ಬಂಟ್ವಾಳ: ಶೇ. 80.31 ಮತದಾನ
ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ: ಭದ್ರತ ಕೊಠಡಿಯಲ್ಲಿ ಇವಿಎಂ ಭದ್ರ
Team Udayavani, Apr 20, 2019, 6:00 AM IST
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಗುರುವಾರ ಮೊಡಂಕಾಪಿನಲ್ಲಿರುವ ಬಂಟ್ವಾಳ ಕ್ಷೇತ್ರದ ಡಿಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಂಟ್ವಾಳ: ಲೋಕಸಭೆ ಚುನಾವಣೆಯಲ್ಲಿ ಬಂಟ್ವಾಳ ತಾಲೂಕಿನ ಒಟ್ಟು 2,22,161 ಮತದಾರರಲ್ಲಿ 1,78,421 ಮಂದಿ ಮತದಾನ ಮಾಡಿದ್ದು, ಶೇ. 80.31 ಮತ ಚಲಾವಣೆ ಆಗಿದೆ. ಇದರಲ್ಲಿ 87,142 ಪುರುಷರು, 91,279 ಮಹಿಳೆಯರು. ಮತದಾರರಲ್ಲಿ 5 ಮಂದಿ ಇತರರಿದ್ದು, ಅವರು ಮತ ಚಲಾಯಿಸಿಲ್ಲ. ಪುರುಷ ಮತದಾರರು ಶೇ. 79.69, ಮಹಿಳಾ ಮತದಾರರು ಶೇ. 80.91 ಮತ ಚಲಾಯಿಸಿದಂತಾಗಿದ್ದು, ಇಲ್ಲಿಯೂ ಮಹಿಳೆಯರೇ ಮುಂದಿದ್ದಾರೆ.
ಗರಿಷ್ಠ-ಕನಿಷ್ಠ
ಪಿಲಾತಬೆಟ್ಟು ಗ್ರಾಮ ಸರಕಾರಿ ಹಿ.ಪ್ರಾ.ಶಾಲೆ ಮತಗಟ್ಟೆ ಸಂಖ್ಯೆ 17ರಲ್ಲಿ ಗರಿಷ್ಠ ಶೇ. 87.63 ಮತದಾನ ಆಗಿದೆ. ಕನ್ಯಾನ ಗ್ರಾಮ ಬಂಡಿತಡ್ಕ ಹಿ.ಪ್ರಾ. ಶಾಲೆಯಲ್ಲಿ ಕನಿಷ್ಠ ಶೇ. 51.52 ಮತದಾನ ಆಗಿದೆ. ಒಟ್ಟು 249 ಮತಗಟ್ಟೆಗಳಲ್ಲಿ 1,166 ಚುನಾವಣಾಧಿಕಾರಿಗಳು ಕರ್ತವ್ಯ ನಿರ್ವ ಹಿಸಿದ್ದರು. 85 ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ, 35 ಮತಗಟ್ಟೆಗಳಿಗೆ ವೀಕ್ಷಕರ ನೇಮಕ, 17 ಮತಗಟ್ಟೆಗಳಲ್ಲಿ ನೇರ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. 15 ಮತಗಟ್ಟೆ ಗಳಲ್ಲಿ ವೀಡಿಯೋ ಗ್ರಾಫಿಂಗ್ ವ್ಯವಸ್ಥೆ ಮಾಡಲಾಗಿದ್ದು, ಮತದಾನ ಶಾಂತಿಯುತವಾಗಿತ್ತು. ಜಿ.ಪಂ. ಸಿಇಒ ಡಾ| ಸೆಲ್ವಮಣಿ ಮಾರ್ಗದರ್ಶನದಲ್ಲಿ ಬಂಟ್ವಾಳ ತಹಶೀಲ್ದಾರ್ ಸಣ್ಣರಂಗಯ್ಯ, ತಾ.ಪಂ.ಇಒ ರಾಜಣ್ಣ ನೇತೃತ್ವದಲ್ಲಿ ಚುನಾವಣ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು. ದ.ಕ. ಲೋಕಸಭಾ ಚುನಾವಣೆಯ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಗುರುವಾರ ಮೊಡಂಕಾಪಿನಲ್ಲಿರುವ ಬಂಟ್ವಾಳ ಕ್ಷೇತ್ರದ ಡಿಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಎ.ಆರ್.ಒ ಮಹೇಶ್, ತಹಶಿಲ್ದಾರ್ ಸಣ್ಣರಂಗಯ್ಯ ಮೊದಲಾದವರಿದ್ದರು.
ಇವಿಎಂ ಭದ್ರತ ಕೊಠಡಿಗೆ
ಮೊಡಂಕಾಪು ಇನ್ಫೆಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿಮಸ್ಟರಿಂಗ್ ಬಳಿಕ ಎಲ್ಲ ಇವಿಎಂ ಯಂತ್ರಗಳನ್ನು ಎನ್‌ಐಟಿಕೆ ಭದ್ರತ ಕೊಠಡಿಗೆ ಸಾಗಿಸಲಾಗಿದೆ.
ಎಸ್.ಸಿ. ಮಹೇಶ್
ಚುನಾವಣಾಧಿಕಾರಿ, ಬಂಟ್ವಾಳ ತಾ|
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.