‘ಬಾರೆರ್ ಬೀರೆರ್’ ಕಿರುಚಿತ್ರದ ಲಾಂಛನ, ಧ್ವನಿ ಸುರಳಿ ಬಿಡುಗಡೆ
Team Udayavani, Oct 21, 2017, 2:35 PM IST
ಲೇಡಿಹಿಲ್ : ಸಸಿಹಿತ್ಲು ರಂಗ ಸುದರ್ಶನದ ಸಿನಿ ನಿರ್ಮಾಣ ಸಂಸ್ಥೆ ಸುದರ್ಶನ್ ಕ್ರಿಯೇಶನ್ಸ್ ನಿರ್ಮಾಣದ ‘ಬಾರೆರ್ ಬೀರೆರ್’ ತುಳು ಕಿರುಚಿತ್ರದ ಲಾಂಛನ ಮತ್ತು ಗಾನ ಸುರುಳಿಯನ್ನು ಶುಕ್ರವಾರ ನಗರದ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಲಾಯಿತು.
ಲಾಂಛನವನ್ನು ಬಿಡುಗಡೆಗೊಳಿಸಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ, ತುಳುನಾಡಿನ ಪುರಾಣ, ಇತಿಹಾಸದ ಕುರಿತು ಚಿತ್ರಗಳ ಮೂಲಕ ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೂ ಪರಿಚಯಿಸಿದಂತಾಗುತ್ತದೆ. ಕಾರಣಿಕ ಪುರುಷರಾದ ಕಾಂತಾ ಬಾರೆ-ಬೂದಾಬಾರೆ ಅವರ ಕುರಿತು ಕಿರುಚಿತ್ರ ನಿರ್ಮಿಸಿರುವುದು ಹೆಮ್ಮೆಯ ವಿಚಾರ ಎಂದರು.
ಗಾನ ಸುರುಳಿಯನ್ನು ಬಿಡುಗಡೆಗೊಳಿಸಿದ ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಮಾತನಾಡಿ, ಪತ್ರಿಕೋದ್ಯಮ, ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ‘ಬಾರೆರ್ ಬೀರೆರ್’ ಚಿತ್ರತಂಡದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಚಿತ್ರಗಳು ನಿರ್ಮಾಣಗೊಳ್ಳಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಚಿತ್ರದ ನಿರ್ಮಾಣ-ನಿರ್ವಹಣೆಯ ಕಾರ್ಯ ನಿರ್ವಹಿಸುತ್ತಿರುವ ಪವನ್ ಮಂಜೇಶ್ವರ ಉಪಸ್ಥಿತರಿದ್ದರು. ಚಿತ್ರದ ನಿರ್ದೇಶಕ ಪರಮಾನಂದ ಸಾಲ್ಯಾನ್ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bhagava: ಕೇಸರಿ ಎಂದರೆ ಭಗವಂತನ ಬಣ್ಣ : ಖರ್ಗೆ ವಿರುದ್ಧ ರಾಮಭದ್ರಾಚಾರ್ಯ ವಾಗ್ಧಾಳಿ
Mumbai: ಬಿಜೆಪಿಯನ್ನು ನಾಯಿಗೆ ಹೋಲಿಸಿದ ಕೈ ನಾಯಕ ನಾನಾ ಪಟೋಲೆ: ಟೀಕೆ
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್
Bantwala: ಮೆಲ್ಕಾರ್-ಕಲ್ಲಡ್ಕ ಮಧ್ಯೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
BGT 2024: ಆಸೀಸ್ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.