Bantwal: ಹಳೆಯ ವೈಷಮ್ಯದಿಂದ ಸ್ನೇಹಿತನ ಕೊಲೆ ಯತ್ನ, ಒಂದು ಕೈ ತುಂಡು
Team Udayavani, May 21, 2023, 5:31 PM IST
ಬಂಟ್ವಾಳ: ಐದು ವರ್ಷದ ಹಿಂದಿನ ಮದುವೆ ಪ್ರಸ್ತಾಪ ವಿಚಾರವನ್ನು ಇಟ್ಟುಕೊಂಡು ವ್ಯಕ್ತಿಯೋರ್ವನನ್ನು ಕೊಲೆ ಮಾಡಲು ಯತ್ನಿಸಿ, ಆತ ಕೈ ಕಡಿದು ತುಂಡು ಮಾಡಿದ ಘಟನೆ ಬಂಟ್ವಾಳ ಕಸಬಾ ಗ್ರಾಮದ ಕೆಳಗಿನ ಮಂಡಾಡಿ ಎಂಬಲ್ಲಿ ನಡೆದಿದೆ.
ಶಿವರಾಜ್ ಕುಲಾಲ್ ಎಂಬಾತನ ಮೇಲೆ ಕೊಲೆ ಯತ್ನ ಮಾಡಲಾಗಿದೆ. ಆತನ ಸ್ನೇಹಿತ ಸಂತೋಷ್ ಎಂಬಾತ ಆರೋಪಿಯಾಗಿದ್ದು ಪರಾರಿಯಾಗಿದ್ದಾನೆ.
ಶಿವರಾಜ್ ಕುಲಾಲ್ ಮಂಗಳೂರಿನ ಮೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚಿಗೆ ಗುತ್ತಿಗೆ ಅವಧಿ ಮುಗಿದ ಕಾರಣ ಮನೆಯಲ್ಲೇ ಇದ್ದರು. ಆದರೆ ಮೇ. 21 ರಂದು ರಾತ್ರಿ ವೇಳೆ ಈತನ ಮೊಬೈಲ್ ಗೆ ಅನಾಮಧೇಯ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿ ಯಾರು ಎಂದು ಕೇಳಿದಾಗ ಆ ಕಡೆಯಿಂದ ನಾನು ಸಂತೋಷ ಎಂದು ಹೇಳಿದ್ದು, ಆತನು ಶಿವರಾಜ್ ಕುಲಾಲ್ ಎಂಬಾತನ ಪರಿಚಯದವನಾಗಿದ್ದು, ಏನು ವಿಚಾರ ಎಂದು ಕೇಳಿದಾಗ, ನಿನ್ನಲ್ಲಿ ಮಾತನಾಡಲು ಇದೆ, ಎಂದು ಹೇಳಿದಕ್ಕೆ ಶಿವರಾಜ್ ಕುಲಾಲ್ ಅವರು ನಾನು ಈಗ ಬರಲು ಆಗುವುದಿಲ್ಲ ಬೆಳಿಗ್ಗೆ ಬರುತ್ತೇನೆ ಎಂದು ಹೇಳಿದ್ದಾರೆ.
ಅದಕ್ಕೆ ಆತನು ಇಲ್ಲ ಈಗಲೇ ಬಾ ಎಂದು ಹೇಳಿದ್ದು, ಆಗ ಶಿವರಾಜ್ ಅರಬ್ಬಿ ಗುಡ್ಡೆಯ ಗಣೇಶ ಸ್ಟೋರ ಅಂಗಡಿ ಹೋಗಿದ್ದಾನೆ. ಅಲ್ಲಿ ಸಂತೋಷ್, ಅಕ್ಕ ಸಾರಿಕಾಳ ವಿಚಾರವನ್ನು ತೆಗೆದು ಮಾತನಾಡಲು ಪ್ರಾರಂಭಿಸಿದಾಗ, ಶಿವರಾಜ್ ಕುಲಾಲ್ ಐದು ವರ್ಷಗಳ ಹಿಂದಿನ ವಿಚಾರವಲ್ಲ ಎಂದು ಹೇಳಿದ್ದು. ಆಗ ಸಂತೋಷನು ನನ್ನ ಅಕ್ಕಳನ್ನು ಸಾಕಲು ಸಾಧ್ಯವಿದೆಯೇ ಎಂದು ಹೇಳಿ ಕೈಯಲ್ಲಿದ್ದ ಹರಿತವಾದ ಸಣ್ಣ ತಲವಾರುನಿಂದ ಶಿವರಾಜ್ ಕುಲಾಲ್ ಕುತ್ತಿಗೆಯ ಎಡಬದಿಗೆ ಬಲವಾಗಿ ಬೀಸಿದ ಪರಿಣಾಮ ಕುತ್ತಿಗೆಯ ಎಡಬದಿಗೆ ತಾಗಿ ಗಾಯವಾಗಿದೆ.
ಮತ್ತೊಮ್ಮೆ ಬಲವಾಗಿ ಕಡಿಯಲು ಬಂದಾಗ ಶಿವರಾಜ್ ಎಡಕೈಯನ್ನು ಅಡ್ಡವಾಗಿ ಹಿಡಿದಾಗ ಎಡಕೈ ಮಣಿಗಂಟಿಗೆ ಬಿದ್ದು, ತುಂಡಾಗಿ ನೆಲಕ್ಕೆ ಬಿದ್ದಿದೆ.
ಇದನ್ನು ಕಂಡು ಆರೋಪಿ ಸಂತೋಷ ಅಲ್ಲಿಂದ ಓಡಿ ಹೋಗಿದ್ದಾನೆ. ನಂತರ ಕರೆ ಮಾಡಿ ಗೆಳೆಯ ಧರ್ಮೇಶ ಹಾಗೂ ತಮ್ಮನ್ನು ಸ್ಥಳಕ್ಕೆ ಕರೆಯಿಸಿ, ಅವರ ಸಹಾಯದಿಂದ ಚಿಕಿತ್ಸೆ ಬಗ್ಗೆ ಬಂಟ್ವಾಳ ಸರಕಾರಿ ಆಸ್ವತ್ರೆ ದಾಖಲಾಗಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕ್ಸಿತೆಗಾಗಿ ಮಂಗಳೂರಿನ ವೆನಲಾಕ್ ಆಸ್ವತ್ರೆ ತೆರಳಿದ್ದು, ನಂತರ ದೇರಳ ಕಟ್ಟೆ ಯೆನೋಪಾಯ ಆಸ್ವತ್ರೆಗೆ ದಾಖಲಾಗಿದ್ದಾರೆ.
ಹಿನ್ನೆಲೆ: ಶಿವರಾಜ್ ಕುಲಾಲ್ 5 ವರ್ಷಗಳ ಹಿಂದೆ ಆರೋಪಿ ಸಂತೋಷನ ಅಕ್ಕಳನ್ನು ಮದುವೆಯಾಗುವುದಾಗಿ ಹೇಳಿದ್ದ ಆದರೆ ಅದಕ್ಕೆ ಮನೆಯವರು ಒಪ್ಪದಿದ್ದಾಗ ಶಿವರಾಜ್ ಕುಲಾಲ್ ಆ ವಿಚಾರವನ್ನು ಅಲ್ಲಿಗೆ ಬಿಟ್ಟಿದ್ದಾರೆ. ಈ ವಿಚಾರವನ್ನು ದ್ವೇಷವಾಗಿ ಇಟ್ಟುಕೊಂಡು ಶಿವರಾಜ್ ಕುಲಾಲ್ ಮನೆಯಿಂದ ಹೊರಗೆ ಕರೆದು ಕೊಲೆ ಮಾಡುವ ಉದ್ದೇಶದಿಂದ ತಲೆಗೆ ತಲವಾರು ಬೀಸಿ ಹಾಗೂ ಕೈಯನ್ನು ಕಡಿದು ತುಂಡು ಮಾಡಿದ್ದಾನೆ.
ಸಂತೋಷನ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.