ಆರತಿ ಬೆಳಗಿ ಪುಟಾಣಿಗಳಿಗೆ ಸ್ವಾಗತ
ಬಂಟ್ವಾಳ: ಶಾಲಾ ಪ್ರಾರಂಭೋತ್ಸವ
Team Udayavani, May 30, 2019, 6:00 AM IST
ಬಂಟ್ವಾಳ: ತಾಲೂಕಿನಲ್ಲಿ 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೇ 29ರಂದು ಪ್ರಾಥಮಿಕ ಶಾಲಾರಂಭ ಸಂಭ್ರಮವನ್ನು ಆಚರಿಸಿದರು. ಹೊಸ ಬಟ್ಟೆ, ಚೀಲ, ಪುಸ್ತಕ, ನಾಡಿನ ಹಿರಿಯರ ಉಪಸ್ಥಿತಿ, ಶಾಲೆಯ ಶಿಕ್ಷಕ-ಶಿಕ್ಷಕಿಯರ ಅಭಿಮಾನದ ಪ್ರೀತಿಯ ಸವಿನುಡಿ, ಹೆತ್ತವರಿಂದ ಬೆಂಗಾವಲು, ಶಾಲೆಯಲ್ಲಿ ಬೆಳಗ್ಗೆ ಬಂದಾಗ ಸ್ವಾಗತ, ಸಿಹಿ ಹಂಚಿ ಖುಷಿ ಪಡಿಸಿದ್ದಲ್ಲದೆ, ಫೋಟೋ ಕ್ಲಿಕ್ಕಿಸಿಕೊಂಡ ಸಂಭ್ರಮವು ದೊರೆಯಿತು.
ಶಾಲಾ ಪರಿಸರವನ್ನು ಶಾಲಾ ಶಿಕ್ಷಕರು, ಸಿಬಂದಿವರ್ಗ ತಳಿರು ತೋರಣಗಳಿಂದ ಶೃಂಗರಿಸಿದ್ದರು. ಅಜ್ಜಿಬೆಟ್ಟು, ಕಲ್ಲಡ್ಕ ಹಿ.ಪ್ರಾ.ಶಾಲೆಗಳಲ್ಲಿ ಸರಕಾರದ ಆದೇಶ ದಂತೆ ಈಗಾಗಲೇ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಎಲ್ಲ ಸಿದ್ಧತೆ ಮಾಡ ಲಾಗಿದೆ. ದಡ್ಡಲಕಾಡು ಹಿ.ಪ್ರಾ.ಶಾಲೆ ಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡುತ್ತಿರುವುದರಿಂದ ದಾಖಲೆ ಮಟ್ಟದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆಗಿದೆ. ಬೊಂಡಾಲ, ದಡ್ಡಲಕಾಡು, ವೀರಕಂಭ ಶಾಲೆಗಳಲ್ಲಿ ವಿಶೇಷ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಯಿತು.
ಇರಾ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದಲ್ಲಿ ಮಕ್ಕಳನ್ನು ಸುಂದರ ಉಡುಪುಗಳಿಂದ ಸಿಂಗರಿಸಿ, ವಾದ್ಯ ನುಡಿಸಿ, ಪುಷ್ಪಾರ್ಚನೆ ಮಾಡಿ, ಬಿಸ್ಕಿಟ್ ನೀಡಿ ಸ್ವಾಗತಿಸಲಾಯಿತು. ಶಾಲಾ ಶಿಕ್ಷಕಿಯರು, ಹೆತ್ತವರು ಪಾಲ್ಗೊಂಡಿದ್ದರು. ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಶಾಲೆ ನಿಮ್ಮ ದೇಗುಲ, ಇಲ್ಲಿ ನೀವು ಪ್ರಾಥಮಿಕ ಶಿಕ್ಷಣ ಪಡೆದು ಉನ್ನತ ಮಟ್ಟಕ್ಕೆ ಏರಬೇಕು. ಶಾಲೆ, ಊರಿಗೆ ಕೀರ್ತಿ ತರಬೇಕು ಎಂದು ಹಾರೈಸಿದರು.
ಸಿಹಿಯೂಟ
ಶಾಲೆಯ ಆರಂಭದ ದಿನದಂದು ಶಾಲೆಯ ಎಲ್ಲ ಮಕ್ಕಳಿಗೆ ಬಿಸಿಯೂಟ, ಸಿಹಿಯೂಟ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿಗೆ ಕೊರತೆ ಆಗುವ 102 ಹೊಸ ಗೌರವ ಶಿಕ್ಷಕರ ನೇಮಕಾತಿ ಆದೇಶ ಆಗಿದೆ. ಕುಡಿಯುವ ನೀರಿನ ಕೊರತೆ ಎದುರಿಸುವ ಶಾಲೆಗಳ ಮುಖ್ಯಸ್ಥರು ಸಾಧ್ಯವಿರುವ ಮೂಲಗಳಿಂದ ನೀರು ಸಂಗ್ರಹಿಸುವ ಕ್ರಮ ತೆಗೆದುಕೊಂಡು ಅವಶ್ಯ ಹಂಚಿಕೆಯನ್ನು ಬಳಸಿಕೊಳ್ಳುವಂತೆಯೂ ತಾ.ಪಂ. ಕಾ.ನಿ. ಅಧಿಕಾರಿಯವರು ಸೂಚಿಸಿದ್ದಾರೆ.
ತಾ|ನಲ್ಲಿ ಈಗಾಗಲೇ ಹೆಚ್ಚುವರಿ ಶಿಕ್ಷಕರ ಲಿಸ್ಟ್ ಕಳೆದ ಶೈಕ್ಷಣಿಕ ವರ್ಷದಲ್ಲಿ ಮಾಡಲಾಗಿತ್ತು. ಅನಂತರ ಸರಕಾರದ ಸೂಚನೆಯಂತೆ ಯಾವುದೇ ವರ್ಗಾವಣೆ ನಡೆದಿರಲಿಲ್ಲ. ಪ್ರಸ್ತುತ 31 ಶಿಕ್ಷಕರಿಗೆ ತಾಲೂಕು ವ್ಯಾಪ್ತಿಯಲ್ಲಿ ವರ್ಗಾವಣೆ ಆದೇಶ ಆಗಿದೆ. ಅದು ಹೆಚ್ಚುವರಿ ಆದೇಶದ ಕಳೆದ ವರ್ಷದ ಕ್ರಮದಲ್ಲಿ ಆಗಿದೆ. ಪ್ರಸ್ತುತ ವರ್ಷದ ಹೊಸ ಸೇರ್ಪಡೆಯಾಗಿ ಮಕ್ಕಳ ಸಂಖ್ಯೆ ಹೆಚ್ಚಾದಲ್ಲಿ ಅಂತಹ ಶಾಲೆಯ ಶಿಕ್ಷಕರ ವರ್ಗಾವಣೆ ಮಾಹಿತಿ ಸಿಕ್ಕಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.