ಆಡಳಿತ ಅಸ್ತಿತ್ವದಲ್ಲಿಲ್ಲ; ಮುಖ್ಯಾಧಿಕಾರಿ ಹುದ್ದೆಯೂ ಖಾಲಿ

 ಬಂಟ್ವಾಳ ಪುರಸಭೆ: ಚುನಾವಣೆ ನಡೆದು ಒಂದು ವರ್ಷ

Team Udayavani, Oct 15, 2019, 5:00 AM IST

l-25

ಬಂಟ್ವಾಳ ಪುರಸಭೆ ಕಾರ್ಯಾಲಯ

ಬಂಟ್ವಾಳ: ಒಂದೆಡೆ ಬಂಟ್ವಾಳ ಪುರಸಭೆಗೆ ಚುನಾವಣೆ ನಡೆದು ಒಂದು ವರ್ಷ ಕಳೆದರೂ ಇನ್ನೂ ಆಡಳಿತ ಅಸ್ತಿತ್ವಕ್ಕೆ ಬಂದಿಲ್ಲ. ಇನ್ನೊಂದೆಡೆ ಈಗ ಪುರಸಭಾ ಮುಖ್ಯಾಧಿಕಾರಿ ವರ್ಗಾವಣೆಗೊಂಡು 10 ದಿನಗಳು ಕಳೆದರೂ ಇನ್ನೂ ನೂತನ ಮುಖ್ಯಾಧಿಕಾರಿ ಬಂದಿಲ್ಲ. ಹೀಗಾಗಿ ಪುರಸಭೆಯಲ್ಲಿ ಆಡಳಿತದ ಜತೆಗೆ ಅಧಿಕಾರಿಯೂ ಇಲ್ಲ ದಂತಾಗಿದೆ.

ಬಂಟ್ವಾಳ ಪುರಸಭೆ ಯಲ್ಲಿ ಕಳೆದ ಎರಡೂ ವರೆ ವರ್ಷಗಳಿಂದ ಮುಖ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸು ತ್ತಿದ್ದ ರೇಖಾ ಜೆ. ಶೆಟ್ಟಿ ಅವರು ಕಾರ್ಕಳಕ್ಕೆ ವರ್ಗಾವಣೆಗೊಂಡು, ಸೆ. 26ರಂದು ಬಂಟ್ವಾಳ ಪುರಸಭೆಯಿಂದ ನಿರ್ಗಮಿಸಿದ್ದಾರೆ. ಅವರು ನಿರ್ಗಮಿಸುವ ಸಂದರ್ಭದಲ್ಲಿ ಪುರಸಭೆಯ ವ್ಯವಸ್ಥಾಪಕಿ ಲೀಲಾವತಿಯವರಿಗೆ ಚಾರ್ಜ್‌ ನೀಡಿದ್ದು, ಬೇರೆಡೆಯಿಂದ ಯಾರೂ ಪ್ರಭಾರ ನೆಲೆಯಲ್ಲಿಯೂ . ಆಗಮಿಸಿಲ್ಲ.

ಆಡಳಿತ ವ್ಯವಸ್ಥೆ ಯಿಲ್ಲದೆ ಅಧ್ಯಕ್ಷರು ಇಲ್ಲದಿದ್ದು, ಪ್ರಸ್ತುತ ಆಡಳಿತಾಧಿಕಾರಿಯಾಗಿ ಮಂಗಳೂರು . ಸಹಾಯಕ ಕಮಿಷನರ್‌ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಈಗ ಮುಖ್ಯಾ ಧಿಕಾರಿ ಹುದ್ದೆಯನ್ನೂ ಇತರರು ನಿರ್ವಹಿಸುವಂತಾಗಿದೆ.

ಪ್ರಭಾರ ನೇಮಕದ ಜವಾಬ್ದಾರಿಯನ್ನು ಜಿಲ್ಲಾ ನಗರ ಯೋಜನ ನಿರ್ದೇಶಕರ ಕಚೇರಿ ನಿರ್ವಹಿಸುತ್ತದೆ. ಆದರೆ ಪ್ರಸ್ತುತ ರೇಖಾ ಜೆ. ಶೆಟ್ಟಿ ಅವರೇ ಚಾರ್ಜ್‌ ನೀಡಿರುವ ಲೀಲಾವತಿ ಪ್ರಭಾರ ನೆಲೆಯಲ್ಲಿದ್ದಾರೆ. ಅವರೇ ಪ್ರಭಾರ ಅಧಿಕಾರಿಗೆ ಜವಾಬ್ದಾರಿ ನೀಡಿರುವುದರಿಂದ ನಾವು ಬೇರೆ ಅಧಿಕಾರಿಗೆ ಜವಾಬ್ದಾರಿ ನೀಡಬೇಕಿಲ್ಲ ಎಂದು ನಗರ ಯೋಜನ ನಿರ್ದೇಶಕರ ಕಚೇರಿ ಅಧಿಕಾರಿಗಳು ಹೇಳುತ್ತಾರೆ.

ಒಂದು ಮೂಲದ ಪ್ರಕಾರ ಬಂಟ್ವಾಳದಲ್ಲಿ ಕೆಲವು ಸಮಯಗಳ ಹಿಂದೆ ಕಾರ್ಯ ನಿರ್ವಹಿಸಿದ್ದ, ಪ್ರಸ್ತುತ ಪುತ್ತೂರಿನಲ್ಲಿ ವ್ಯವಸ್ಥಾಪಕಿಯಾಗಿರುವ ಅಧಿಕಾರಿಯೊಬ್ಬರು ಬಂಟ್ವಾಳ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಆಗಮಿಸುತ್ತಾರೆ ಎನ್ನಲಾಗುತ್ತಿದೆ. ಜತೆಗೆ ಇತರ ಅಧಿಕಾರಿಗಳ ಹೆಸರು ಗಳೂ ಕೇಳಿಬರುತ್ತಿವೆ. ಮುಖ್ಯಾಧಿಕಾರಿ ಯವರ ನೇಮಕವು ಸರಕಾರಿ ಮಟ್ಟದಲ್ಲಿ ನಡೆಯುತ್ತಿರುವುದರಿಂದ ಸ್ಥಳೀಯ ಅಧಿಕಾರಿಗಳಿಗೆ ಈ ಕುರಿತುಹಿತಿ ಇಲ್ಲ.

ಹೊಸ ಮುಖ್ಯಾಧಿಕಾರಿಯವರು ಬರುವವರೆಗೆ ಹಿಂದಿನವರನ್ನೇ ನಿಲ್ಲಿಸುವ ಕುರಿತು ಮನವಿ ಮಾಡಲಾಗಿತ್ತಾದರೂ ಒತ್ತಡ ಬರುತ್ತದೆ ಎಂಬ ಕಾರಣಕ್ಕೆ ಅವರು ಬೇರೆಯವರಿಗೆ ಚಾರ್ಜ್‌ ನೀಡಿ ತೆರಳಿದ್ದಾರೆ. ರೇಖಾ ಶೆಟ್ಟಿ ಅವರು ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಕಾರ್ಕಳ ಪುರಸಭೆಯಲ್ಲಿ ಕಾರ್ಯ ನಿರ್ವಹಿಸಿದ್ದು, ಹೀಗಾಗಿ ಮತ್ತೆ ಅವರನ್ನು ಕಾರ್ಕಳ ಪುರಸಭೆಗೆ ಮುಖ್ಯಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ಎರಡೂ ಕಡೆ ರೇಖಾ ಶೆಟ್ಟಿ!
ಬಂಟ್ವಾಳದ ಹಿಂದಿನ ಮುಖ್ಯಾಧಿಕಾರಿ ಕಾರ್ಕಳಕ್ಕೆ ವರ್ಗಾವಣೆಗೊಂಡು ತೆರಳಿದ್ದರೂ ಬಂಟ್ವಾಳ ಹಾಗೂ ಕಾರ್ಕಳ ಪುರಸಭೆಗಳ ವೆಬ್‌ಸೈಟ್‌ಗಳಲ್ಲಿ ಮಾತ್ರ ರೇಖಾ ಜೆ. ಶೆಟ್ಟಿ ಅವರೇ ಮುಖ್ಯಾಧಿಕಾರಿ ಆಗಿದ್ದಾರೆ. ಇದೂ ಗೊಂದಲಕ್ಕೆ ಕಾರಣವಾಗಲಿದೆ.

ಅ. 20ರ ಬಳಿಕ ಬರುತ್ತಾರೆ?
ಪುರಸಭೆಯ ಮೂಲಗಳ ಪ್ರಕಾರ ನೂತನ ಮುಖ್ಯಾಧಿಕಾರಿಯವರು ಅ. 20ರ ಬಳಿಕ ಆಗಮಿಸುತ್ತಾರೆ ಎಂದು ಹೇಳಲಾಗುತ್ತಿದ್ದು, ಆದರೆ ಇದು ಖಚಿತ ಮಾಹಿತಿಯಲ್ಲ. ಪ್ರಸ್ತುತ ಹಿಂದಿನ ಮುಖ್ಯಾಧಿಕಾರಿ ನಿರ್ಗಮಿಸಿ 10 ದಿನಗಳು ಕಳೆದಿದ್ದು, ಬೇರೆ ಮುಖ್ಯಾಧಿಕಾರಿ ಆಗಮಿಸಲು ಹೆಚ್ಚಿನ ಅಂತರ ಇದ್ದಾಗ ಬೇರೆ ಅಧಿಕಾರಿಗಳನ್ನು ಪ್ರಭಾರ ನೆಲೆಯಲ್ಲಿ ನೇಮಿಸಲಾಗುತ್ತದೆ.

 ನಮ್ಮ ಗಮನಕ್ಕೆ ಬಂದಿಲ್ಲ
ಬಂಟ್ವಾಳ ಪುರಸಭೆಗೆ ಮುಖ್ಯಾಧಿಕಾರಿ ಯವರ ನೇಮಕ ವಿಚಾರ ಸರಕಾರಿ ಮಟ್ಟ ದಲ್ಲಿ ನಡೆಯುವ ಪ್ರಕ್ರಿಯೆ. ಹೀಗಾಗಿ ಅದರ ಕುರಿತು ನಮ್ಮ ಗಮನಕ್ಕೆ ಯಾವುದೇ ವಿಚಾರ ಬಂದಿಲ್ಲ.
 ಡಾ| ಜಿ. ಸಂತೋಷ್‌ಕುಮಾರ್‌, ಪ್ರಭಾರ ಯೋಜನ ನಿರ್ದೇಶಕರು, ದ.ಕ.

 ಚಾರ್ಜ್‌ ನೀಡಿದ್ದಾರೆ
ಪ್ರಸ್ತುತ ಹಿಂದಿನ ಮುಖ್ಯಾಧಿಕಾರಿಯವರು ನನಗೆ ಚಾರ್ಜ್‌ ನೀಡಿ ಹೋಗಿದ್ದಾರೆ. ಹೊಸ ಮುಖ್ಯಾಧಿಕಾರಿಯವರು ಆಗಮಿಸುವ ಕುರಿತು ನಮಗೆ ಮಾಹಿತಿಯಿಲ್ಲ. ಆದರೆ ಚೆಕ್ಕಿನ ವ್ಯವಹಾರಗಳನ್ನು ಬೇರೆ ಮುಖ್ಯಾಧಿಕಾರಿಯವರೇ ಮಾಡಬೇಕಾಗುತ್ತದೆ.
– ಲೀಲಾವತಿ, ವ್ಯವಸ್ಥಾಪಕಿ, ಬಂಟ್ವಾಳ ಪುರಸಭೆ

-  ಕಿರಣ್‌ ಸರಪಾಡಿ

ಟಾಪ್ ನ್ಯೂಸ್

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.