ಬಂಟ್ವಾಳ ವಿಧಾನಸಭಾ ಕ್ಷೇತ್ರ: ಮತ್ತೆ ಬಂಟರ ಸ್ಪರ್ಧೆಗೆ ಸಜ್ಜು ?


Team Udayavani, Apr 12, 2018, 2:26 PM IST

12-April-14.jpg

ಮಂಗಳೂರು: ರಾಜ್ಯದಲ್ಲಿಯೇ ಅತ್ಯಂತ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಎಂದು ಗುರುತಿಸಲ್ಪಟ್ಟಿರುವ ಬಂಟ್ವಾಳ ದಲ್ಲಿ ಈ ಬಾರಿಯೂ ಬಂಟ ಸಮಾಜದ ಅಭ್ಯರ್ಥಿಗಳ ನಡುವಿನ ಕದನಕ್ಕೆ ವೇದಿಕೆ ಸಿದ್ಧಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಬಿ. ರಮಾನಾಥ ರೈ ಹಾಗೂ ಬಿಜೆಪಿಯಿಂದ ರಾಜೇಶ್‌ ನಾಯ್ಕ ಸ್ಪರ್ಧಿಸುವುದು ಬಹುತೇಕ ಖಚಿತಗೊಂಡಿದೆ.

ಇಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದರೂ ಕಳೆದ ಹಲವು ಅವಧಿಯಿಂದ ಕಾಂಗ್ರೆಸ್‌ ಅಥವಾ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ. ಮತ್ತೂಂದೆಡೆ 1989ರಿಂದ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಬಂಟ ಸಮಾಜದವರೇ ಸ್ಪರ್ಧಿಸುತ್ತಿರುವುದರಿಂದ ಅವರ ಮಧ್ಯೆಯೇ ನೇರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಹಿಂದಿನ ಅವಧಿಯಂತೆ ಈ ಬಾರಿಯೂ ಒಂದೇ ಸಮುದಾಯದ ಅಭ್ಯರ್ಥಿಗಳ ಮಧ್ಯೆ ಸ್ಪರ್ಧೆ ಏರ್ಪಡುವ ಲಕ್ಷಣಗಳು ಗೋಚರಿಸುತ್ತಿವೆ.

ಬಂಟ್ವಾಳ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯವೇ ಪ್ರಬಲವಾಗಿದ್ದು, ಬಿಲ್ಲವ ಸಮುದಾಯ 2ನೇ ಸ್ಥಾನದಲ್ಲಿದೆ. ಉಳಿದಂತೆ ಬಂಟರು, ಕುಲಾಲರು, ಕ್ರೈಸ್ತರು ಹೀಗೆ ಬೇರೆ ಬೇರೆ ಸಮುದಾಯಗಳ ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಂದು ಸಮುದಾಯವನ್ನು ಬೆಂಬಲಿಸುವುದಕ್ಕಿಂತಲೂ ಪಕ್ಷವನ್ನು ಬೆಂಬಲಿಸುವವರೇ ಹೆಚ್ಚಿದ್ದಾರೆ.

ಬಂಟ್ವಾಳದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಜತೆಗೆ ಜೆಡಿಎಸ್‌, ಎಸ್‌ಡಿಪಿಐ ಕೂಡ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದೆ. ಎಸ್‌ಡಿಪಿಐ ಪಕ್ಷದಿಂದ ರಿಯಾಝ್ ಫರಂಗಿಪೇಟೆ ಅವರು ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದು, ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ. ಜೆಡಿಎಸ್‌ ನಿಂದ ಜಿಲ್ಲಾಧ್ಯಕ್ಷ ಮೊಹಮ್ಮದ್‌ ಕುಂಞಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಉಳಿದ ಪಕ್ಷಗಳು, ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸುವ ಕುರಿತು ಅಂತಿಮಗೊಂಡಿಲ್ಲ.

ಬಂಟ್ವಾಳ ಕ್ಷೇತ್ರ ಹೀಗಿದೆ
ಸುಮಾರು 59 ಗ್ರಾಮಗಳಲ್ಲಿ ವಿಸ್ತರಿಸಿಕೊಂಡಿರುವ ಬಂಟ್ವಾಳ ವಿಧಾನಸಭಾ ಕ್ಷೇತ್ರವು 246 ಮತಗಟ್ಟೆಗಳನ್ನು ಹೊಂದಿದೆ. ಜತೆಗೆ ಮೂರು ಉಪವಿಭಾಗಗಳಿವೆ. ಕ್ಷೇತ್ರದಲ್ಲಿ ಒಟ್ಟು 2,16,027 ಮತದಾರರಿದ್ದು, ಈ ಪೈಕಿ 1,07,233 ಪುರುಷ ಹಾಗೂ 1,08,794 ಮಹಿಳಾ ಮತದಾರರು.

ಬಂಟರ ಮಧ್ಯೆ ಸ್ಪರ್ಧೆ!
1989ರಿಂದ ಬಂಟ್ವಾಳದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಬಂಟರೇ ಸ್ಪರ್ಧಿಸುತ್ತಿದ್ದಾರೆ. ವಿಶೇಷ ಎಂದರೆ 1985ರ ಬಳಿಕದ ಎಲ್ಲ ಏಳು ಅವಧಿಗಳಲ್ಲೂ ಕಾಂಗ್ರೆಸ್‌ನಿಂದ ರಮಾನಾಥ ರೈ ಅವರೇ ಸ್ಪರ್ಧಿಸುತ್ತಾ ಬಂದಿದ್ದಾರೆ. ಆದರೆ 1985ರಲ್ಲಿ ರೈ ಅವರಿಗೆ ಎದುರಾಳಿಯಾಗಿ ಬಿಜೆಪಿಯಿಂದ ಎನ್‌. ಶಿವರಾವ್‌ ಸ್ಪರ್ಧಿಸಿದ್ದರು.

1989ರ ಬಳಿಕ ರೈ ಅವರ ಎದುರಾಳಿಯಾಗಿ ಬಿಜೆಪಿಯಿಂದ 1989ರಲ್ಲಿ ಎಚ್‌. ನಾರಾಯಣ ರೈ, 1994 ಹಾಗೂ 1999ರಲ್ಲಿ ಶಕುಂತಳಾ ಟಿ. ಶೆಟ್ಟಿ, 2004 ಹಾಗೂ 2008ರಲ್ಲಿ ಬಿ. ನಾಗರಾಜ ಶೆಟ್ಟಿ, 2013ರಲ್ಲಿ ರಾಜೇಶ್‌ ನಾಯ್ಕ ಅವರು ಸ್ಪರ್ಧಿಸಿದ್ದರು. ಇದರಲ್ಲಿ 2004ರಲ್ಲಿ ಮಾತ್ರ ಬಿ. ನಾಗರಾಜ ಶೆಟ್ಟಿ ಗೆದ್ದಿದ್ದು, ಉಳಿದ ಎಲ್ಲ ಸಂದರ್ಭಗಳಲ್ಲೂ ರಮಾನಾಥ ರೈ ಅವರೇ ವಿಜಯಿಯಾಗಿದ್ದಾರೆ.

ಶಾಸಕರಿವರು
1978 – ಬಿ.ಎ. ಮೊದಿನ್‌ (ಕಾಂಗ್ರೆಸ್‌(ಐ), 1983 – ಎನ್‌. ಶಿವರಾವ್‌ (ಬಿಜೆಪಿ), 1985 – ಬಿ. ರಮಾನಾಥ ರೈ (ಕಾಂಗ್ರೆಸ್‌), 1989 – ಬಿ. ರಮಾನಾಥ ರೈ (ಕಾಂಗ್ರೆಸ್‌), 1994 – ಬಿ. ರಮಾನಾಥ ರೈ (ಕಾಂಗ್ರೆಸ್‌), 1999 – ಬಿ. ರಮಾನಾಥ ರೈ (ಕಾಂಗ್ರೆಸ್‌), 2004- ನಾಗಾರಾಜ ಶೆಟ್ಟಿ ಬಿ. (ಬಿಜೆಪಿ), 2008- ಬಿ. ರಮಾನಾಥ ರೈ (ಕಾಂಗ್ರೆಸ್‌), 2013 – ಬಿ. ರಮಾನಾಥ ರೈ(ಕಾಂಗ್ರೆಸ್‌).

ಇಲ್ಲಿನ ಶಾಸಕರು ಸಚಿವರು!
ಬಂಟ್ವಾಳ ಕ್ಷೇತ್ರದಲ್ಲಿ ಯಾವುದೇ ಪಕ್ಷ ಗೆದ್ದು, ರಾಜ್ಯದಲ್ಲಿ ಅವರ ಸರಕಾರ ಬಂದರೆ ಸಚಿವರಾಗುತ್ತಾರೆ ಎಂಬ ಮಾತಿದೆ. ಅದಕ್ಕೆ ಪೂರಕವೆಂಬಂತೆ ರಮಾನಾಥ ರೈ 1992ರಲ್ಲಿ ಗೃಹ ರಾಜ್ಯ ಸಚಿವರಾಗಿ, 1994ರಲ್ಲಿ ಅಬಕಾರಿ ಸಚಿವರಾಗಿ, 1999 ರಲ್ಲಿ ಬಂದರು, ಮೀನುಗಾರಿಕೆ ಸಚಿವರಾಗಿ, 2002ರಲ್ಲಿ ಸಾರಿಗೆ ಸಚಿವರಾಗಿ, 2013ರಿಂದ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. 2006ರಲ್ಲಿ ಬಿ. ನಾಗರಾಜ ಶೆಟ್ಟಿ ಅವರು ಮೀನುಗಾರಿಕೆ, ಮುಜರಾಯಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1978ರಲ್ಲಿ ಶಾಸಕರಾಗಿದ್ದ ಬಿ.ಎ. ಮೊದಿನ್‌ ಅವರು ಕೂಡ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಬಲ ಸ್ಪರ್ಧೆ ಸಾಧ್ಯತೆ?
ಪ್ರಸ್ತುತ ಬಂಟ್ವಾಳ ರಾಜಕೀಯ ಲೆಕ್ಕಾಚಾರಗಳನ್ನು ಗಮನಿಸುವಾಗ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಪ್ರಬಲ ಸ್ಪರ್ಧೆ ಏರ್ಪಟ್ಟಿದೆ. ಎರಡೂ ಪಕ್ಷಗಳ ನಾಯಕರು ಕೂಡ ಈ ಬಾರಿ ಗೆಲುವು ನಮ್ಮದೇ ಎಂಬ ರೀತಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಜತೆಗೆ ಪರಸ್ಪರ ಎದುರಾಳಿಗಳ ಭಯವೂ ಪಕ್ಷದ ಮುಖಂಡರನ್ನು ಕಾಡುತ್ತಿದೆ.

ರಾಜ್ಯದಲ್ಲಿ ಪ್ರಬಲ ಸಚಿವರಾಗಿ ಗುರುತಿಕೊಂಡಿರುವ ಬಿ. ರಮಾನಾಥ ರೈ ಅವರನ್ನು ಸೋಲಿಸಲೇ ಬೇಕು ಎಂದು ಪಣತೊಟ್ಟಿರುವ ಬಿಜೆಪಿ ರಣತಂತ್ರಗಳನ್ನು ರೂಪಿಸುತ್ತಿದೆ. ಇನ್ನೊಂದೆಡೆ ಕಳೆದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಅದೇ ರಮಾನಾಥ ರೈ ಅವರನ್ನು ಗೆಲ್ಲಿಸಲಿದೆ ಎಂದು ಕಾಂಗ್ರೆಸ್‌ ಪಕ್ಷದ ಮುಖಂಡರು ಹೇಳುತ್ತಿದ್ದಾರೆ.

ಬಂಟ್ವಾಳ ಕ್ಷೇತ್ರದ ಅಭಿವೃದ್ಧಿಯ ನಡುವೆಯೇ ಇಲ್ಲಿನ ಹಲವು ಸಮಸ್ಯೆಗಳು, ಬಂಟ್ವಾಳದಲ್ಲಿ ನಿರಂತರ ಸೆಕ್ಷನ್‌ 144ರನ್ವಯ ನಿಷೇಧಾಜ್ಞೆ ಜಾರಿ, ಕಲ್ಲಡ್ಕ ಶಾಲೆಯ ಮಧ್ಯಾಹ್ನದ ಊಟದ ಅನುದಾನ ಕಡಿತ, ಯುವಕರ ಕೊಲೆ ಪ್ರಕರಣಗಳು ಪ್ರಮುಖ ಅಸ್ತ್ರವಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಇತರ ಪಕ್ಷಗಳ ಅಭ್ಯರ್ಥಿಗಳು ಪಡೆಯುವ ಮತಗಳು ಕೂಡ ಬಿಜೆಪಿ-ಕಾಂಗ್ರೆಸ್‌ ಗೆಲುವಿನಲ್ಲಿ ಪಾತ್ರ ವಹಿಸಲಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಸಾಮಾಜಿಕ ಜಾಲತಾಣದಲ್ಲೂ ಬಂಟ್ವಾಳ ಕ್ಷೇತ್ರದ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ವಿಶೇಷವೆಂದರೆ ಇಡೀ ಜಿಲ್ಲೆಯಲ್ಲಿ ಎಲ್ಲೂ ಕಂಡುಬರದ ಪಕ್ಷಾಂತರ ಪರ್ವ ಬಂಟ್ವಾಳದಲ್ಲಿ ಕಂಡುಬರುತ್ತಿದೆ. ಬಿಜೆಪಿ-ಕಾಂಗ್ರೆಸ್‌ ಎರಡೂ ಪಕ್ಷಗಳು ಸ್ಪರ್ಧೆಗೆ ಬಿದ್ದಂತೆ ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇಡೀ ರಾಜ್ಯದ ದೃಷ್ಟಿ ಬಂಟ್ವಾಳದತ್ತ ನೆಟ್ಟಿದೆ.

„ಕಿರಣ್‌ ಸರಪಾಡಿ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.