ಬಂಟ್ವಾಳ: ರಸ್ತೆಗೆ ಬಿದ್ದ ಮರ; ಆಟೋ- ಮಾರುತಿ 800 ಜಖಂ
ಅವಘಡದಲ್ಲಿ ಏನಾಗಿದೆ ಎಂದು ವಿಚಾರಿಸದೇ ತೆರಳಿದ ಪೊಲೀಸರು; ಸ್ಥಳೀಯರ ಆಕ್ರೋಶ
Team Udayavani, Jul 15, 2022, 12:43 PM IST
ಬಂಟ್ವಾಳ: ಬಿ.ಸಿ.ರೋಡು ಕೈಕುಂಜೆ ರಸ್ತೆಯಲ್ಲಿ ತೋಟಗಾರಿಕಾ ಕಚೇರಿಯ ಬಳಿ ಗಾಳಿಗೆ ಮರವೊಂದು ಬಿದ್ದ ಪರಿಣಾಮ ಆಟೋ ರಿಕ್ಷಾ ಹಾಗೂ ಮಾರುತಿ 800 ಕಾರು ಜಖಂಗೊಂಡ ಘಟನೆ ಶುಕ್ರವಾರ ನಡೆದಿದೆ.
ಘಟನೆಯಿಂದ ಕೈಕುಂಜೆ ರಸ್ತೆಯಲ್ಲಿ ಕೆಲಹೊತ್ತು ಅಸ್ತವ್ಯಸ್ತಗೊಂಡಿತ್ತು. ಬಳಿಕ ಕ್ರೇನ್ ಮೂಲಕ ಮರವನ್ನು ತೆರವು ಕಾರ್ಯಾಚರಣೆ ನಡೆಸಲಾಯಿತು.
ಬಿ.ಸಿ.ರೋಡಿನಲ್ಲಿ ಮಧ್ಯಾಹ್ನ 12 ಸುಮಾರಿಗೆ ಮಳೆಯ ಜತೆ ಗಾಳಿ ಕೂಡ ಆಗಮಿಸಿದ್ದು, ಈ ವೇಳೆ ಮರ ಬಿದ್ದಿದೆ. ದಿನದ ಇಡೀ ಹೊತ್ತು ವಾಹನ ನಿಬಿಡ, ಜನ ನಿಬಿಡ ರಸ್ತೆಯಾಗಿದ್ದು, ಆದರೆ ಘಟನೆಯಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: ವಿವಾಹದ ಭರವಸೆ; 14 ಬಾರಿ ಗರ್ಭಪಾತ, ಆತ್ಮಹತ್ಯೆಗೆ ಶರಣಾದ ಮಹಿಳೆ
ಮರ ಬಿದ್ದ ಸಂದಂರ್ಭ ಅದೇ ರಸ್ತೆಯಲ್ಲಿ ಪೊಲೀಸರು ಸಂಚರಿಸುತ್ತಿದ್ದರೂ, ಕನಿಷ್ಟ ಪಕ್ಷ ಘಟನೆಯಲ್ಲಿ ಏನಾಗಿದೆ ಎಂದು ವಿಚಾರಿಸದೇ ತೆರಳಿರುವುದು ಸ್ಥಳೀಯರ ಕಂಗಣ್ಣಿ ಗುರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.