Bajpe Police; ವಾಹನಗಳ ಬ್ಯಾಟರಿಗಳನ್ನು ಕದಿಯುತ್ತಿದ್ದ ಇಬ್ಬರ ಬಂಧನ
1.50 ಲಕ್ಷ ರೂ. ಮೌಲ್ಯದ 17 ಬ್ಯಾಟರಿ, ಕಾರು ವಶ
Team Udayavani, Aug 8, 2023, 10:46 PM IST
ಕೈಕಂಬ: ರಾತ್ರಿ ವೇಳೆ ನಿಲ್ಲಿಸಿರುವ ವಾಹನಗಳಿಂದ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ತಂಡವನ್ನು ಬಜಪೆ ಪೊಲೀಸರು ಭೇದಿಸಿದ್ದು ಮೂವರನ್ನು ಬಂಧಿಸಿ ಕಳವುಗೈದ ಬ್ಯಾಟರಿಗಳನ್ನ ವಶಪಡಿಸಿಕೊಂಡಿದ್ದಾರೆ.
ಬಜಪೆ ಠಾಣೆ ವ್ಯಾಪ್ತಿಯ ಅಡ್ಡೂರು, ಕೈಕಂಬ ಮತ್ತು ಗುರುಪುರ ಪರಿಸರಗಳಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿ, ಜೆಸಿಬಿ ಮತ್ತು ಇತರ ವಾಹನಗಳಿಂದ ಬ್ಯಾಟರಿಗಳು ಕಳವಾಗಿರುವ ಬಗ್ಗೆ ಬಜಪೆ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ತನಿಖೆ ಆರಂಭಿಸಿದ ಪೊಲೀಸ್ ನಿರೀಕ್ಷಕ ಪ್ರಕಾಶ ಅವರ ತಂಡ ಮಂಗಳವಾರ ಮಂಗಳೂರು ತಾಲೂಕು ಬಜಪೆ ಗ್ರಾಮದ ಒಡ್ಡಿದ ಕಲದಲ್ಲಿ ಕಳವುಗೈದ ಬ್ಯಾಟರಿಗಳನ್ನು ಮಾರಾಟ ಮಾಡಲು ಕಾರಿನಲ್ಲಿ ಸಾಗಿಸುತ್ತಿದ್ದ ಮೂಡುಪೆರಾರ ಈಶ್ವರ ಕಟ್ಟೆ ಮಿತ್ತ ಕೊಳಪಿಲದ ಪ್ರತಾಪ್ (20) ಮತ್ತು ಕಂದಾವರ ಚರ್ಚ್ ರಸ್ತೆಯ ಅನಿಲ್ ಯಾನೆ ಅನೀ (23) ಅವರನ್ನು ಬಂಧಿಸಿದ್ದಾರೆ.
ಅವರಿಂದ ಸುಮಾರು 4 ಲಕ್ಷ ರೂ. ಮೌಲ್ಯದ ಕಾರು ಮತ್ತು 1.50 ಲಕ್ಷ ರೂ. ಮೌಲ್ಯದ ಒಟ್ಟು 17 ಆಮರಾನ್ ಕಂಪೆನಿಯ ಬ್ಯಾಟರಿಗಳನ್ನು ಸ್ವಾ ಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಾಹನಗಳ ಬ್ಯಾಟರಿ ಕಳ್ಳರ ಬಂಧನಕ್ಕೆ ವಿಶೇಷ ಕಾರ್ಯಾಚರಣೆ ನಡೆಸುವಂತೆ ಮಂಗಳೂರು ನಗರದ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಮಾರ್ಗದರ್ಶನದಂತೆ ಡಿಸಿಪಿಗಳಾದ ಅಂಶುಕುಮಾರ್ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ದಿನೇಶ್ ಕುಮಾರ್ (ಅಪರಾಧ ಮತ್ತು ಸಂಚಾರ) ಅವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿದರು.
ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ ಮತ್ತು ಪೊಲೀಸ್ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಗುರಪ್ಪ ಕಾಂತಿ, ರೇವಣ ಸಿದ್ದಪ್ಪ, ಕುಮಾರೇಶನ್, ಲತಾ ಮತ್ತು ಅಪರಾಧ ಪತ್ತೆ ವಿಭಾಗದ ಸಿಬಂದಿ ಎಎಸ್‌ಐ ರಾಮ ಪೂಜಾರಿ, ಸುಜನ್, ರಶೀದ್ ಶೇಖ್, ಬಸವರಾಜ್ ಪಾಟೀಲ್, ಜಗದೀಶ್, ಸಂತೋಷ್, ಪ್ರಕಾಶ, ಕೆಂಚಪ್ಪ, ಕೆಂಚನ ಗೌಡ ಅವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.