ಬಜಪೆ: ಮೀನು ಸಂಗ್ರಹ ಶೀತಲೀಕರಣ ಘಟಕ ಶೀಘ್ರದಲ್ಲಿ ಕಾರ್ಯಾರಂಭ
Team Udayavani, Feb 10, 2020, 5:51 AM IST
ಬಜಪೆ: ಗ್ರಾಹಕರಿಗೆ ಸದಾ ತಾಜಾ ಮೀನು ದೊರೆಯಬೇಕು ಎಂಬ ಉದ್ದೇಶದಿಂದ ಇಲ್ಲಿನ ಮೀನು ಮಾರು ಕಟ್ಟೆಯಲ್ಲಿ ಆರಂಭಿಸಲಾಗಿರುವ ಮೀನು ಸಂಗ್ರಹ ಶೀತಲೀಕರಣ ಘಟಕವು ಶೀಘ್ರದಲ್ಲಿ ಕಾರ್ಯಾರಂಭಗೊಳ್ಳಲಿದೆ.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಸುಮಾರು 5ಲಕ್ಷ ರೂ. ಅನುದಾನದಲ್ಲಿ ಬಜಪೆ ಮೀನು ಮಾರು ಕಟ್ಟೆಯಲ್ಲಿ ಶೀತಲೀಕರಣ ಘಟಕ ನಿರ್ಮಾಣವಾಗುತ್ತಿದೆ. ಇದರಿಂದ ಮೀನು ವ್ಯಾಪಾರಿ ಗಳಿಗೆ ಅನುಕೂಲವಾಗಲಿದೆ.
ಬಜಪೆ ಮೀನು ಮಾರುಕಟ್ಟೆಯಲ್ಲಿ ಶೀತಲೀಕರಣ ಘಟಕ ಆರಂಭಿಸಲು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಬಗ್ಗೆ ಹೆಚ್ಚಿನ ಮತ್ತುವರ್ಜಿ ವಹಿಸಿದ್ದರು. ಶಾಸಕ ಉಮಾನಾಥ ಕೋಟ್ಯಾನ್ ಅವರ ಪ್ರಮುಖ ಆಸಕ್ತಿ ವಹಿಸಿ ಕಾಮಗಾರಿ ಗುಣಮಟ್ಟವನ್ನು ಪರಿಶೀಲಿಸುತ್ತಾ ಬಂದಿದ್ದಾರೆ.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವು ಕರಾವಳಿಯ 20 ಕಡೆಗಳಲ್ಲಿ ಮೀನು ಮಾರುಕಟ್ಟೆಗಳಿಗೆ ಶೀತಲಿಕರಣ ಘಟಕವನ್ನು ಆರಂಭಿಸುವ ಉದ್ದೇಶಿಸಿದ್ದು ಈಗಾಗಲೇ 12 ಕಡೆಗಳಲ್ಲಿ ಘಟಕಗಳು ಕಾರ್ಯಾರಂಭಗೊಂಡಿವೆ. ಇನ್ನು 8 ಕಡೆಗಳಲ್ಲಿ ಪ್ರಗತಿಯಲ್ಲಿದೆ.
ವಿಧಾನಸಭಾ ಕ್ಷೇತ್ರದ ಎರಡನೇ ಮಾರುಕಟ್ಟೆ
ಶಾಸಕ ಉಮಾನಾಥ ಕೋಟ್ಯಾನ್ ಅವರು ಮೂಲ್ಕಿ-ಮೂಡಬಿದಿರೆ ವಿಧಾನ ಭಾ ಕ್ಷೇತ್ರದಲ್ಲಿ ಈಗಾಗಲೇ ಕಿನ್ನಿ ಗೋ ಳಿಯ ಮೀನು ಮಾರುಕಟ್ಟೆ ಯಲ್ಲಿ ಮೀನು ಸಂಗ್ರಹಕ್ಕಾಗಿ ಶೀತಲೀಕರಣ ಘಟಕವು ಈಗಾಗಲೇ ಉದ್ಘಾಟನೆ ಗೊಂಡು ಕಾರ್ಯಾರಂಭ ಗೊಂಡಿದೆ. ಕ್ಷೇತ್ರದಲ್ಲಿ ಮುಂದುವರಿದು ಬಜಪೆ ಮೀನು ಮಾರುಕಟ್ಟೆಯು ಕಾರ್ಯಾ ರಂಭಗೊಳ್ಳುತ್ತಿರುವ ಕ್ಷೇತ್ರದ ಎರಡನೇ ಸಂಗ್ರಹ ಘಟಕವಾಗಿದೆ. ಬಜಪೆ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣಕ್ಕೆ 2012ರಲ್ಲಿ ನಿಗಮದ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯ 10ಲಕ್ಷ ರೂ. ಹಾಗೂ ಬಜಪೆ ಗ್ರಾ.ಪಂ.ನ 3ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾಗಿತ್ತು. ಬಜಪೆ ಮೀನು ಮಾರುಕಟ್ಟೆಯಲ್ಲಿ ದಿನಂಪ್ರತಿ 8 ಮಂದಿ ಮೀನು ವ್ಯಾಪಾರಿಗಳು, ಸೋಮವಾರದ ಸಂತೆ ದಿನದಂದು 12 ಮಂದಿ ಮೀನು ವ್ಯಾಪಾರಿಗಳು ಇಲ್ಲಿ ವ್ಯಾಪಾರ ಮಾಡುತ್ತಾರೆ. ಇದರಲ್ಲಿ 8 ಮಹಿಳೆಯರು, 4 ಪುರುಷರು, ತಿಂಗಳಿಗೆ 3 ಸಾವಿರ ರೂ. ನಷ್ಟು ತೆರಿಗೆ ಪಾವತಿಸುತ್ತಿದ್ದಾರೆ.
2 ಟನ್ ಮೀನು ಸಂಗ್ರಹ ಸಾಧ್ಯ
ಗ್ರಾಹಕರಿಗೆ ತಾಜಾ, ಗುಣಮಟ್ಟದ ಮೀನು ಸಿಗಬೇಕು ಎನ್ನುವ ಉದ್ದೇಶದಿಂದ ಮೀನು ಮಾರುಕಟ್ಟೆಯಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಶೀತಲೀಕರಣ ಘಟಕ ಆರಂಭಿಸಲಾಗುತ್ತದೆ. ಇದರಲ್ಲಿ ಸುಮಾರು 2 ಟನ್‌ಗಳಷ್ಟು ಮೀನುಗಳನ್ನು ಶೇಖರಿಸಿಡಲು ಸಾಧ್ಯವಿದೆ. ಕಿನ್ನಿಗೋಳಿ ಮೀನು ಮಾರುಕಟ್ಟೆ ಯಲ್ಲಿಯೂ ಕೂಡ ಇಷ್ಟೇ ಸಾಮರ್ಥ್ಯದ ಘಟಕವನ್ನು ಆರಂಭಿಸಲಾಗಿದೆ.
– ಅಮರನಾಥ ಜೈನ್, ನಿಗಮದ ಸಹಾಯಕ ಕಾರ್ಯವಾಹಕ ಎಂಜಿನಿಯರ್
ಬಜಪೆ ಅಭಿವೃದ್ಧಿಗೆ ಪೂರಕ
ಬಜಪೆ ನಗರವಾಗಿ ಬೆಳೆಯುತ್ತಿದ್ದು ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಪರಿಸರದ ಜನತೆಗೆ ಸದಾ ತಾಜಾ ಮೀನು ಸಿಗುವಂತಾಗಲು ಮೀನು ಮಾರುಕಟ್ಟೆಯಲ್ಲಿ ಮೀನು ಸಂಗ್ರಹಣಾ ಶೀತಲೀಕರಣ ಘಟಕವನ್ನು ಸದ್ಯದಲ್ಲಿ ಆರಂಭಸಿಲಾಗುತ್ತಿದೆ. ಗ್ರಾಹಕರು ಹಾಗೂ ಮೀನು ವ್ಯಾಪಾರಿಗಳಿಗೆ ಹೆಚ್ಚು ಅನುಕೂಲಕರವಾಗಲಿದೆ.
– ಉಮಾನಾಥ ಕೋಟ್ಯಾನ್, ಶಾಸಕರು, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರ
-ಸುಬ್ರಾಯ ನಾಯಕ್, ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Ullala: ತ್ರಿವಳಿ ತಲಾಖ್ ಪ್ರಕರಣ: ಆರೋಪಿಯ ಸೆರೆ
Ullala: 3ರ ಬಾಲಕಿಗೆ 70ರ ವೃದ್ಧನಿಂದ ಲೈಂಗಿಕ ಕಿರುಕುಳ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.