‘ಬಸವಣ್ಣನ ಚಿಂತನೆಯಲ್ಲಿ ಭಾರತೀಯರ ಜೀವನದ ತತ್ತ್ವ ಸಾರವಿದೆ’
Team Udayavani, Apr 19, 2018, 10:04 AM IST
ಮಹಾನಗರ : ಬಸವಣ್ಣ ಕೇವಲ ದಾರ್ಶನಿಕರಲ್ಲ. ಅವರು ಸಮರ್ಥ ಆಡಳಿತಾಧಿಕಾರಿ. ಅವರ ಚಿಂತನೆಯಲ್ಲಿ ಭಾರತೀಯರ ಜೀವನದ ತತ್ತ್ವ ಸಾರವಿದೆ. ಬಸವಣ್ಣ ನಮ್ಮೆಲ್ಲರ ಜೀವನದ ಮಾರ್ಗದರ್ಶಕ ಎಂದರೆ ತಪ್ಪಾಗಲಾರದು ಎಂದು ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಂಯುಕ್ತಾಶ್ರಯದಲ್ಲಿ ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ತುಳುಭವನದಲ್ಲಿ ಬುಧವಾರ ಆಯೋಜಿಸಿದ ಬಸವೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಎಲ್ಲರೂ ಒಂದಾಗಬೇಕು ಎಂಬುವುದು ಬಸವೇಶ್ವರ ಅವರ ತತ್ತ್ವವಾಗಿತ್ತು. ಸದ್ಯ ಇಡೀ ಜಗತ್ತೇ ಬಸವಣ್ಣ ಅವರು ಆರಾಧಿಸುವ ನೆಲೆಗೆ ಹೋಗಿದೆ. ಬಸವಣ್ಣ ಅವರು ಮನುಕುಲಕ್ಕೆ ಮಾರ್ಗದರ್ಶಕರಾಗಿದ್ದವರು ಎಂದರು.
ಬಸವತತ್ತ್ವ ಅನುಸರಿಸಿ
ಇನ್ನೇನು ಚುನಾವಣೆ ಬರುತ್ತಿದ್ದು, ಈ ಸಮಯದಲ್ಲಿ ಯೋಗ್ಯವಾದ ಜನನಾಯ ಕನನ್ನು ಚುನಾಯಿಸಲು ಬಸವತತ್ತ್ವವನ್ನು ಅನುಸರಿಸಬೇಕು ಎಂದರು.
ಬಸವಣ್ಣನವರ ಕಲ್ಪನೆಯೇ ಮಾದರಿ
ಕರಾವಳಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಚೆನ್ನಸ್ವಾಮಿ ಮಾತ ನಾಡಿ, ಸಮಾನತೆ, ಸರಳತೆಗೆ ಬಸವಣ್ಣನವರ ಕಲ್ಪನೆಯೇ ಮಾದರಿ. ಲಿಂಗ, ಜಂಗಮ, ದಾಸೋಹವನ್ನು ಪರಿಪಾಲನೆ ಮಾಡಿದರೆ ಅಲ್ಲಿ ಸರಳತೆ ಇದೆ ಎಂದು ಬಸವಣ್ಣನವರು ತೋರಿಸಿದ್ದಾರೆ. ಜೀವನದಲ್ಲಿ ಛಲವಿರಬೇಕು. ಆಗ ಒಳ್ಳೆಯ ಜೀವನ ನಿರ್ವಹಣೆ ನಡೆಸಲು ಸಾಧ್ಯ ಎಂದು ವಿವರಿಸಿದರು.
ಅಕ್ಕಮಹಾದೇವಿ ಸಂಘದ ನಿರ್ಮಲಾ ಚಂದ್ರಶೇಖರ್, ಉಪನ್ಯಾಸಕಿ ಚಂದ್ರಾವತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.