ಬೆಂಗಳೂರು-ಕಣ್ಣೂರು ರೈಲು ಫುಲ್ ರಶ್! ಹೆಚ್ಚುವರಿ ಬೋಗಿಗೆ ಮನಸ್ಸು ಮಾಡದ ಇಲಾಖೆ
ವೈಟಿಂಗ್ ಲಿಸ್ಟ್‌ನಲ್ಲಿ ನೂರಾರು ಪ್ರಯಾಣಿಕರು
Team Udayavani, Mar 21, 2022, 7:20 AM IST
ಮಂಗಳೂರು: ಬೆಂಗಳೂರು -ಮಂಗಳೂರು-ಕಣ್ಣೂರು ರೈಲು (ನಂ. 16511/12) ದಿನಂಪ್ರತಿ ಭರ್ತಿಯಾಗಿ ಸಂಚರಿಸುತ್ತಿದ್ದು ಪ್ರತೀ ದಿನ 100ಕ್ಕೂ ಅಧಿಕ ಪ್ರಯಾಣಿಕರು ವೈಟಿಂಗ್ ಲಿಸ್ಟ್‌ನಲ್ಲಿ ಇರುತ್ತಾರೆ. ಆದರೆ ಇಲಾಖೆಯು ಹೆಚ್ಚುವರಿ ಬೋಗಿ ಸೇರ್ಪಡೆಗೆ ಮನಸ್ಸು ಮಾಡಿಲ್ಲ.
ಪ್ರಸ್ತುತ ವಾರದ ದಿನಗಳಲ್ಲಿ ಸ್ಲೀಪರ್ ದರ್ಜೆ ಬೋಗಿಗಳಲ್ಲಿ ಬೆಂಗಳೂರಿನಿಂದ ಪ್ರತೀದಿನ 80ರಿಂದ 85 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿರುತ್ತಾರೆ. ವಾರಾಂತ್ಯ ದಿನಗಳಲ್ಲಿ 150 ಮೀರುತ್ತಿದೆ. ಅದೇ ರೀತಿ 3 ಟೈರ್ ಎಸಿ ದರ್ಜೆಯಲ್ಲಿ ವಾರದ ದಿನಗಳಲ್ಲಿ 20ಕ್ಕೂ ಅಧಿಕ ಹಾಗೂ ವಾರಾಂತ್ಯ ದಿನಗಳಲ್ಲಿ 50 ಮೀರುತ್ತಿದೆ. ಮಾ. 18ರಂದು ಬೆಂಗಳೂರಿನಿಂದ 143 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿದ್ದರು. ಮಾ. 20ಕ್ಕೆ ಈಗಾಗಲೇ 75 ಮಂದಿ ವೈಟಿಂಗ್
ಲಿಸ್ಟ್‌ನಲ್ಲಿದ್ದು 150 ಮೀರುವ ಸಾಧ್ಯತೆಗಳಿವೆ. ಮಂಗಳೂರಿನಿಂದ ಶನಿವಾರ 44 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿದ್ದಾರೆ. ಸೋಮವಾರ ಈಗಾಗಲೇ 49 ಮಂದಿ ವೈಟಿಂಗ್ ಲಿಸ್ಟ್‌ನಲ್ಲಿದ್ದು ಇದು ಇನ್ನೂ ಹೆಚ್ಚಾಗಲಿದೆ.
ಪ್ರಸ್ತುತ ಈ ರೈಲು ಸ್ಲೀಪರ್ 7, ಸಾಮಾನ್ಯ ದರ್ಜೆಯ 4, ಎಸ್‌ಎಲ್‌ಆರ್ 2, 2ಟೈರ್ ಎಸಿ 1 ಹಾಗೂ 3ಟೈರ್ ಎಸಿ 2 ಬೋಗಿಗಳನ್ನು ಒಳಗೊಂಡಿದೆ. ಒಟ್ಟು 1,200 ಪ್ರಯಾಣಿಕರಿಗೆ ಸಂಚರಿಸಲು ಅವಕಾಶವಿದೆ. 2 ಸ್ಲೀಪರ್ ದರ್ಜೆಯ ಹಾಗೂ 1 ಎಸಿ ದರ್ಜೆಯ ಬೋಗಿಯನ್ನು ಸೇರ್ಪಡೆಗೊಳಿಸಬೇಕು ಎಂದು ಈಗಾಗಲೇ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯು ನೈಋತ್ಯ ರೈಲ್ವೇಯ ಬೆಂಗಳೂರು ವಿಭಾಗೀಯ ಪ್ರಬಂಧಕರಿಗೆ ಪತ್ರಬರೆದು ವಿನಂತಿಸಿದೆ. ಒಂದು ಸ್ಲೀಪರ್ ಬೋಗಿ 72 ಮಂದಿ ಹಾಗೂ 3 ಟೈರ್‌ಎಸಿ ಬೋಗಿಯಲ್ಲಿ 72 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಬೋಗಿಗಳು ಸೇರ್ಪಡೆಯಾದರೆ ಹೆಚ್ಚುವರಿಯಾಗಿ ಸುಮಾರು 200 ಪ್ರಯಾಣಿಕರಿಗೆ ಅವಕಾಶವಾಗಲಿದೆ. ಎಪ್ರಿಲ್‌ನಲ್ಲಿ ರಜೆ ಪ್ರಾರಂಭವಾಗುವುದರಿಂದ ದಟ್ಟಣೆ ಇನ್ನಷ್ಟು ಹೆಚ್ಚಾಗಲಿದೆ.
ಪೂರಕ ವೇಳಾಪಟ್ಟಿ
ಕಣ್ಣೂರು-ಮಂಗಳೂರು- ಬೆಂಗಳೂರು ರೈಲು ರಾತ್ರಿ ಸಂಚರಿಸುತ್ತದೆ. ಮಂಗಳೂರು ಸೆಂಟ್ರಲ್ ಮೂಲಕ ಸಂಚರಿಸುತ್ತಿರುವುದು ಹಾಗೂ ಇದರ ವೇಳಾಪಟ್ಟಿ ಸೂಕ್ತವಾಗಿರುವುದು ಹೆಚ್ಚಿನ ಬೇಡಿಕೆಗೆ ಕಾರಣ. ಬೆಂಗಳೂರಿನಿಂದ ರಾತ್ರಿ 9.30ಕ್ಕೆ ಹೊರಟು ಬೆಳಗ್ಗೆ 7.30ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬರುತ್ತದೆ. 10.10ಕ್ಕೆ ಕಣ್ಣೂರು ತಲುತ್ತದೆ. ಇದೇ ರೀತಿ ಸಂಜೆ 5.05ಕ್ಕೆ ಕಣ್ಣೂರಿನಿಂದ ಹೊರಟು ರಾತ್ರಿ 7.50ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬಂದು 8.10ಕ್ಕೆ ಹೊರಟು ಬೆಳಗ್ಗೆ 6.50ಕ್ಕೆ ಬೆಂಗಳೂರು ತಲುಪುತ್ತದೆ.
ಕಣ್ಣೂರು-ಬೆಂಗಳೂರು ರೈಲು ನೈಋತ್ಯ ಹಾಗೂ ದಕ್ಷಿಣ ರೈಲ್ವೇ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವುದರಿಂದ ಎರಡೂ ವಲಯಗಳು ಸೇರಿ ಹೆಚ್ಚುವರಿ ಬೋಗಿ ಸೇರ್ಪಡೆಯ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
– ಅನೀಶ್ ಹೆಗಡೆ, ಮುಖ್ಯ
ಪಿಆರ್‌ಒ, ನೈಋತ್ಯ ರೈಲ್ವೇ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.