Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
ರಸ್ತೆ ವಿಸ್ತರಣೆಗೆ ತಂಗುದಾಣ ತೆರವಾಗಿ 50 ದಿನಗಳೇ ಕಳೆದಿವೆ!; ಈಗ ನಿಲ್ದಾಣವೂ ಇಲ್ಲ, ಕಾಂಕ್ರೀಟೂ ಇಲ
Team Udayavani, Dec 26, 2024, 1:15 PM IST
ಬಜಪೆ: ಬಜಪೆ ಪೇಟೆಯಲ್ಲಿರುವ ಎರಡು ಬಸ್ ತಂದುಗಾಣಗಳನ್ನು ರಸ್ತೆ ಕಾಮಗಾರಿಗಾಗಿ ತೆರವುಗೊಳಿಸಿ 50 ದಿನಗಳೇ ಕಳೆದಿವೆ. ಆದರೆ ಇದುವರೆಗೂ ರಸ್ತೆ ವಿಸ್ತರಣೆ, ಕಾಂಕ್ರೀಟ್ ಕಾಮಗಾರಿಯೇ ಆರಂಭವಾಗಿಲ್ಲ. ಬಸ್ ತಂಗುದಾಣ ತೆರವು ಮಾಡಲು ಅವಸರ ಮಾಡಿದವರು ಈಗ ತಣ್ಣಗಿದ್ದಾರೆ. ಆದರೆ ತಂಗುದಾಣವಿಲ್ಲದೆ ಪ್ರಯಾಣಿಕರು ಮಾತ್ರ ಬಿಸಿಲಿನಲ್ಲಿ ಬೇಯುತ್ತಿದ್ದಾರೆ.
ಬಜಪೆ ಪೇಟೆಯಲ್ಲಿನ ಅದ್ಯಪಾಡಿ, ಮುಚ್ಚಾರು ಹಾಗೂ ಮಂಗಳೂರು, ಸುರತ್ಕಲ್ ಕಡೆಗೆ ಹೋಗುವ ಬಸ್‌ಗಳು ನಿಲ್ಲುವ ಭಾಗದಲ್ಲಿದ್ದ ಎರಡು ತಂಗುದಾಣವನ್ನು ಬಜಪೆ ಪಟ್ಟಣ ಪಂಚಾಯತ್ ಅಕ್ಟೋಬರ್ 31ರಂದು ತೆರವು ಮಾಡಿದೆ. ಬಜಪೆ ಪೇಟೆಯಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಹಾಗೂ ಕಾಂಕ್ರೀಟ್ ಕಾಮಗಾರಿಗಾಗಿ ಇವುಗಳನ್ನು ತೆರವು ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯು ಬಜಪೆ ಪಟ್ಟಣ ಪಂಚಾಯತ್‌ಗೆ ಸೆ.11ರಂದು ಮನವಿ ಮಾಡಿತ್ತು. ಇದನ್ನು ಪರಿಗಣಿಸಿ ಪಟ್ಟಣ ಪಂಚಾಯತ್ ತನ್ನ ಕೆಲಸವನ್ನೇನೋ ಮಾಡಿತ್ತು.
ಬಸ್ ತಂಗುದಾಣಗಳನ್ನು ತೆರವುಗೊಳಿಸಿದ ಬಗ್ಗೆ ನ. 4ರಂದು ಬಜಪೆ ಪಟ್ಟಣ ಪಂಚಾಯತ್‌ನಿಂದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಗೆ ಪತ್ರ ಬರೆದು ತಿಳಿಸಲಾಗಿತ್ತು. ಆದರೆ ತಂಗುದಾಣ ತೆರವುಗೊಳಿಸಿ 50 ದಿನಗಳಾದರೂ ಲೋಕೋಪಯೋಗಿ ಇಲಾಖೆ ಯಾವುದೇ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕೈಗೊಳ್ಳದೇ ಇರುವುದು ಇಲ್ಲಿನ ಜನರ ಸಂಕಷ್ಟಕ್ಕೆ ಕಾರಣವಾಗಿದೆ.
ನಿಂತ ಬಸ್‌ಗಳೇ ಪ್ರಯಾಣಿಕ ತಂಗುದಾಣ!
ಬಸ್ ತಂಗುದಾಣ ಇಲ್ಲದೆ ಇರುವುದರಿಂದ ಜನರು ಈಗ ನೆರಳಿಗಾಗಿ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಧ್ಯಾಹ್ನದ ಹೊತ್ತಂತೂ ಇಲ್ಲಿ ನಿಲ್ಲುವುದಕ್ಕೆ ಸಾಧ್ಯವೇ ಇಲ್ಲದ ಸ್ಥಿತಿ ಇದೆ. ಜನರು ಅಂಗಡಿಗಳ ಮುಂಗಟ್ಟು, ಮರದ ನೆರಳಿನಲ್ಲಿ ನಿಂತು ಬಸ್ ಬರುವಾಗ ಓಡಿಕೊಂಡು ಬರಬೇಕಾಗಿದೆ. ಅಚ್ಚರಿ ಎಂದರೆ ಈಗ ಕೆಲವು ಬಸ್‌ಗಳೇ ಪ್ರಯಾಣಿಕರಿಗೆ ತಂಗುದಾಣವಾಗಿದೆ. ಮಂಗಳೂರು, ಸುರತ್ಕಲ್, ಪಣಂಬೂರು, ಅದ್ಯಪಾಡಿ, ಮುಚ್ಚಾರಿಗೆ ಹೋಗುವ ಬಸ್‌ಗಳಲ್ಲಿ ಕೆಲವು ಅರ್ಧ ಗಂಟೆ ಹೊತ್ತು ನಿಲ್ದಾಣದಲ್ಲಿ ನಿಲ್ಲುತ್ತವೆ. ಜನರು ಅದರಲ್ಲಿ ಹೋಗಿ ಕುಳಿತು ಬಿಸಿಲಿನಿಂದ ತಪ್ಪಿಸಿಕೊಳ್ಳುವುದೂ ಇದೆ. ಆದರೆ, ನಿಂತ ಬಸ್‌ಗಳಲ್ಲಿ ನೆರಳೇನೋ ಇರುತ್ತದೆ. ಆದರೆ, ಬಿಸಿಲಿನ ಝಳ ಹೊಡೆಯುತ್ತಿರುತ್ತದೆ! ಇನ್ನೊಂದು ಕಡೆ ಬಸ್ ಬರುವಾಗ ಬೇರೆ ಕಡೆಯಿಂದ ಓಡಿ ಬರುವುದೂ ಇದೆ. ಇದರಿಂದ ಅಪಾಯವೂ ಹೆಚ್ಚಾಗಿದೆ.
ಕಾಮಗಾರಿ ಯಾಕೆ ವಿಳಂಬ?
ಆವತ್ತು ರಸ್ತೆ ವಿಸ್ತರಣೆಗೆ ಬಸ್ ತಂಗುದಾನ ತೆರವು ಅನಿವಾರ್ಯ ಎಂದು ಲೋಕೋಪಯೋಗಿ ಇಲಾಖೆ ಮಾಡಿದ ಅವಸರವನ್ನು ನೋಡಿದರೆ ನಾಳೆಯೇ ಕಾಮಗಾರಿ ಆರಂಭದಂತೆ ಕಾಣುತ್ತಿತ್ತು. ಆದರೆ, 50 ದಿನ ಕಳೆದರೂ ಇನ್ನೂ ಕೆಲಸ ಶುರುವಾಗಿಲ್ಲ ಯಾಕೆ ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಕಾಮಗಾರಿ ಸದ್ಯಕ್ಕೆ ಆರಂಭವಾಗುವುದಿಲ್ಲ ಎಂದಾದರೆ ತಾತ್ಕಾಲಿಕ ತಂಗುದಾಣವಾದರೂ ನಿರ್ಮಿಸಿಕೊಡಿ ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.
-ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.