದರೆ, ಈ ಬಗ್ಗೆ ತನಗೆ ಮಾಹಿತಿ ಇಲ್ಲ. ಉಪಾಧ್ಯಕ್ಷ ನೂರ್ ಅಹ್ಮದ್ ಅವರಲ್ಲಿ ಕೇಳಿ. ಅದು ಅವರ ವಾರ್ಡ್ ಎನ್ನುತ್ತಾರೆ.
ಬಾಡಿಗೆ ಪಾವತಿ
ಜಾಗಕ್ಕಾಗಿ ಹಲವಾರು ವರ್ಷಗಳ ಹಿಂದೆ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ಗೆ ಅರ್ಜಿ ನೀಡಿದ್ದೇವೆ. ಇನ್ನೂ ಆಗಿಲ್ಲ ಎನ್ನುತ್ತಾರೆ. ಈ ಕಟ್ಟಡ ಮೊದಲಿಗೆ ಬಾಡಿಗೆ ಇಲ್ಲದೇ ಉಚಿತವಾಗಿ ನೀಡಲಾಗಿತ್ತು. ಆದರೆ ಈಗ ಬಾಡಿಗೆ ಪಾವತಿಸಲಾಗುತ್ತಿದೆ.
– ಶೋಭಾ, ಅಂಗನವಾಡಿ ಕಾರ್ಯಕರ್ತೆ
ಹಲವು ಬಾರಿ ಮನವಿ
ಈ ಅಂಗನವಾಡಿ ನಿರ್ಮಾಣಕ್ಕೆ ಅನೇಕ ಬಾರಿ ವಿಎ ಹಾಗೂ ಕಂದಾಯ ನಿರೀಕ್ಷಕ ರಿಗೆ ಜಾಗ ನೀಡಲು ಮನವಿ ಮಾಡ ಲಾಗಿದೆ. ಆದರೆ ಈ ಪ್ರದೇಶದಲ್ಲಿ ಸರಕಾರಿ ಜಾಗ ಇಲ್ಲದಿರುವುದರಿಂದ ಯಾರಾದರೂ ಜಾಗ ದಾನ ಮಾಡಲು ಮುಂದಾದರೆ ಕಟ್ಟಡ ನಿರ್ಮಾಣ ಮಾಡಲು ಸಾಧ್ಯ.
– ಶ್ಯಾಮಲಾ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ, ಗ್ರಾಮಾಂತರ
ಸುಬ್ರಾಯ ನಾಯಕ್, ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer; ಡಾ. ಚಿದಂಬರಂ & ಡಾ. ರಾಜಾ ರಾಮಣ್ಣ;ಪರಮಾಣು ವಿಜ್ಞಾನವನ್ನೂ ಮೀರಿದ ನಾಯಕತ್ವ
Tumkur: ಮಧುಗಿರಿ ಡಿವೈಎಸ್ಪಿ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ವಿಡಿಯೋ ಆರೋಪ
Fraud Case: ಐಶ್ವರ್ಯಗೌಡ ವಂಚನೆ; ಸಂತಸ್ತರಿಗೆ ನ್ಯಾಯದ ಭರವಸೆ ನೀಡಿದ ಎಚ್‌ಡಿಕೆ
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Sarji sweet box case: ಲವ್ ಫೈಲ್ಯೂರ್ ಆಗಿದ್ದಕ್ಕೆ ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.