ಪ್ರಯಾಣಿಕರಿಗೆ ‘ಬಿಸಿ’ ರೋಡಲ್ಲೇ ಬಸ್ ಕಾಯುವ ಶಿಕ್ಷೆ
Team Udayavani, Jan 31, 2019, 4:27 AM IST
ಬಂಟ್ವಾಳ : ತಾ| ಕೇಂದ್ರ ಬಿ.ಸಿ. ರೋಡ್‌ನಲ್ಲಿ ಸರಕಾರಿ ಕಚೇರಿಗಳು, ಪ್ರಮುಖ ಬ್ಯಾಂಕ್‌ಗಳು, ಬಹುಮಹಡಿ ವಾಣಿಜ್ಯ ಮಳಿಗೆಗಳು ಎಲ್ಲವೂ ಇವೆ. ಆದರೆ, ಪ್ರಯಾಣಿಕರಿಗೆ ಸೂಕ್ತ ಬಸ್ ತಂಗುದಾಣದ ವ್ಯವಸ್ಥೆ ಇಲ್ಲದಿರುವುದೇ ನಗರಕ್ಕೆ ಕಪ್ಪುಚುಕ್ಕೆಯಂತಾಗಿದೆ.
ಮಂಗಳೂರಿನಿಂದ ಬರುವ ಸರಕಾರಿ ಬಸ್‌ಗಳು, ಖಾಸಗಿ ಸರ್ವಿಸ್ ಬಸ್‌ಗಳು (ಕಾಂಟ್ರ್ಯಾಕ್ಟ್ ಕ್ಯಾರೇಜ್) ಬಿ.ಸಿ. ರೋಡ್ ನಿಲ್ದಾಣದ ಒಳಗೆ ಇಳಿಯುವುದಿಲ್ಲ. ಹೆದ್ದಾರಿಯಲ್ಲೇ ನಿಲ್ಲಿ ಸುವುದರಿಂದ ಪ್ರಯಾಣಿಕರು ಅಲ್ಲೇ ಬಸ್ ನಿರೀಕ್ಷೆಯಲ್ಲಿ ಕಾಯುತ್ತಾರೆ. ಸರ್ವಿಸ್ ಬಸ್ ನಿಲ್ದಾಣ ಹೆದ್ದಾರಿಯ ಮಂಗಳೂರು ಕಡೆಯಿಂದ ಬರುವ ರಸ್ತೆಯಲ್ಲಿದ್ದು, ಲೋಕಲ್ ಬಸ್‌ಗಳ ನಿಲುಗಡೆಗೆ ಸೀಮಿತ ಎಂಬಂತಾಗಿದೆ.
ಮಂಗಳೂರು ಕಡೆಗೆ ಹೋಗುವ ಬಸ್‌ಗಳ ನಿಲ್ದಾಣಕ್ಕೆ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಶಿಲಾನ್ಯಾಸ ಆಗಿತ್ತು. ಈಗ ನನೆಗುದಿಯಲ್ಲಿದ್ದು, ಸಮತಟ್ಟು ಮಾಡಿದ ಸ್ಥಳ, ಹಳೆಯ ತಾ.ಪಂ. ಕಟ್ಟಡ ಕೆಡವಿದ ಜಮೀನು ಕಾಯಕಲ್ಪಕ್ಕಾಗಿ ಕಾಯುತ್ತಿದೆ.
ಬಿ.ಸಿ. ರೋಡ್ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾ ಣದ ಎದುರು ಮಂಗಳೂರಿ ನಿಂದ ಬರುವ ಬಸ್‌ಗಳಿಗೆ ಸಮರ್ಪಕ ನಿಲುಗಡೆ ಇಲ್ಲ. ಹೆದ್ದಾರಿಯಲ್ಲೇ ಜನರನ್ನು ಹತ್ತಿಸಿಕೊಳ್ಳು ವುದು ಮತ್ತು ಇಳಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಖಾಸಗಿ ಬಸ್ ನಿಲ್ದಾಣ
ಬಿ.ಸಿ. ರೋಡ್‌ನ ಹೃದಯ ಭಾಗದಲ್ಲಿ 12 ವರ್ಷಗಳ ಹಿಂದೆ ಇದ್ದ ಬಸ್ ನಿಲ್ದಾಣವನ್ನು ಕೆಡವಿ ಅದೇ ಜಾಗದಲ್ಲಿ ನಿರ್ಮಾಣವಾದ ವಾಣಿಜ್ಯ ಸಂಕೀರ್ಣ ಖಾಸಗಿ ಬಸ್ ನಿಲ್ದಾಣವಾಗಿ ಮಾರ್ಪಟ್ಟಿತ್ತು. ವಾಣಿಜ್ಯ ಸಂಕೀರ್ಣ ನಿರ್ಮಾಣವಾದ ಬಳಿಕ ಅಲ್ಲೊಂದು ಅಂಗಡಿ ಕೋಣೆಯನ್ನು ಪ್ರಯಾಣಿಕರಿಗೆ ಬಸ್ ಕಾಯಲು ವಿಶ್ರಾಂತಿ ಕೊಠಡಿಯಾಗಿ ನೀಡಿದ್ದರೂ ಅಭದ್ರತೆ ಕಾರಣ ಅದರ ಬಳಕೆ ಇಲ್ಲದಂತಾಗಿದೆ. ಪ್ರಯಾಣಿಕರು ಮಳೆ-ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ಅನಿವಾರ್ಯ ಪರಿಸ್ಥಿತಿ ಹಲವು ವರ್ಷಗಳಿಂದ ಮುಂದುವರಿದಿದೆ. ಈ ಬಗ್ಗೆ ಸಾರ್ವಜನಿಕ ಸಂಘಟನೆಗಳು ಉನ್ನತ ಮಟ್ಟದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಪ್ರಯಾಣಿಕರ ಶೆಲ್ಟರ್ ನಿರ್ಮಿಸಿ
ನಗರ ಕೇಂದ್ರದಲ್ಲಿ ವಿವಿಧ ಇಲಾಖೆಗಳು ಕಾರ್ಯಾಚರಿಸುತ್ತಿವೆ. ನಿತ್ಯವೂ ಸಾವಿರಾರು ಜನ ಬಿ.ಸಿ. ರೋಡ್‌ನಲ್ಲಿ ಇಳಿದು ಹತ್ತಾರು ಕೆಲಸಗಳಿಗೆ ಹೋಗುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿ ಗಳು, ಉದ್ಯೋಗಿಗಳು ಮಂಗಳೂರಿಗೆ ಹೋಗುತ್ತಾರೆ – ಬರುತ್ತಾರೆ. ಹಾಗಾಗಿ ಇಲ್ಲೊಂದು ಪ್ರಯಾಣಿಕರ ಶೆಲ್ಟರ್ ನಿರ್ಮಿಸಿದರೆ ಅನುಕೂಲವಾಗುವುದು. ನಗರ ಕೇಂದ್ರದಲ್ಲಿ ಸಾಕಷ್ಟು ಅವಕಾಶ ಇರುವುದರಿಂದ ಇಲ್ಲೊಂದು ಪ್ರಯಾಣಿಕರ ತಂಗುದಾಣವನ್ನು ಜನಪ್ರತಿನಿಧಿಗಳು ಕಾರ್ಯಗತ ಮಾಡಬೇಕಾಗಿದೆ ಎಂಬು ವುದು ಜನತೆಯ ಆಶಯ.
ಉಪಯೋಗಕ್ಕಿಲ್ಲದ ಬಸ್ ಬೇ
ಬಿ.ಸಿ. ರೋಡ್ ಶ್ರೀನಿವಾಸ ಆರ್ಕೇಡ್ ವಾಣಿಜ್ಯ ಸಂಕೀರ್ಣದ ಎದುರು, ಪದ್ಮಾ ಕಾಂಪ್ಲೆಕ್ಸ್ ಹತ್ತಿರ ಮತ್ತು ಶಾಂತಿ ಅಂಗಡಿಯಲ್ಲಿ ತರಾತುರಿಯಲ್ಲಿ ಬಸ್ ಬೇ ನಿರ್ಮಾಣ ಮಾಡಲಾಗಿತ್ತು. ಈಗ ಅವು ನಿರರ್ಥಕವೆನಿಸಿವೆ. ಅವು ಪ್ರಯಾಣಿಕರ ಉಪಯೋಗಕ್ಕೆ ಬರುತ್ತಿಲ್ಲ.
ರೂಪುರೇಷೆ
ಬಿ.ಸಿ. ರೋಡ್ ನಗರ ಕೇಂದ್ರವನ್ನು ಸುಂದರಗೊಳಿಸುವ ಯೋಜನೆ ಸಿದ್ಧವಾಗುತ್ತಿದೆ. ಪ್ರಯಾಣಿಕರ ತಂಗುದಾಣಕ್ಕೆ ಅನುಕೂಲ ಕಲ್ಪಿಸಲು ಯೋಜನೆಯಲ್ಲಿ ಕ್ರಮ ಕೈಗೊಂಡಿದೆ. ಇದಕ್ಕೆ ಬೇಕಾದ ಅನುದಾನ ಹೊಂದಿಸಿ ಅನುಷ್ಠಾನಕ್ಕೆ ತರಲಾಗುತ್ತದೆ. ರೂಪುರೇಷೆ ಸಿದ್ಧಗೊಳ್ಳುತ್ತಿದೆ.
– ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಶಾಸಕರು
•ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Memorial Space: ಡಾ.ಸಿಂಗ್‌ರ ಸ್ಮಾರಕ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಸಮ್ಮತಿ
ದಿಲ್ಲೀಲಿ ಚಳಿಗಾಲದಲ್ಲೇ ದಾಖಲೆ 4 ಸೆ.ಮೀ. ಮಳೆ: 101 ವರ್ಷದಲ್ಲೇ ಮೊದಲು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ
Uttar Pradesh: ತಂದೆ, ಅಜ್ಜ, ಚಿಕ್ಕಪ್ಪನಿಂದಲೇ ಅಪ್ರಾಪ್ತೆ ಮೇಲೆ ಅತ್ಯಾಚಾರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.