ಬಜಪೆ ಪೊಲೀಸ್ ಠಾಣೆ- ಮುರನಗರ – ಹಳೆ ವಿಮಾನ ನಿಲ್ದಾಣ ರಸ್ತೆ ಧೂಳುಮಯ
ರಸ್ತೆ ವಿಸ್ತರಣೆಗೊಂಡರೂ ಸಂಕಷ್ಟ ತಪ್ಪಲಿಲ್ಲ!
Team Udayavani, Dec 19, 2022, 5:20 AM IST
ಬಜಪೆ: ಇಲ್ಲಿನ ಪೊಲೀಸ್ ಠಾಣೆಯಿಂದ ಮುರನಗರ ಹಳೆ ವಿಮಾನ ನಿಲ್ದಾಣ ಕಾಂಕ್ರೀಟ್ ರಸ್ತೆಯ ಇಕ್ಕೆಲಗಳಲ್ಲಿ ಹುಡಿಮಣ್ಣು ಹಾಕಿದ ಪರಿಣಾಮ ರಸ್ತೆ ಬದಿಯ ಮನೆಗಳು, ಆಸ್ಪತ್ರೆಯೊಳಗೆ ಧೂಳು ತುಂಬಿಕೊಳ್ಳುವಂತಾಗಿರುವುದು ಮಾತ್ರವಲ್ಲದೆ ರಸ್ತೆಯಲ್ಲಿ ಸಾಗುವ ಲಘು ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ.
ಬಜಪೆ ಪೊಲೀಸ್ ಠಾಣೆಯಿಂದ ಮುರನಗರ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಒಂದು ವಾಹನ ಸಾಗುವಷ್ಟಕ್ಕೆ ಮಾತ್ರ ಕಾಂಕ್ರೀಟ್ ಹಾಕಲಾಗಿತ್ತು. ಇದರಿಂದ ಎದುರು ಬರುವ ವಾಹನಗಳಿಗೆ ದಾರಿ ಕೊಡುವುದು ಲಘು ವಾಹನಗಳಿಗೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಕಾಂಕ್ರೀಟ್ ರಸ್ತೆಯನ್ನು ವಿಸ್ತರಿಸುವಂತೆ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ.
ಬಜಪೆ ಪೇಟೆ ರಸ್ತೆ ಕಾಮಗಾರಿ ಆರಂಭ ವಾಗಿರುವುದರಿಂದ ಪರ್ಯಾಯ ರಸ್ತೆ ಯಾಗಿ ಇದನ್ನು ಬಳಸಲಾಗುತ್ತಿದೆ. ಬಜಪೆ ಪೊರ್ಕೋಡಿ ದ್ವಾರದಿಂದ ಚರ್ಚ್ ವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದರ ಬದಲಿ ಮಾರ್ಗದ ವ್ಯವಸ್ಥೆಗಾಗಿ ವಾಹನ ಗಳಿಗೆ ಕಿನ್ನಿಪದವು ಹಳೆ ವಿಮಾನ ನಿಲ್ದಾಣ, ಮುರನಗರ, ಪೊಲೀಸ್ ಠಾಣೆ ರಸ್ತೆಯಾಗಿ ಬಜಪೆಗೆ ಬರಲು ಸಿದ್ಧತೆಗಳು ನಡೆಯುತ್ತಿದೆ. ಅದಕ್ಕಾಗಿ ಮುರನಗರದಿಂದ -ಬಜಪೆ ಪೊಲೀಸ್ ಠಾಣೆಯ ತನಕ ಎರಡು ವಾಹನಗಳು ಸುಗುಮವಾಗಿ ಸಂಚರಿಸಲು ಅನುಕೂಲವಾಗುವಂತೆ ಕಾಂಕ್ರೀಟ್ ರಸ್ತೆಯ ಎರಡೂ ಬದಿಯಲ್ಲಿ ಮಣ್ಣು ಹಾಕಿ ವಿಸ್ತ ರಿಸಲಾಗಿದೆ.
ಎದುರಾಯ್ತು ಮತ್ತೂಂದು ಸಮಸ್ಯೆ
ರಸ್ತೆ ಕಿರಿದಾಗಿದೆ ಎಂಬ ಸಮಸ್ಯೆ ದೂರವಾದರೂ ಈಗ ರಸ್ತೆ ವಿಸ್ತರಣೆಯಾಗಿದ್ದೇ ತಪ್ಪಾಯಿತು ಎನ್ನುವಂತೆ ಇಲ್ಲಿನ ರಸ್ತೆ ಏನೋ ವಿಸ್ತರಿಸಲಾಯಿತು. ಆದರೆ ಸುತ್ತಮುತ್ತಿಲಿನವರು ನಿತ್ಯವೂ ಧೂಳು ತಿನ್ನಬೇಕಾದ ಪ್ರಸಂಗ ಎದುರಾಗಿದೆ. ವಾಹನ ಸಂಚಾರ ಸುಗುಮವಾಗಲು ರಸ್ತೆ ಬದಿಯಲ್ಲಿ ಮಣ್ಣು ಹಾಕಲಾಗಿದೆ. ಘನ ವಾಹನಗಳು ಈ ರಸ್ತೆಯಲ್ಲಿ ಸಾಗುವ ಸಾಕಷ್ಟು ಧೂಳು ಎಳುತ್ತದೆ. ಇದರಿಂದ ಲಘು ವಾಹನ ಹಾಗೂ ದ್ವಿಚಕ್ರವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
ಚರಂಡಿಯೇ ಇಲ್ಲದ ರಸ್ತೆ
ಬಜಪೆ ಪೊಲೀಸ್ ಠಾಣೆಯಿಂದ ಮುರನಗರ ಹಳೆವಿಮಾನ ನಿಲ್ದಾಣ ಕಾಂಕ್ರೀಟಿ ರಸ್ತೆಯ ಬದಿಗಳಲ್ಲಿ ಚರಂಡಿ ನಿರ್ಮಾಣವಾಗಿಲ್ಲ. ಮಳೆ ನೀರು ಹರಿದು ಹೋಗಲು ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ನಿಲ್ಲುವ ಸಾಧ್ಯತೆಗಳಿವೆ. ಚರಂಡಿ ನಿರ್ಮಾಣಕ್ಕೂ ಕ್ರಮ ತೆಗೆದುಕೊಳ್ಳಬೇಕು.
ಸೂಕ್ತ ಕ್ರಮ ಅಗತ್ಯ
ಬಜಪೆ ಪೊಲೀಸ್ ಠಾಣೆಯಿಂದ ಮುರನಗರ ಹಳೆವಿಮಾನ ನಿಲ್ದಾಣ ಕಾಂಕ್ರೀಟ್ ರಸ್ತೆಯಲ್ಲಿ ಒಂದೇ ವಾಹನ ಸಂಚಾರವಾಗುವಷ್ಟು ಅಗಲವಿದೆ. ಇದನ್ನು ವಿಸ್ತರಿಣೆ ಮಾಡುವ ಬಗ್ಗೆ ಈಗಾಗಲೇ ಮನವಿ ಮಾಡಲಾಗಿದೆ. ಈ ರಸ್ತೆ ಕಂದಾವರ ಗ್ರಾ.ಪಂ.ನ ಕೊಳಂಬೆ ಹಾಗೂ ಬಜಪೆ ಪಟ್ಟಣ ಪಂಚಾಯತ್‌ನ ಗಡಿ ಯಾಗಿರುತ್ತದೆ. ಈಗ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿದ್ದು, ಧೂಳಿನಿಂದವಾಹನ ಸಂಚಾರಕ್ಕೆ ಹಾಗೂ ಅಲ್ಲಿನ ನಿವಾಸಿಗಳಿಗೆ ನಿತ್ಯದ ಜೀವ ನಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಈಗಾಗಲೇ ನನಗೆ ದೂರು ಬಂದಿದೆ ಇದಕ್ಕೆ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
-ಉಮೇಶ್ ಮೂಲ್ಯ, ಅಧ್ಯಕ್ಷರು, ಗ್ರಾ.ಪಂ. ಕಂದಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.