Karnataka ರಾಜ್ಯ ಸರಕಾರ ವಿರುದ್ಧ “ಬೆಂಗಳೂರು ಚಲೋ’: ರುಪ್ಸಾ ಎಚ್ಚರಿಕೆ
Team Udayavani, Aug 12, 2024, 10:33 PM IST
ಮಂಗಳೂರು: ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಅನುದಾನ ರಹಿತ ಖಾಸಗಿ ಶಾಲೆಗಳ ಮೇಲೆ ಸವಾರಿ ನಡೆಸುತ್ತಿದೆ. ಹೈಕೋರ್ಟ್ ಆದೇಶ ಉಲ್ಲಂಘಿಸಿ ವಿನಾಕಾರಣ ಖಾಸಗಿ ಸಂಸ್ಥೆಗಳಿಗೆ ತೊಂದರೆ ನೀಡುತ್ತಿದ್ದು, ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು.
ಆ. 21ರೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಒಂದು ದಿನ ಶಾಲೆ ಮುಚ್ಚಿ ಆಡಳಿತ ಮಂಡಳಿ, ಶಾಲಾ ಸಿಬಂದಿ, ಶಿಕ್ಷಕರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ “ಬೆಂಗಳೂರು ಚಲೋ’ ನಡೆಸಲಾಗುವುದು ಎಂದು ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ(ರುಪ್ಸಾ )ಕರ್ನಾಟಕದ ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ್ ಹೇಳಿದರು.
ಸೋಮವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಆಯುಕ್ತರು ಹೊರಡಿಸಿರುವ ಸುತ್ತೋಲೆಯಲ್ಲಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸುಮಾರು 64 ಮಾಹಿತಿಗಳನ್ನು ಒದಗಿಸಬೇಕಾಗಿದ್ದು, ಇವುಗಳಿಗೆ ಭಾರೀ ಶುಲ್ಕ ಪಾವತಿಸಬೇಕಾಗಿದೆ. ಅದರಲ್ಲೂ ಅಗ್ನಿ ಸುರಕ್ಷೆ ಬಗ್ಗೆ ದೃಢೀಕರಣ, ಕಟ್ಟಡ ಸುರಕ್ಷೆ ದೃಢೀಕರಣ ಹಾಗೂ ಶಾಲಾ ಕಟ್ಟಡವಿರುವ ನಿವೇಶನವು ಶೈಕ್ಷಣಿಕ ಉದ್ದೇಶಕ್ಕೆ ಭೂ ಪರಿವರ್ತನಾ ಆದೇಶ ಇವುಗಳು ಖಾಸಗಿಯವರಿಗೆ ತೀವ್ರ ಸಂಕಷ್ಟ ತಂದಿದೆ. ಅವುಗಳನ್ನು ಸಡಿಲಗೊಳಿಸುವಂತೆ ಹೈಕೋರ್ಟ್ ಆದೇಶ ನೀಡಿದ್ದರೂ ಅದನ್ನು ಸರಕಾರ ತಿರಸ್ಕರಿಸಿದೆ ಎಂದು ಆರೋಪಿಸಿದರು.
ಯಾವುದೇ ಜಾಗದಲ್ಲಿ ಶಾಲೆಗೆ ಕಟ್ಟಡವಿದ್ದರೂ ತೆರಿಗೆ ವಿಧಿಸುವಂತಿಲ್ಲ. ಶಾಲೆಗಳಿಗೆ ವಿನಾಯಿತಿ ನೀಡಲಾಗಿದೆ. ಇದಕ್ಕೆ ಪೂರಕವಾಗಿ ಕೋರ್ಟ್ ಆದೇಶವಿದೆ. ಆದರೂ ವಸೂಲಾತಿ ನಡೆಸಲಾಗುತ್ತಿದೆ. ಮನವಿ ಸಲ್ಲಿಸಿ ಮೇಲಧಿಕಾರಿಗಳು ಒಪ್ಪಿದರೂ ಕಾರ್ಯಗತವಾಗುವುದಿಲ್ಲ. ಅಲ್ಲದೆ ತೆರಿಗೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದ.ಕ., ಉಡುಪಿ ಜಿಲ್ಲಾಧ್ಯಕ್ಷ ಡಾ| ಮಂಜುನಾಥ್ ಎಸ್. ರೇವಣಕರ್ ಮಾತನಾಡಿ, ಸರಕಾರಿ ಶಾಲೆಗಳಿಗೊಂದು ಖಾಸಗಿ ಶಾಲೆಗಳಿಗೊಂದು ನೀತಿಯನ್ನು ಇಲಾಖೆ ಅನುಸರಿಸುತ್ತಿರುವುದು ಸರಿಯಲ್ಲ. ಶಾಲಾ ಕಟ್ಟಡವಿರುವ ನಿವೇಶನದ ಭೂ- ಪರಿವರ್ತನಾ ಆದೇಶದ ಬಗ್ಗೆ ವಿನಾಯಿತಿ ನೀಡಬೇಕು. ಅಲ್ಲದೆ ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ದಾಖಲಿಸಿ ಆಯ್ದ ಮಕ್ಕಳನ್ನು ಟ್ಯೂಷನ್ ನೀಡುತ್ತಿರುವ ಟ್ಯುಟೋರಿಯಲ್ ದಂಧೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ರುಪ್ಸಾ ಸದಸ್ಯರಾದ ರಕ್ಷಿತ್ ಕುಲಾಲ್, ಪವನ್ ಕುಮಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.