ಡಿವೈಡರ್ನ ಕಂಬಗಳಲ್ಲಿ ನಿಯಮ ಮೀರಿ ಬ್ಯಾನರ್, ಫ್ಲೆಕ್ಸ್ ಅಳವಡಿಕೆ!
Team Udayavani, Feb 5, 2018, 12:08 PM IST
ನಗರ : ರಸ್ತೆ ವಿಭಾಜಕದಲ್ಲಿರುವ ವಿದ್ಯುತ್ ಕಂಬಕ್ಕೆ ಫ್ಲೆಕ್ಸ್, ಜಾಹೀರಾತು ಫಲಕ, ಬ್ಯಾನರ್ ಅಳವಡಿ ಸಲು ಅನುಮತಿಯಿಲ್ಲ. ಆದರೆ, ಶಾಸಕರ ಭಾವಚಿತ್ರವಿರುವ ಬ್ಯಾನರ್ ಇದೇ ವಿದ್ಯುತ್ ಕಂಬದಲ್ಲಿ ರಾರಾಜಿಸುತ್ತಿವೆ!
ಪಟ್ಟಣದ ಅಂದಗೆಡಿಸುವ ವ್ಯವಸ್ಥೆಗಳಲ್ಲಿ ಡಿವೈಡರ್ ಫಲಕ, ಬ್ಯಾನರ್ಗಳಿಗೆ ಅಗ್ರಸ್ಥಾನ. ಇದು ದ್ವಿಚಕ್ರ ವಾಹನ ಸವಾರರ ಪ್ರಾಣ ಹಿಸುಕುವ ಕೆಲಸವೂ ಹೌದು. ತುರ್ತು ಸಂದರ್ಭ ವಿದ್ಯುತ್ ಲೈಟ್ ಕೈಕೊಟ್ಟಾಗ ನಡೆಸುವ ಕಾಮಗಾರಿಗೂ ಅಡ್ಡಿ. ಈ ಎಲ್ಲ ಕಾರಣಕ್ಕೆ ನಗರಸಭೆ ವ್ಯಾಪ್ತಿಯ ಯಾವುದೇ ಡಿವೈಡರ್ನ ವಿದ್ಯುತ್ ಕಂಬದಲ್ಲಿ ಫಲಕ, ಬ್ಯಾನರ್ ಹಾಕುವಂತಿಲ್ಲ. ಇದು ನಗರಸಭೆಯ ಕಾನೂನು.
ಇದುವರೆಗೆ ದೊಡ್ಡ ಸಂಸ್ಥೆಗಳ, ಕಾರ್ಯಕ್ರಮಗಳ ಬ್ಯಾನರ್ಗಳಿಗಷ್ಟೇ ಡಿವೈಡರ್ನ ಕಂಬ ಮೀಸಲಾಗಿತ್ತು. ಈಗ ಶಾಸಕಿ ಭಾವಚಿತ್ರವಿರುವ ಬ್ಯಾನರ್ ಹಾಕಿದ್ದಾರೆ.
ಪುತ್ತೂರು ಪೇಟೆಯ ಕಲ್ಲಾರೆಯಿಂದ ದರ್ಬೆ ನಡುವಿನ ರಾಜಬೀದಿಯಲ್ಲಿ ಡಿವೈಡರ್ ಅಳವಡಿಸಲಾಗಿದೆ. ಇಕ್ಕಟ್ಟಾದ ಪುತ್ತೂರಿನ ರಸ್ತೆಗಳಿಗೆ ಮೊದಮೊದಲು ಡಿವೈಡರ್ ಹೊರೆ ಎನಿಸಿತ್ತು. ಆದರೆ, ಲಂಗುಲಗಾಮಿಲ್ಲದೇ ಅಡ್ಡಾಡುವ ದ್ವಿಚಕ್ರ ವಾಹನ, ರಿಕ್ಷಾಗಳಿಗೆ ಕಡಿವಾಣ ಹಾಕಲು ಇದು ಅನುಕೂಲವೇ ಆಯಿತು. ಪೇಟೆಯಲ್ಲಿ ನಡೆಯುವ ಅಪಘಾತಗಳಿಗೆ ದೊಡ್ಡ ಪ್ರಮಾಣದಲ್ಲಿ ಬ್ರೇಕ್ ಬಿದ್ದಿತು. ಆದರೆ ಇದೇ ಡಿವೈಡರ್ ಅಪಘಾತಗಳಿಗೆ ಆಹ್ವಾನ ನೀಡುವಂತಿದೆ.
ಬ್ಯಾನರ್ ಹಾವಳಿ?
ಶಾಸಕಿ ಶಕುಂತಳಾ ಶೆಟ್ಟಿ ಅವರು ಶನಿವಾರವಷ್ಟೇ ವೈಫೈ ಉದ್ಘಾಟಿಸಿದ್ದಾರೆ. ಜಿಲ್ಲೆಯಲ್ಲೇ ವಿನೂತನ ಎನಿಸಿ ದ ಈ ಕಾರ್ಯಕ್ರಮಕ್ಕೆ ಶುಭ ಕೋರುವ ಬ್ಯಾನರನ್ನು ಡಿವೈಡರ್ ನಡುವಿನ ವಿದ್ಯುತ್ ಕಂಬಕ್ಕೆ ನಗರಸಭೆ ಅನುಮತಿ ಪಡೆಯದೆಯೇ ಅಕ್ರಮವಾಗಿ ಹಾಕಲಾಗಿದೆ.
ಏಕೆ ಅಪಾಯ?
. ಬ್ಯಾನರ್ ಓಲಾಡುವ ರಭಸಕ್ಕೆ ದ್ವಿಚಕ್ರ ವಾಹನ ಸವಾರರ ಮುಖಕ್ಕೆ ಬಡಿಯುವ ಸಂಭವ.
.ಸವಾರರು ಬ್ಯಾನರ್ ಓದುತ್ತಾ ಸಾಗಿದರೆ, ಚಾಲನೆ ಕಡೆ ಗಮನ ತಪ್ಪುವ ಸಂಭವ.
.ಬ್ಯಾನರ್ಗಳು ರಸ್ತೆ ಮಾತ್ರವಲ್ಲ, ಪೇಟೆಯ ಅಂದವನ್ನೂ ಹಾಳು ಮಾಡುತ್ತವೆ.
.ಮಾಲಿನ್ಯಕ್ಕೆ ಪ್ರತ್ಯಕ್ಷ ದಾರಿ.
ತೆರವು ಪರೋಕ್ಷ ಹೊರೆ
ಡಿವೈಡರ್ನ ವಿದ್ಯುತ್ ಕಂಬದಲ್ಲಿ ಬ್ಯಾನರ್ ಹಾಕುವಂತಿಲ್ಲ. ಅವುಗಳನ್ನು ತೆರವು ಮಾಡುವುದೇ ನಗರಸಭೆಗೆ ಪ್ರಯಾಸದ ಕೆಲಸವಾಗಿದೆ. ಇಬ್ಬರು ಕೂಲಿ ಕೆಲಸಗಾರರು, ವಾಹನ, ಪೆಟ್ರೋಲ್ ಎಂದೆಲ್ಲ ಖರ್ಚು ಮಾಡಬೇಕು. ಇದು ಪರೋಕ್ಷವಾಗಿ ಜನರಿಗೆ ಹೊರೆ. ಬದಲಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಬ್ಯಾನರ್ ಹಾಕುವ ಬಗ್ಗೆ ಜನರಲ್ಲಿ ಅರಿವು ಮೂಡಬೇಕು.
– ರೂಪಾ ಶೆಟ್ಟಿ,
ನಗರಸಭೆ ಪೌರಾಯುಕ್ತೆ, ಪುತ್ತೂರು
ಗಣೇಶ್ ಎನ್. ಕಲ್ಲರ್ಪೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.