ಅಪಘಾತ ನಿಯಂತ್ರಿಸಲು ಬ್ಯಾರಿಕೇಡ್ ಅಳವಡಿಕೆ
Team Udayavani, Jun 22, 2018, 12:34 PM IST
ಮಹಾನಗರ: ಏರ್‌ಫೋರ್ಟ್ ರಸ್ತೆಯಲ್ಲಿ ಬೋಂದೆಲ್ ಚರ್ಚ್ ಸಮೀಪದ ಜಂಕ್ಷನ್‌ನಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು, ಅಪಾಯ ಕಾರಿ ತಾಣವಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ ಕಾರು ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ವೀಡಿಯೋ ದೃಶ್ಯಾವಳಿ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಚಾಲಕನು ರಿವರ್ಸ್ ತೆಗೆಯುತ್ತಿದ್ದಾಗ ಪದವಿನಂಗಡಿಯಿಂದ ಬೋಂದೆಲ್ ಕಡೆಗೆ ಯುವಕನೊಬ್ಬ ವೇಗವಾಗಿ ಚಲಾಯಿಸಿಕೊಂಡು ಬಂದ ಬೈಕ್ ಕಾರಿಗೆ ಢಿಕ್ಕಿ ಹೊಡೆದು ಸಂಭವಿಸಿದ ಈ ಅಪಘಾತದ ಭೀಕರತೆ ಎಷ್ಟಿತ್ತೆಂದರೆ ಬೈಕ್ ಸವಾರ ಕಾರಿನ ಮೇಲ್ಗಡೆಯಿಂದ ಆಚೆ ಬದಿಗೆ ಎಸೆಯಲ್ಪಟ್ಟು ಕಾಂಕ್ರೀಟ್ ರಸ್ತೆಗೆ ಬಿದ್ದಿದ್ದನು. ತಲೆಗೆ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಕ್ಕೆ ಅಪಾಯವಾಗಿಲ್ಲ. ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು.
ಭೌಗೋಳಿಕ ಪರಿಸ್ಥಿತಿ
ಇಲ್ಲಿನ ಭೌಗೋಳಿಕ ಪರಿಸ್ಥಿತಿಯು ಈ ಜಂಕ್ಷನನ್ನು ಅಪಘಾತ ವಲಯವನ್ನಾಗಿಸಿದೆ. ಪದವಿನಂಗಡಿ ಪ್ರದೇಶ ಎತ್ತರದಲ್ಲಿದ್ದು, ಬೋಂದೆಲ್ ಚರ್ಚ್ ಜಂಕ್ಷನ್ ತಗ್ಗಿನಲ್ಲಿದೆ. ಅಲ್ಲಿಯೇ ಪಚ್ಚನಾಡಿ ಕಡೆಗೆ ಹೋಗುವ ಅಡ್ಡ ರಸ್ತೆ ಇದೆ. ಪದವಿನಂಗಡಿಯಿಂದ ಮಿತಿ ಮೀರಿದ ವೇಗದಲ್ಲಿ ವಾಹನಗಳು ಸಂಚರಿಸುತ್ತವೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆಗಿರುವುದರಿಂದ ರಾತ್ರಿ ಹಗಲೆನ್ನದೆ ದಿನವಿಡೀ ವಾಹನಗಳ ಓಡಾಟ ಇರುತ್ತವೆ. ಕೇರಳ ಕಡೆಯಿಂದ ಬರುವ ಮತ್ತು ಹೋಗುವ ವಾಹನಗಳ ವೇಗ ಮಿತಿಗೆ ಕಡಿವಾಣವೇ ಇರುವುದಿಲ್ಲ. ಈ ತಾಣದಲ್ಲಿ 2017 ಜನವರಿ ತಿಂಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಈ ಸಂದರ್ಭ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಬಳಿಕ ಕಳೆದ ಅಕ್ಟೋಬರ್‌ನಲ್ಲಿ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡಿದ್ದರು.
ಇಲ್ಲಿ ಬೋಂದೆಲ್ ಚರ್ಚ್ ಮತ್ತು ಶಾಲೆ, ಆಸುಪಾಸಿನಲ್ಲಿ ಅನೇಕ ಮನೆಗಳಿವೆ. ವಾಹನಗಳ ಮಿತಿ ಮೀರಿದ ವೇಗದ ಚಾಲನೆಯಿಂದಾಗಿ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟ ಬೇಕಾದ ಪರಿಸ್ಥಿತಿ ಇದೆ. ಪದೇ ಪದೆ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಹೆತ್ತವರಿಗೆ ಮತ್ತು ಸ್ಥಳೀಯರಿಗೆ ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ. ವಾಹನಗಳ ವೇಗದ ಓಡಾಟಕ್ಕೆ ಕಡಿವಾಣ ಹಾಕಬೇಕೆಂಬ ಜನರ ಕೂಗು ಕೊನೆಗೂ ಜಿಲ್ಲಾಡಳಿತಕ್ಕೆ ಕೇಳಿಸಿದೆ.
ವಿವಿಐಪಿಗಳು ಓಡಾಡುವ ರಸ್ತೆ
ಇಲ್ಲಿ ಅಪಘಾತಗಳು ಸಂಭವಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದರೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಆಗಿರುವುದರಿಂದ ವಿಐಪಿಗಳ ಓಡಾಟವೂ ಈ ರಸ್ತೆಯಲ್ಲಿ ಜಾಸ್ತಿ. ಹಾಗಾಗಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ಇಲ್ಲಿ ರಸ್ತೆ ಹಂಪ್ ಹಾಕಲು ಸಾಧ್ಯವಾಗದು. ಒಂದೊಮ್ಮೆ ಹಂಪ್ ಹಾಕಿದರೂ ವಿಐಪಿಗಳ ಆಗಮನದ ಸಂದರ್ಭ ಅದನ್ನು ತೆರವು ಮಾಡ ಬೇಕಾಗುತ್ತದೆ. ಒಂದು ಹಂಪ್ ಹಾಕಲು ಸುಮಾರು 35,000 ರೂ. ಖರ್ಚು ತಗಲುತ್ತದೆ. ಹಾಗಾಗಿ ಪದೇ ಪದೇ ಹಂಪ್‌ಗ್ಳನ್ನು ಹಾಕುವುದು ಮತ್ತು ಅದನ್ನು ತೆರವುಗೊಳಿಸುವುದರಿಂದ ಸರಕಾರಕ್ಕೇ ನಷ್ಟ. ಹಾಗಾಗಿ ಹಂಪ್ ಹಾಕದಿರಲು ನಿರ್ಣಯಿಸಲಾಗಿದೆ ಎಂದು ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ತಿಳಿಸಿದ್ದಾರೆ.
ಅಪಘಾತ ತಡೆಯಲು ಯತ್ನ
ಹಂಪ್ ಗಳನ್ನು ಹಾಕುವ ಬದಲು ಇಲ್ಲಿ ಹಗಲು ಹೊತ್ತಿನಲ್ಲಿ ಅಂದರೆ ಬೆಳಗ್ಗಿನಿಂದ ಸಂಜೆ 5 ಗಂಟೆ ತನಕ ಬ್ಯಾರಿಕೇಡ್ ಹಾಕಿ ವಾಹನಗಳ ವೇಗ ನಿಯಂತ್ರಿಸಲು ಹಾಗೂ ಅಪಘಾತಗಳನ್ನು ತಡೆಯಲು ತೀರ್ಮಾನಿಸಲಾಗಿದೆ. ರಾತ್ರಿ ವೇಳೆಯೂ ಬ್ಯಾರಿಕೇಡ್ ಹಾಕಿದರೆ ವಾಹನ ಚಾಲಕರು ಅದಕ್ಕೆ ಢಿಕ್ಕಿ ಹೊಡೆದು ಅಪಘಾತಗಳು ಸಂಭವಿಸುವ ಮತ್ತು ಬ್ಯಾರಿಕೇಡ್‌ಗಳಿಗೂ ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಬ್ಯಾರಿಕೇಡ್‌ಗಳನ್ನು ಬೆಳಗ್ಗಿನ ಹೊತ್ತು ಇರಿಸಲು ಮತ್ತು ಸಂಜೆ ಹೊತ್ತು ತೆಗೆದು ಬದಿಗಿರಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸ್ಥಳೀಯ ಶಾಲೆಯ ಆಡಳಿತವನ್ನು ಕೋರಲಾಗಿದ್ದು, ಇದಕ್ಕೆ ಶಾಲಾಡಳಿತ ಒಪ್ಪಿದೆ. ಹಾಗಾಗಿ ಬುಧವಾರದಿಂದಲೇ ಇಲ್ಲಿ ಬ್ಯಾರಿಕೆಯಡ್ ಹಾಕಲಾಗಿದೆ. ಇದಲ್ಲದೆ ಈ ಪ್ರದೇಶದ ರಸ್ತೆಯ ಬದಿ ಅಲ್ಲಲ್ಲಿ ಅಪಘಾತವಲಯ ಎಂಬುದಾಗಿ ನಾಮಫಲಕ ಹಾಕಲು ಕೂಡಾ ಕ್ರಮ ವಹಿಸಲಾಗುವುದು.
– ಮಂಜುನಾಥ ಶೆಟ್ಟಿ, ಎಸಿಪಿ (ಟ್ರಾಫಿಕ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.