ಬಂಟ್ವಾಳ: ಸರಕಾರಿ ಕಟ್ಟಡಗಳಲ್ಲಿ ಸೋಲಾರ್ ಘಟಕ
ಸಮಗ್ರ ಇಂಧನ ಅಭಿವೃದ್ಧಿ ಯೋಜನೆ
Team Udayavani, Oct 5, 2019, 4:56 AM IST
ಬಿ.ಸಿ. ರೋಡ್‌ನ ಮಿನಿ ವಿಧಾನಸೌಧದ ಛಾವಣಿಯಲ್ಲಿ ಅನುಷ್ಠಾನಗೊಳಿಸಲಾದ ಸೋಲಾರ್ ಘಟಕ.
ಬಂಟ್ವಾಳ: ವಿದ್ಯುತ್ ಸ್ವಾವಲಂಬನೆ ದೃಷ್ಟಿಯಿಂದ ಸರಕಾರ ಬೇರೆ ಬೇರೆ ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳುತ್ತಿದ್ದು, ಕೇಂದ್ರ ಸರಕಾರದ ಸಮಗ್ರ ಇಂಧನ ಅಭಿವೃದ್ಧಿ ಯೋಜನೆ (ಐಪಿಡಿಎಸ್)ಯ ಮೂಲಕ ಬಂಟ್ವಾಳ ತಾ|ನಲ್ಲಿ ಒಟ್ಟು 88.80 ಲಕ್ಷ ರೂ. ವೆಚ್ಚದಲ್ಲಿ 6 ಸರಕಾರಿ ಕಟ್ಟಡಗಳಲ್ಲಿ ಸೋಲಾರ್ ಘಟಕಗಳನ್ನು ಅನುಷ್ಠಾನಗೊಳಿಸಿ ಕಾರ್ಯಾರಂಭಗೊಳಿಸಲಾಗಿದೆ.
ಸಮಗ್ರ ಇಂಧನ ಅಭಿವೃದ್ಧಿ ಯೋಜನೆ ಮೂಲಕ ಮಂಜೂರಾದ ಸೋಲಾರ್ ಘಟಕಗಳನ್ನು ಮೆಸ್ಕಾಂ ನೋಡಲ್ ಏಜೆನ್ಸಿಯಾಗಿ ಅನುಷ್ಠಾನಗೊಳಿಸುವ ಕಾರ್ಯ ಮಾಡುತ್ತಿದ್ದು, ಈ ಘಟಕಗಳಲ್ಲಿ ತಯಾರಾದ ವಿದ್ಯುತ್ ನೇರವಾಗಿ ಮೆಸ್ಕಾಂನ ಗ್ರಿಡ್‌ಗಳಿಗೆ ಪೂರೈಕೆಯಾಗುತ್ತದೆ.
ಮೆಸ್ಕಾಂನ ಬಂಟ್ವಾಳ ವಿಭಾಗ ವ್ಯಾಪ್ತಿಗೆ ಬಂಟ್ವಾಳ, ಬೆಳ್ತಂಗಡಿ ತಾ|ಗಳು ಒಳಪಡುತ್ತಿದ್ದು, ಈ ವಿಭಾಗಕ್ಕೆ ಐಪಿಡಿಎಸ್ ಮೂಲಕ ಒಟ್ಟು 142.80 ಲಕ್ಷ ರೂ. ವೆಚ್ಚದಲ್ಲಿ 8 ಸೋಲಾರ್ ಘಟಕಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಇದರಲ್ಲಿ 54 ಲಕ್ಷ ರೂ. ವೆಚ್ಚದಲ್ಲಿ ಬೆಳ್ತಂಗಡಿಯಲ್ಲಿ 2 ಘಟಕಗಳನ್ನು ಅನುಷ್ಠಾನಗೊಳಿಸಲಾಗಿದೆ. ಬಂಟ್ವಾಳದ 6 ಘಟಕಗಳು 88.80 ಲಕ್ಷ ರೂ.ಗಳಲ್ಲಿ ಅನುಷ್ಠಾನಗೊಂಡಿವೆ. ಈಗಾ ಗಲೇ ಎಲ್ಲ ಘಟಕಗಳ ಸಿಂಕ್ರೋ ನೈಝ್ ಕಾರ್ಯ ಪೂರ್ತಿಗೊಂಡಿದೆ.
ಬಂಟ್ವಾಳದಲ್ಲಿ 6 ಘಟಕಗಳು
ಬಂಟ್ವಾಳದಲ್ಲಿ ಮೆಸ್ಕಾಂನ ಬಂಟ್ವಾಳ-1 ಮತ್ತು 2ರ ಉಪವಿಭಾಗದ ಮೂಲಕ ಒಟ್ಟು 6 ಸೋಲಾರ್ ಘಟಕ ಗಳನ್ನು ಅನುಷ್ಠಾನಗೊಳಿಸಲಾಗಿದೆ. ಬಂಟ್ವಾಳ-1ರ ವ್ಯಾಪ್ತಿಯಲ್ಲಿ ಬಿ.ಸಿ. ರೋಡ್‌ನಲ್ಲಿರುವ ತಾ.ಪಂ. ಕಚೇರಿ ಕಟ್ಟಡದಲ್ಲಿ 24.32 ಕೆಡಬ್ಲ್ಯುಎಚ್( ಕಿಲೋ ವ್ಯಾಟ್/ಹವರ್) ಸಾಮರ್ಥ್ಯದ ಘಟಕವನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಪೂರ್ತಿಗೊಳಿಸಲಾಗಿದೆ.
ಬಂಟ್ವಾಳ-2ರ ವ್ಯಾಪ್ತಿಯ ಬಂಟ್ವಾಳ ಸರಕಾರಿ ಆಸ್ಪತ್ರೆ ಕಟ್ಟಡದಲ್ಲಿ 33.28 ಕೆಡಬ್ಲ್ಯುಎಚ್ ಸಾಮರ್ಥ್ಯದ ಘಟಕವು ಕಳೆದ ಮಾರ್ಚ್ ಅಂತ್ಯಕ್ಕೆ ಕಾರ್ಯಾರಂಭ ಗೊಂಡಿದೆ. ಬಂಟ್ವಾಳ ನಿರೀಕ್ಷಣ ಮಂದಿ ರದ ಕಟ್ಟಡದಲ್ಲಿ 23.68 ಕೆಡಬ್ಲ್ಯುಎಚ್ ಸಾಮರ್ಥ್ಯದ ಘಟಕ ಕಳೆದ ವರ್ಷ ನವೆಂಬರ್‌ನಲ್ಲಿ ಅನುಷ್ಠಾನಗೊಂಡಿದೆ.
ಬಂಟ್ವಾಳ-1ರ ವ್ಯಾಪ್ತಿಯ ಬಿ.ಸಿ. ರೋಡ್‌ನ ಕೋರ್ಟ್ ಕಟ್ಟಡದಲ್ಲಿ 30 ಕೆಡಬ್ಲ್ಯುಎಚ್ ಸಾಮರ್ಥ್ಯದ ಘಟಕ ಕಳೆದ ವರ್ಷ ಡಿಸೆಂಬರ್, 10.22 ಕೆಡಬ್ಲ್ಯುಎಚ್ ಸಾಮರ್ಥ್ಯದ ಘಟಕ ಕಳೆದ ವರ್ಷ ನವೆಂಬರ್‌ನಲ್ಲಿ ಕಾರ್ಯಾರಂಭಗೊಂಡಿದೆ. ಬಿ.ಸಿ. ರೋಡ್‌ನ ಮಿನಿ ವಿಧಾನಸೌಧದಲ್ಲಿ ಕೊನೆಯದಾಗಿ ಕಳೆದ ಜುಲೈ ಅಂತ್ಯಕ್ಕೆ 10.24 ಕೆಡಬ್ಲ್ಯುಎಚ್ ಸಾಮರ್ಥ್ಯದ ಘಟಕವು ಕಾರ್ಯಾರಂಭಗೊಂಡಿದೆ.
ಹೈಬ್ರಿಡ್ ಸಿಸ್ಟಂಗೆ ಬೇಡಿಕೆ
ಸರಕಾರಿ ಕಟ್ಟಡಗಳಲ್ಲಿ ಸೋಲಾರ್ ಘಟಕಗಳು ಕಾರ್ಯಾರಂಭಗೊಂಡಿದ್ದರೂ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಸೋಲಾರ್ ಸಂಪರ್ಕವೂ ಕಡಿತಗೊಳ್ಳುತ್ತದೆ. ಅಂದರೆ ಈ ಯೋಜನೆಯ ಘಟಕಗಳಲ್ಲಿ ಅದೇ ರೀತಿಯ ವ್ಯವಸ್ಥೆ ಇರುತ್ತದೆ. ಪ್ರಮುಖವಾಗಿ ಮಿನಿ ವಿಧಾನಸೌಧದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಲೂ ಕಾರ್ಯಾಚರಿಸುವ ಬ್ಯಾಟರಿ ಸೌಕರ್ಯ ಇರುವ ಹೈಬ್ರಿಡ್ ವ್ಯವಸ್ಥೆಗೆ ಬೇಡಿಕೆ ಇದೆ.
ವಿದ್ಯುತ್ ಪೂರೈಕೆ ಕಡಿತಗೊಂಡಾಗ ಜನರೇಟರ್ ಅನಿವಾರ್ಯ ವಾಗಿದ್ದು, ಅದಕ್ಕೆ ಡೀಸೆಲ್ ಹಾಕುವ ಬದಲು ಸೋಲಾರ್ ವ್ಯವಸ್ಥೆ ಇದ್ದರೆ ಅನುಕೂಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಯೋಜನೆಯಲ್ಲಿ ಆ ರೀತಿ ಮಾಡುವುದಕ್ಕೆ ಅವಕಾಶವಿಲ್ಲ. ಬ್ಯಾಟರಿ ಅಳವಡಿಸಿ ಪ್ರಯತ್ನಿಸಬಹುದು ಎಂದು ಮೆಸ್ಕಾಂ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆ.
ಮೆಸ್ಕಾಂ ಗ್ರಿಡ್‌ಗೆ ಪೂರೈಕೆ
ಬಂಟ್ವಾಳ ವಿಭಾಗ ವ್ಯಾಪ್ತಿ ಯಲ್ಲಿ ಒಟ್ಟು 142.80 ಲಕ್ಷ ರೂ. ವೆಚ್ಚದಲ್ಲಿ 8 ಸೋಲಾರ್ ಘಟಕಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ 6 ಘಟಕಗಳು ಬಂಟ್ವಾಳ ತಾ|ನ ಸರಕಾರಿ ಕಟ್ಟಡಗಳ ಛಾವಣಿಗಳಲ್ಲಿ ಅನುಷ್ಠಾನಗೊಳಿಸಿದ್ದು, ಕಾರ್ಯಾರಂಭ ಗೊಂಡಿವೆ. ಇಲ್ಲಿನ ವಿದ್ಯುತ್ ಮೆಸ್ಕಾಂ ಗ್ರಿಡ್‌ಗೆ ಪೂರೈಕೆಯಾಗುತ್ತದೆ.
- ರಾಮಚಂದ್ರ
ಎಕ್ಸಿಕ್ಯೂಟಿವ್ ಎಂಜಿನಿಯರ್, ಮೆಸ್ಕಾಂ ಬಂಟ್ವಾಳ ವಿಭಾಗ
ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.