ಬೆಳುವಾಯಿ: ವಿದ್ಯುತ್ ಸ್ಪರ್ಶ; ಯುವಕ ಸಾವು
Team Udayavani, Sep 13, 2019, 5:53 AM IST
ಮೂಡುಬಿದಿರೆ: ಅಲ್ಯೂಮಿನಿಯಂ ಕೊಕ್ಕೆ ಬಳಸಿ ಅಡಿಕೆ ಕೀಳುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶವಾಗಿ ಯುವಕನೋರ್ವ ಮೃತಪಟ್ಟ ಘಟನೆ ಬೆಳುವಾಯಿಯಲ್ಲಿ ಗುರುವಾರ ಸಂಭವಿಸಿದೆ.
ಬೆಳುವಾಯಿಯ ಷಣ್ಮುಖಾನಂದ ಹಾಲ್ ಸಮೀಪದ ಮಿತ್ತ ಆನೆಬೆಟ್ಟು ನಿವಾಸಿ ಗಂಗಾಧರ ಸಾಲ್ಯಾನ್ ಅವರ ಪುತ್ರ ಕೀರ್ತಿ ಸಾಲ್ಯಾನ್ (30) ಮೃತಪಟ್ಟವರು.
ಅವರು ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅಡಿಕೆ ಕೀಳುತ್ತಿದ್ದಾಗ ಘಟನೆ ಸಂಭವಿಸಿದೆ. ವಿದ್ಯುತ್ ಆಘಾತಕ್ಕೀಡಾದ ಅವರನ್ನು ತತ್ಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ದಾರಿ ಮಧ್ಯೆಯೇ ಮೃತಪಟ್ಟರು ಎಂದು ತಿಳಿದು ಬಂದಿದೆ.
ಗಂಗಾಧರ ಸಾಲ್ಯಾನ್ ಅವರ ಏಕೈಕ ಪುತ್ರನಾಗಿದ್ದ ಕೀರ್ತಿ ಸುಮಾರು 8 ವರ್ಷ ವಿದೇಶದಲ್ಲಿದ್ದು, 3 ವರ್ಷಗಳಿಂದ ಊರಲ್ಲಿ ನೆಲೆಸಿ ಕೃಷಿ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.