‘ಪ್ಲಾಸ್ಟಿಕ್‌ ಮುಕ್ತ ನಗರಕ್ಕಾಗಿ ಪ್ಲಾಸ್ಟಿಕ್‌ ಉದ್ಯಮ ನಿಷೇಧಿಸಿ’


Team Udayavani, Jun 20, 2018, 2:45 AM IST

plastic-19-6.jpg

ಬಂಟ್ವಾಳ: ಪ್ಲಾಸ್ಟಿಕ್‌ ಮುಕ್ತ ನಗರವಾಗಿಸಲು ಸಣ್ಣಪುಟ್ಟ ವ್ಯಾಪಾರಿಗಳ ಮಳಿಗೆಗೆ ದಾಳಿ ನಡೆಸುವ ಬದಲು ಪ್ಲಾಸ್ಟಿಕ್‌ ಉದ್ಯಮವನ್ನು ನಿಷೇಧಿಸಿ ಅದರ ಉತ್ಪಾದನೆ ನಿಲುಗಡೆ ಮಾಡುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ಪುರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಆಗ್ರಹಿಸಿದರು. ಅವರು ಜೂ. 19ರಂದು ಬಂಟ್ವಾಳ ಪುರಸಭೆಯಲ್ಲಿ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ಲಾಸ್ಟಿಕ್‌ ನಲ್ಲಿ ಮುಚ್ಚಿದ ತಿಂಡಿ ಪೊಟ್ಟಣ ಪ್ರದರ್ಶಿಸಿ ಪುರಸಭೆ ದಾಳಿ ನಡೆಸುವ ಮೂಲಕ ಸಣ್ಣ ವ್ಯಾಪಾರಿ ಗಳಿಗೆ ತೊಂದರೆ ಆಗುತ್ತಿದೆ ಎಂದರು.

ಪುರಸಭಾ ಸದಸ್ಯ ಬಿ. ದೇವದಾಸ ಶೆಟ್ಟಿ  ಮಾತನಾಡಿ, ಕಾನೂನು ಪ್ರಕಾರ ನಿರ್ದಿಷ್ಟ 40 ಮೈಕ್ರೋನ್‌ ಮಟ್ಟದ ಪ್ಲಾಸ್ಟಿಕ್‌ ನಿಷೇಧಿಸಿ ಆದೇಶವಾಗಿತ್ತು. ಕಾನೂನು ಪೂರ್ವಾಪರ ತಿಳಿಯದೆ ಕ್ರಮಗಳು ಆಗುತ್ತಿವೆೆ. ಮಿನರಲ್‌ ವಾಟರ್‌, ತಂಪು ಪಾನೀಯ ಸಹಿತ ಇತರ ಪ್ಲಾಸ್ಟಿಕ್‌ ನಲ್ಲಿ ಮಾರಾಟ ಆಗುವ ಆಹಾರ ಮತ್ತು ಪಾನೀಯಗಳ ಮೇಲಿನ ಕ್ರಮದ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು. ಪ್ಲಾಸ್ಟಿಕ್‌ ಬಳಕೆದಾರನ ಮೇಲೂ ಕಾನೂನು ಕ್ರಮ ಆಗಬೇಕು.  ಪ್ಲಾಸ್ಟಿಕ್‌ ಬಳಕೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕೆಲಸ ಮೊದಲು ಆಗಲಿ ಎಂದು ವಿವರಿಸಿದರು. ಪ್ಲಾಸ್ಟಿಕ್‌ ನಿಷೇಧ ದಾಳಿ ಸರಿಯಾದ ಕ್ರಮ, ಪರಿಸರಕ್ಕೆ ಆಗುವ ತೊಂದರೆ ತಪ್ಪಿಸಲು ಇಂತಹ ದಾಳಿ ನಡೆಸಿರುವ ಅಧಿಕಾರಿಗಳು ಕಾನೂನು ಕ್ರಮ ಅನುಷ್ಠಾನಿಸಬೇಕು ಎಂದು ಸದಸ್ಯ ಜಗದೀಶ ಕುಂದರ್‌ ಅಧಿಕಾರಿಗಳ ಕೆಲಸವನ್ನು ಬೆಂಬಲಿಸಿ ಮಾತನಾಡಿದರು. ಸದಸ್ಯ ಮುನೀಶ್‌ ಆಲಿ ಮಾತನಾಡಿ, ಪ್ಲಾಸ್ಟಿಕ್‌ ದಾಳಿ ಬಳಿಕ ಅಂಗಡಿಗಳ ಮಾಲಕರು ಹಾಕುವ ಶಾಪಕ್ಕೆ ನಾವು ಈಡಾಗಿದ್ದೇವೆ ಎಂದು ಪ್ಲಾಸ್ಟಿಕ್‌ ಮುಕ್ತ ಕಾರ್ಯಾಚರಣೆ ಬಗ್ಗೆ  ತನ್ನ ಅಸಮಾಧಾನ ವ್ಯಕ್ತಪಡಿಸಿದರು.

ಕಾನೂನು ಪ್ರಕಾರ ಕ್ಯಾರಿ ಬ್ಯಾಗ್‌ ಮೇಲೆ ಮಾತ್ರ ನಿಷೇಧವಿದೆ. ಉಳಿದಂತೆ ಯಾವುದೇ ಮುಚ್ಚಿನ ಲಕೋಟೆಯಲ್ಲಿ ಮಾರಾಟ ಆಗುವ ಆಹಾರ ವಸ್ತುಗಳ ಮೇಲೆ ಇಲ್ಲ. ಪ್ಲಾಸ್ಟಿಕ್‌ ಬಳಕೆ ವಿರುದ್ಧ ಕಾನೂನು ಕ್ರಮದ ಬಗ್ಗೆ ಪುರಸಭೆ ಹಿಂಜರಿಕೆಯ ಮಾತಿಲ್ಲ. ಪ್ಲಾಸ್ಟಿಕ್‌ ಮುಕ್ತ ಮಾಡುವಲ್ಲಿ ಜನರ ಮತ್ತು ಜನಪ್ರತಿನಿಧಿಗಳ ಸಹಕಾರ ಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಮನವಿ ಮಾಡಿದರು.

ನರಕ ನಗರ
ಬಿ.ಸಿ. ರೋಡ್‌ ನರಕ ನಗರವಾಗಿದೆ. ಮಳೆ ನೀರು ರಸ್ತೆಯ ಬದಿಯಲ್ಲ ನೆರೆಯಂತೆ ನಿಲ್ಲುತ್ತದೆ. ನೀರು ಹರಿಯಲು ಜಾಗವಿಲ್ಲ. ಇಲ್ಲಿನ ಸರ್ವಿಸ್‌ ರಸ್ತೆ ನಿರ್ಮಾಣದಿಂದ ಆಗಿರುವ ಎಡವಟ್ಟನ್ನು ಕೇಳುವವರಿಲ್ಲ. ಬಿ.ಸಿ. ರೋಡ್‌ ಸರ್ವಿಸ್‌ ರಸ್ತೆ ಮತ್ತು ಫ್ಲೈ ಓವರ್‌ ನಿಂದ ಆಗುತ್ತಿರುವ ಎಡವಟ್ಟಿನಿಂದ ಪುರಸಭೆಗೆ ಕೆಟ್ಟ ಹೆಸರು ಬರುವಂತಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕ್ರಮ ಆಗಬೇಕು ಎಂದು ಸದಸ್ಯ ದೇವದಾಸ ಶೆಟ್ಟಿ ಆಗ್ರಹಿಸಿದರು. ಜನ – ವಾಹನ ಸಂಚಾರಕ್ಕೆ, ದ್ವಿಚಕ್ರ ವಾಹನ ನಿಲುಗಡೆಗೆ, ಬಾಡಿಗೆ ವಾಹನಗಳಿಗೆ ನಿಲುಗಡೆಗೆ ಸೂಕ್ತ ವ್ಯವಸ್ಥೆ ಇಲ್ಲ. ಸುದೀರ್ಘ‌ ಅವಧಿಯಿಂದ ಇಲ್ಲಿನ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಪ್ರಸ್ತುತವಾದರೂ ಅಂತಹ ಒಂದು ಬದ್ಧತೆಯ ನಿರ್ಣಯ ಆಡಳಿತ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬಿ.ಸಿ. ರೋಡ್‌ನ‌ಲ್ಲಿ ಪೇಪಾರ್ಕ್‌
ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಮಾತನಾಡಿ ಬಿ.ಸಿ. ರೋಡ್‌ ಫ್ಲೈ ಓವರ್‌ ಮತ್ತು ಸುತ್ತಲಿನ ಜಾಗವನ್ನು ಬಳಸಿಕೊಂಡು ಇಂಟರ್‌ ಲಾಕ್‌ ಹಾಕುವ ಮೂಲಕ ಪೇಪಾರ್ಕ್‌ ಮಾಡಿದರೆ ಸಂಚಾವರ, ವಾಹನ ನಿಲುಗಡೆಯ ಹಲವು ಸಮಸ್ಯೆಗಳು ಏಕ ಕಾಲದಲ್ಲಿ ನಿವಾರಣೆ ಆಗುವುದು. ಸುರತ್ಕಲ್‌ ಮತ್ತು ಕೂಳೂರಿನಲ್ಲಿ ಫ್ಲೈ ಓವರ್‌ ತಳದಲ್ಲಿ ಪೇಪಾರ್ಕ್‌ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಎಲ್ಲ ಸದಸ್ಯರಿಗೆ ಹಂಚಿಕೆ ಆಗುವ 10 ಲಕ್ಷ ರೂ. ಅನುದಾನ ಬಳಸಿವಾಹನ ನಿಲುಗಡೆಯ ವ್ಯವಸ್ಥೆ ಮಾಡುವ. ಇದರಿಂದ ಪುರಸಭೆಗೂ ಆದಾಯ ಬರುವುದಾಗಿ ವಿವರಣೆ ನೀಡಿದರು. ಸದಸ್ಯ ಮುನೀಶ್‌ ಅಲಿ ಮತ್ತು ಇತರ ಸದಸ್ಯರು ಸಲಹೆಗೆ ಧ್ವನಿಗೂಡಿಸಿ, ಪ್ರತಿಯೊಬ್ಬ ಸದಸ್ಯರಿಗೆ ಹಂಚಿಕೆ ಆಗುವ ರೂ. 25 ಸಾವಿರದಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ 10 ಲಕ್ಷ ರೂ. ಮೊತ್ತದಿಂದ ಕಾಮಗಾರಿ ನಡೆಸಿದರೆ ಪುರಸಭೆಗೂ ಹೆಸರು, ಸಾರ್ವಜನಿಕರಿಗೂ ಒಂದು ಉತ್ತಮ ವ್ಯವಸ್ಥೆ ಮಾಡಿದಂತೆ ಆಗುವುದಾಗಿ ಅಭಿಪ್ರಾಯಪಟ್ಟರು.

ಪುರಸಭೆಯ ವ್ಯವಸ್ಥೆ ಒಳ್ಳೆಯದಾಗಬೇಕು. ನಗರ ಸುಂದರ ಆಗಬೇಕು ಎಂಬುದಾಗಿ ಎಲ್ಲರೂ ಹೇಳುತ್ತಾರೆ. ಸದಸ್ಯರ ಅಭಿಪ್ರಾಯವೂ ಹಾಗಿದೆ. ಆದರೆ ಅದಕ್ಕೆ ಬೇಕಾದಷ್ಟು ಅನುದಾನ ನೀಡುವ ವಿಚಾರದಲ್ಲಿ ಭಿನ್ನ ನಿಲುವು ಯಾಕೆ. ಸದಸ್ಯರ ಅನುದಾನವನ್ನು ಬಳಸಿಕೊಳ್ಳುವ ಎಂದು ಉಪಾಧ್ಯಕ್ಷ ಮಹಮ್ಮದ್‌ ನಂದರಬೆಟ್ಟು ಪ್ರತಿಕ್ರಿಯಿಸಿದರು.
ಸದಸ್ಯರಾದ ಪ್ರವೀಣ್‌ ಬಿ., ಮಹಮ್ಮದ್‌ ಷರೀಫ್‌, ಚಂಚಲಾಕ್ಷಿ, ಬಿ. ಮೋಹನ ಪ್ರಸ್ತಾಪದ ಬಗ್ಗೆ ಪ್ರಶ್ನಿಸಿ ಇತರ ಮೂಲಗಳ ಹಣವನ್ನು ಅದಕ್ಕೆ ಇಡುವ ಬಗ್ಗೆ ಸಲಹೆ ನೀಡಿದರು.

ನಗರ ಒಳ್ಳೆಯದಾಗಬೇಕು. ಪರಿಸರ ಸುಂದರ ಆಗಬೇಕು.  ಜನರಿಗೆ ಅನುಕೂಲ ಆಗಬೇಕು ಎಂಬ ದೃಷ್ಟಿಯಿಂದ ಪೇಪಾರ್ಕ್‌ ಬಗ್ಗೆ ಪ್ರಸ್ತಾವಿಸಲಾಗಿದೆ. ಇದು ಬೇಡ ಎಂದು ಸದಸ್ಯರ ಆಕ್ಷೇಪವಿರುವುದೇ ಎಂದು ಅಧ್ಯಕ್ಷರು ನಿರ್ಣಯ ಮಂಡಿಸಿ ಕೆಲಸ ಮಾಡುವುದಕ್ಕೆ ಒಪ್ಪಿಗೆ ಪಡೆದರು. ಸಭೆಯಲ್ಲಿ ಸದಸ್ಯರಾದ ಗಂಗಾಧರ, ವಸಂತಿ ಚಂದಪ್ಪ, ಯಾಸ್ಮಿನ್‌, ಸಂಜೀವಿ, ಸುಗುಣಾ ಕಿಣಿ,  ಬಾಸ್ಕರ ಟೈಲರ್‌, ಸಂಧ್ಯಾ ಮಹಮ್ಮದ್‌ ಇಕ್ಬಾಲ್‌, ಮಮ್ತಾಜ್‌, ಜಸಿಂತ ಡಿ’ಸೋಜಾ ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಎಂಜಿನಿಯರ್‌ ಡೊಮೆನಿಕ್‌ ಡಿಮೆಲ್ಲೊ, ಬುಡಾ ಸೆಕ್ರೆಟರಿ ಅಭಿಲಾಷ್‌ ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಸ್ವಾಗತಿಸಿ ವಂದಿಸಿದರು.

ಜತೆಯಾಗಿ ಕೆಲಸ ಮಾಡುವ
ಬಂಟ್ವಾಳದ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಇದೇ ಮೊದಲಾಗಿ ಬಂಟ್ವಾಳ ಪುರಸಭೆಯ ಸಭೆಗೆ ಹಾಜರಾದರು. ಅಧ್ಯಕ್ಷರು, ಮುಖ್ಯಾಧಿಕಾರಿ, ಉಪಾಧ್ಯಕ್ಷರು ಹೂಮಾಲೆ ಹಾಕಿ ಅವರನ್ನು ಸ್ವಾಗತಿಸಿದರು. ಸದಸ್ಯರು ಗುಲಾಬಿ ನೀಡಿ ಅವರನ್ನು ಬರಮಾಡಿಕೊಂಡರು. ಅಧಿಕಾರಿ ವರ್ಗದ ಪರವಾಗಿ ಪುಷ್ಪಗುಚ್ಛ ನೀಡಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು, ನಾವು ಜತೆಯಾಗಿ ಕೆಲಸ ಮಾಡುವ. ಜನಪ್ರತಿನಿಧಿಗಳು ಐದು ವರ್ಷಕ್ಕೊಮ್ಮೆ ಬರುತ್ತಾರೆ – ಹೋಗುತ್ತಾರೆ. ಆದರೆ ಅಧಿಕಾರಿ ವರ್ಗ ಶಾಶ್ವತ ಸೇವೆ ಸಲ್ಲಿಸುವವರು. ಎಲ್ಲರಿಗೂ ಕರ್ತವ್ಯ ಹೊಣೆಗಾರಿಕೆ ಇದೆ. ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಎಲ್ಲರೂ ಸಹಕರಿಸುವ. ಬಂಟ್ವಾಳ ಕ್ಷೇತ್ರದ ಹೃದಯದಂತಿರುವ ನಮ್ಮ ಪುರಸಭೆ ಉತ್ತಮ ಆಡಳಿತ ನೀಡುವ ಬದ್ದತೆ ಹೊಂದಿದೆ. ಎಲ್ಲ ಜನಪ್ರತಿನಿಧಿಗಳಿಗೂ ಹೊಣೆಗಾರಿಕೆ ಹೊಂದಿದವರು ಎಂದರು.

ಶುದ್ಧ ನೀರು ನಮ್ಮ ಬದ್ಧತೆ
ಒಬ್ಬ ಶಾಸಕನಾಗಿ ಇಲ್ಲಿನ ಯುಜಿಡಿ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಶುದ್ಧ ಕುಡಿಯುವ ನೀರು ನೀಡುವುದು ನಮ್ಮ ಬದ್ಧತೆ. ಜನರ ಆರೋಗ್ಯದ ದೃಷ್ಟಿಯಿಂದ ಕಲುಷಿತ ನೀರು ನದಿಗೆ ಹರಿಯದಂತೆ ನೋಡಿಕೊಳ್ಳಬೇಕು.
– ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಶಾಸಕರು

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ

Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.