ಬಂಟ್ವಾಳ ಪುರಸಭೆ: ಕುಡಿಯುವ ನೀರಿನ ಸಂಪರ್ಕಕ್ಕೆ 500 ಅರ್ಜಿ
Team Udayavani, May 31, 2017, 3:54 PM IST
ಬಂಟ್ವಾಳ: ಕಳೆದ ಎರಡು ತಿಂಗಳುಗಳಿಂದ ಅನಧಿಕೃತ ನಳ್ಳಿ ನೀರಿನ ಸಂಪರ್ಕ ತೆರವುಗೊಳಿಸಿ ಕಠಿಣ ನಿಲುವು ಕೈಗೊಂಡ ಪರಿಣಾಮ ಹೊಸ ಸಂಪರ್ಕ ನೀಡುವಂತೆ 500 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ ಅವರು ತಿಳಿಸಿದ್ದಾರೆ.
ಅವರು ಮೇ 30ರಂದು ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಬಂಟ್ವಾಳ, ಬಿ.ಸಿ. ರೋಡ್ ಕಡೆ ಪುರಸಭಾ ವಾಣಿಜ್ಯ ಸಂಕೀರ್ಣಗಳಲ್ಲಿ ಬಹುತೇಕ ಅಂಗಡಿಗಳ ಏಲಂ ಆಗಿಲ್ಲ. ಕುಡಿಯುವ ನೀರಿನ ಬಿಲ್ ವಸೂಲಾತಿ ಆಗಿಲ್ಲ. ಇದರಿಂದ ಪುರಸಭೆಗೆ ಆದಾಯ ಕೊರತೆ ಉಂಟಾಗುತ್ತಿದೆ ಎಂದು ಬುಡಾಅಧ್ಯಕ್ಷಸದಾಶಿವ ಬಂಗೇರ ಆರೋಪಿಸಿದರು.
ಕಸ ತೆರವಿಗೆ ಆಗ್ರಹ
ಕಳೆದ ಒಂದೂವರೆ ವರ್ಷದಿಂದ ಬಿ.ಸಿ.ರೋಡ್ ಗೂಡಿನಬಳಿ ರಸ್ತೆ ನಡುವೆ ಪುರಸಭೆ ವತಿಯಿಂದ ತ್ಯಾಜ್ಯ ವಿಲೇವಾರಿಗೆ ರಾಶಿ ಹಾಕಿರುವ ಕಸವನ್ನು ತೆರವುಗೊಳಿಸಲು ಆಗ್ರಹಿಸಿದರೂ ಪುರಸಭೆಯಿಂದ ಸ್ಪಂದನೆ ಸಿಕ್ಕಿಲ್ಲ ಎಂದು ಸದಸ್ಯ ಮಹಮ್ಮದ್ ಇಕ್ಬಾಲ್ ದೂರಿದರು.
ಬಿ.ಸಿ. ರೋಡ್‌ನಲ್ಲಿ ಖಾಸಗಿ ಸಂಘಟನೆ ನಡೆಸಿದ ಜಿಲ್ಲಾ ಮಟ್ಟದ ಜಾನಪದ ಕಲೋತ್ಸವಕ್ಕೆ ಧನ ಸಹಾಯ ನೀಡುವಂತೆ ಪುರಸಭೆಗೆ ಅರ್ಜಿ ಸಲ್ಲಿಸಿದ್ದು ಕಾರ್ಯಕ್ರಮದ ಪುರಸಭಾ ಸದಸ್ಯರಿಗೆ ಆಮಂತ್ರಣ ಪತ್ರ ನೀಡುವ ಸೌಜನ್ಯ ತೋರಿಸಿಲ್ಲ ಎಂದು ಚಂಚಲಾಕ್ಷಿ ಆರೋಪಿಸಿದರು.
ಹಕ್ಕುಪತ್ರ ವಾಪಸಾತಿಗೆ ಒತ್ತಾಯ
ಆಶ್ರಯ ಯೋಜನೆಯಲ್ಲಿ ಸಾಲಮನ್ನಾ ಸೌಲಭ್ಯ ಪಡೆದ ಫಲಾನುಭವಿಗಳು ಅಡವಿಟ್ಟ ಹಕ್ಕುಪತ್ರ ಮತ್ತೆ ವಾಪಾಸು ನೀಡಲು ಪುರಸಭೆ ಮುಂದಾಗಬೇಕು ಎಂದು ಪುರಸಭಾ ಸದಸ್ಯರಾದ ವಾಸು ಪೂಜಾರಿ, ಗಂಗಾಧರ ಪೂಜಾರಿ, ಪ್ರವೀಣ್ ಬಿ. ಮುಖ್ಯಾಧಿಕಾರಿಯನ್ನು ಆಗ್ರಹಿಸಿದರು.
ಕಂಚಿನಡ್ಕಪದವು ತ್ಯಾಜ್ಯ ಘಟಕ
ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಈಗಾಗಲೇ ನ್ಯಾಯಾಲಯ ಆದೇಶಿಸಿದ್ದು ಕಾಮಗಾರಿಯನ್ನು ಸೌಹಾರ್ದಯುತವಾಗಿ ಪೂರ್ಣಗೊಳಿಸುವುದಾಗಿ ಇದೇ ಸಂದರ್ಭದಲ್ಲಿ ಅಧ್ಯಕ್ಷರು ಸ್ಪಷ್ಟನೆ ನೀಡಿದರು.
ಸದಸ್ಯರಾದ ದೇವದಾಸ ಶೆಟ್ಟಿ, ಜಗದೀಶ ಕುಂದರ್, ಗೋವಿಂದ ಪ್ರಭು, ಮುನೀಶ್ ಅಲಿ, ಜೆಸಿಂತಾ ಡಿ’ಸೋಜಾ, ಭಾಸ್ಕರ ಟೈಲರ್, ವಸಂತಿ ಚಂದಪ್ಪ, ಯಾಸ್ಮಿನ್, ಸುಗಣಾ ಕಿಣಿ, ಬಿ. ಮೋಹನ, ಪ್ರವೀಣ್ ಕಿಣಿ, ಮಹಮ್ಮದ್ ಶರೀಫ್ ಮತ್ತು ಇತರ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು,ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ಮ್ಯಾನೇಜರ್ ಲೀಲಾವತಿ, ಅಧಿಕಾರಿಗಳಾದ ಮತ್ತಡಿ, ಉಮಾವತಿ, ರತ್ನಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.