ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪ್ರಶಸ್ತಿ ನಾಮನಿರ್ದೇಶನಕ್ಕೆ ಅರ್ಜಿ ಆಹ್ವಾನ
Team Udayavani, Jul 25, 2019, 5:16 AM IST
ಮಂಗಳೂರು: ವಿಶ್ವ ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈ ಅವರು 80 ವರ್ಷ ಪೂರೈಸಿದ ಸಂದರ್ಭದಲ್ಲಿ ಶಕ್ತಿನಗರ ವಿಶ್ವ ಕೊಂಕಣಿ ಕೇಂದ್ರವು ಬಸ್ತಿ ವಾಮನ ಶೆಣೈ ಅವರ ಹೆಸರಿನಲ್ಲಿ ಎರಡು ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದೆ.
ಕೊಂಕಣಿ ಭಾಷಿಕರಾಗಿ
ಶೈಕ್ಷಣಿಕ, ಆರೋಗ್ಯ, ವೈದ್ಯಕೀಯ, ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿ ಉನ್ನತ ಸಾಧನೆಗೈದ ವ್ಯಕ್ತಿ ಮಾತ್ರವಲ್ಲದೇ ಕೊಂಕಣಿ ಭಾಷಿಕರಿಂದ ಸ್ಥಾಪಿಸಲಾದ ಶಿಕ್ಷಣಸಂಸ್ಥೆ, ಕೊಂಕಣಿ ಭಾಷಿಕರ ಆಡಳಿತ ವಿರುವ ಸಂಸ್ಥೆಗಳು, ಸಮಾಜ ಸೇವೆ, ಆರೋಗ್ಯ, ವಿಜ್ಞಾನ, ಪತ್ರಿಕಾರಂಗ, ಕಲೆ, ವಾಣಿಜ್ಯೋದ್ಯಮ, ಕ್ರೀಡೆಯ ಸಾಧಕರು ಪ್ರಶಸ್ತಿಗೆ ಅರ್ಹರಾಗಿರು ತ್ತಾರೆ. 2030 ಇಸವಿಯ ವೇಳೆಗೆ ಕೊಂಕಣಿ ಸಮಾಜವನ್ನು ಒಂದು ಬಲಿಷ್ಠ ಸಮಾಜವಾಗಿ ಪರಿವರ್ತಿಸಬೇಕೆಂದು ಕನಸು ಕಂಡ ಟಿ. ವಿ. ಮೋಹನದಾಸ ಪೈ ಅವರು ಈ ಪ್ರಶಸ್ತಿಗಳನ್ನು ಪ್ರಾಯೋಜಿಸಿರುತ್ತಾರೆ.2 ಪ್ರಶಸ್ತಿಗಳು ತಲಾ 1 ಲಕ್ಷ ರೂ.ಗಳನ್ನು ಹೊಂದಿರುತ್ತವೆ. ಪುರುಷರಿಗೆ ಹಾಗೂ ಮಹಿಳೆಯರಿಗಾಗಿ ತಲಾ ಒಂದು ಪ್ರಶಸ್ತಿಯನ್ನು ಪ್ರಮಾಣಪತ್ರ ದೊಂದಿಗೆ ಪ್ರದಾನ ಮಾಡ ಲಾಗುತ್ತದೆ.
ನಾಮನಿರ್ದೇಶನ ನಿಯಮ
ನಾಮ ನಿರ್ದೇಶನ ಗೊಂಡ ವರು ಕೊಂಕಣಿ ಮಾತೃ ಭಾಷೆ ಯಾಗಿರುವ ಏಕ ವ್ಯಕ್ತಿ ಯಾಗಿರಬಹುದು ಅಥವಾ ಒಂದು ಕೊಂಕಣಿ ಭಾಷಿಕ ರನ್ನೊಳ ಗೊಂಡ ಸಂಸ್ಥೆಯಾಗಿ ರಲೂಬಹುದು ಮತ್ತು 25 ವರ್ಷಕ್ಕೆ ಮೇಲ್ಪಟ್ಟಿರಬೇಕು. ನಾಮ ನಿರ್ದೇಶಿತ ಸಂಸ್ಥೆಗಳು ಕೊಂಕಣಿ ಮಾತೃ ಭಾಷಿ ಕರ ಆಡಳಿತಕ್ಕೊಳ ಪಟ್ಟಿರ ಬೇಕು ಮತ್ತು ಅವುಗಳ ಸ್ಥಾಪಕರು ಕೊಂಕಣಿ ಭಾಷಿಕ ರಾಗಿರಬೇಕು. ನಾಮನಿರ್ದೇಶನದ ಸಂದರ್ಭ ಸಂಸ್ಥೆಯುಕನಿಷ್ಠ 10 ವರ್ಷದಿಂದ ಅಸ್ತಿತ್ವದಲ್ಲಿ ಇರ ಬೇಕಾ ಗು ತ್ತದೆ. ವ್ಯಕ್ತಿಗಳು ಅಥವಾ ಸಂಸ್ಥೆಗಳು ಸ್ವತಃ ತಮ್ಮ ಬಗ್ಗೆ ನಾಮ ನಿರ್ದೇಶನ ಮಾಡಬಹುದಾಗಿದೆ.
ಅರ್ಜಿಗಳನ್ನು www.vishwa konkani.org ಅಂತರ್ಜಾಲದಿಂದ ಪಡೆದು ಭರ್ತಿ ಮಾಡಿ “ಅಧ್ಯಕ್ಷರು, ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಆಯ್ಕೆ ಸಮಿತಿ, ವಿಶ್ವ ಕೊಂಕಣಿ ಕೇಂದ್ರ, ಲೋಬೊ ಪ್ರಭು ನಗರ ಕೊಂಕಣಿ ಗಾಂವ್, ಶಕ್ತಿನಗರ, ಮಂಗಳೂರು – ಈ ವಿಳಾಸಕ್ಕೆ ಸೆ. 10ರ ಒಳಗೆ ಕಳುಹಿಸಿ ಕೊಡಬೇಕು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್‌ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
Mangaluru: ಅಪಾರ್ಟ್‌ಮೆಂಟ್, ಮಾಲ್‌ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
Kulur: ಗೈಲ್ ಪೈಪ್‌ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.