ಬಂಟ್ವಾಳ : ಶೆಡ್ ಮೇಲೆ ಕುಸಿದ ಗುಡ್ಡ : ಓರ್ವ ಸಾವು,ಮೂವರ ರಕ್ಷಣೆ
Team Udayavani, Jul 6, 2022, 10:23 PM IST
ಬಂಟ್ವಾಳ: ಬಂಟ್ವಾಳ: ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುವ ಕೇರಳ ಮೂಲದ ಕಾರ್ಮಿಕರು ಉಳಿದುಕೊಂಡಿದ್ದ ಶೆಡ್ ಮೇಲೆ ಗುಡ್ಡ ಜರಿದು ಬಿದ್ದು ಓರ್ವ ಮೃತಪಟ್ಟು, ಮಣ್ಣಿನಡಿ ಸಿಲುಕಿಕೊಂಡಿದ್ದ ಮೂವರನ್ನು ರಕ್ಷಿಸಿದ ಘಟನೆ ಬುಧವಾರ ಸಂಜೆ 7ರ ಸುಮಾರಿಗೆ ಬಂಟ್ವಾಳದ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ಸಂಭವಿಸಿದೆ. ಬಿಜು (46) ಮೃತಪಟ್ಟವರು.
ಪಂಜಿಕಲ್ಲಿನ ಸ್ಥಳೀಯ ಕೃಷಿಕರ ಮೂರ್ನಾಲ್ಕು ರಬ್ಬರ್ ತೋಟಗಳ ಟ್ಯಾಪಿಂಗ್ ಮಾಡುವ ಕೆಲಸ ನಿರ್ವಹಿಸುತ್ತಿದ್ದ ಕೇರಳ ಮೂಲದ ಐವರು ಕಾರ್ಮಿಕರು ಮುಕ್ಕುಡ ನಿವಾಸಿ ಹೆನ್ರಿ ಕಾರ್ಲೊ ಅವರ ಶೆಡ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ಎಂದಿನಂತೆ ಕೆಲಸ ಮುಗಿಸಿ ಮಲಗಿಕೊಂಡು ಮಾತುಕತೆಯಲ್ಲಿ ತೊಡಗಿದ್ದಾಗ ಏಕಾಏಕಿ ರಬ್ಬರ್ ಮರಗಳಿದ್ದ ಇಡೀ ಗುಡ್ಡವೇ ಶೆಡ್ ಮೇಲೆ ಬಿದ್ದಿತು. ಗುಡ್ಡ ಕುಸಿಯುವ ಶಬ್ದ ಕೇಳುತ್ತಿದ್ದಂತೆ ಅಖೀಲ್ ಅವರು ಹೊರಗೆ ಓಡಿ ಬಂದು ಅಪಾಯದಿಂದ ಪಾರಾದರು. ಉಳಿದವರು ಮಣ್ಣಿನಲ್ಲಿ ಸಿಲುಕಿಕೊಂಡರು.
ಜೋನ್ ಅವರನ್ನು ರಕ್ಷಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ, ಗಂಭೀರ ಗಾಯಗೊಂಡಿರುವ ಬಾಬು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಡ್ಡ ಕುಸಿಯುವ ವೇಳೆ ಓರ್ವ ಕಾರ್ಮಿಕ ಶೌಚಾಲಯದಲ್ಲಿದ್ದು, ತಡರಾತ್ರಿ ವರೆಗೆ ರಕ್ಷಣೆ ಸಾಧ್ಯವಾಗಿಲ್ಲ. ಶೆಡ್ ಹೊರಗೆ ನಿಲ್ಲಿಸಲಾಗಿದ್ದ ಕಾರು ಸೇರಿದಂತೆ ಇತ್ತರ ಸೊತ್ತುಗಳು ಜಖಂಗೊಂಡಿವೆ. ಹೆನ್ರಿ ಅವರ ಮನೆಯೂ ಶೆಡ್ ಇರುವ ಅಂಗಳದಲ್ಲೇ ಇದ್ದು ಘಟನೆಯಲ್ಲಿ ಮನೆಗೆ ಹಾನಿಯಾಗಿಲ್ಲ.
ಇದನ್ನೂ ಓದಿ : ಮುದ್ದೇಬಿಹಾಳ: ಶಿಕ್ಷಕನ ಮೇಲೆ ವಿದ್ಯಾರ್ಥಿನಿಯ ಪೋಷಕರಿಂದ ಗಂಭೀರ ಹಲ್ಲೆ : ಪ್ರಕರಣ ದಾಖಲು
ನಿರಂತರವಾಗಿ ಮೂರು ತಾಸಿಗೂ ಅಧಿಕ ಸಮಯ ಜೆಸಿಬಿ ಯಂತ್ರ ಬಳಸಿ ರಕ್ಷಣೆ ಕಾರ್ಯ ನಡೆಯಿತು. ಅಗ್ನಿಶಾಮಕ ಠಾಣೆಯವರು ಕೂಡ ಸಾಥ್ ನೀಡಿದ್ದರು.
ಶಾಸಕರ ಸೂಚನೆ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಘಟನೆಯ ಕುರಿತು ಮಾಹಿತಿ ಪಡೆದು ದ.ಕ. ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್, ತಹಶೀಲ್ದಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಾರ್ಮಿಕರ ರಕ್ಷಣೆಗೆ ಸೂಚನೆ ನೀಡಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಎಸ್‌ಪಿ ಹೃಷಿಕೇಶ್ ಸೋನಾವಣೆ, ಮಂಗಳೂರು ಎಸಿ ಮದನಮೋಹನ್, ತಹಶೀಲ್ದಾರ್ ಡಾ| ಸ್ಮಿತಾ ರಾಮು, ಗ್ರಾಮಾಂತರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್, ಪಿಎಸ್‌ಐ ಹರೀಶ್ ಕೆ.ಎ., ಪಂಜಿಕಲ್ಲು ಗ್ರಾ.ಪಂ. ಅಧ್ಯಕ್ಷ ಸಂಜೀವ ಪೂಜಾರಿ, ಪಿಡಿಒ ವಿದ್ಯಾಶ್ರೀ, ಗ್ರಾಮಕರಣಿಕ ಕುಮಾರ್, ಶಾಸಕರ ಆಪ್ತಸಹಾಯಕ ಶಿವಾನಂದ್, ಗ್ರಾ.ಪಂ. ಸದಸ್ಯರು, ಸ್ಥಳೀಯ ಮುಂದಾಳುಗಳು ಭೇಟಿ ನೀಡಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.