Theft Case; ಬ್ಯಾಟರಿ, ಕಾಂಪೌಂಡ್ ಗೇಟ್ಗಳ ಕಳವು: ಆರೋಪಿಯ ಬಂಧನ
Team Udayavani, Jul 7, 2024, 11:20 PM IST
ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ಗಳ ಬ್ಯಾಟರಿ ಮತ್ತು ಕಾಂಪೌಂಡ್ ಗೇಟ್ಗಳನ್ನು ಕಳವು ಮಾಡಿದ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ಕೊಲ್ಲಂನ ಇಟ್ಟಿ ಪನಿಕರ್ (58) ಬಂಧಿತ ಆರೋಪಿ. ಈತನಿಂದ ಮೊಬೈಲ್ ಟವರ್ಗೆ ಸಂಬಂಧಿಸಿದ ಒಟ್ಟು ಅಂದಾಜು 2.56 ಲಕ್ಷ ರೂ. ಮೌಲ್ಯದ 39 ಬ್ಯಾಟರಿಗಳು, ಅಂದಾಜು 52,000 ರೂ. ಮೌಲ್ಯದ 3 ಕಬ್ಬಿಣದ ಗೇಟ್ಗಳು, ಅಂದಾಜು 5 ಲಕ್ಷ ರೂ. ಮೌಲ್ಯದ ಪಿಕಪ್ ಗೂಡ್ಸ್ ಟೆಂಪೊ ಸೇರಿದಂತೆ 8.08 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್ ಮತ್ತು ದಿನೇಶ್ ಕುಮಾರ್ ನಿರ್ದೇಶನದಂತೆ ಎಸಿಪಿ ಮನೋಜ್ ಕುಮಾರ್, ಮೂಲ್ಕಿ ಠಾಣಾ ನಿರೀಕ್ಷಕ ವಿದ್ಯಾಧರ ಡಿ.ಬಾಯ್ಕೆರಿಕರ್, ಪಿಎಸ್ಐ ವಿನಾಯಕ ಭಾವಿಕಟ್ಟಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್ಐ ಸಂಜೀವ ಎ.ಪಿ., ಹೆಡ್ಕಾನ್ಸ್ಟೆಬಲ್ ಕಿಶೋರ್ ಕೋಟ್ಯಾನ್, ಮಹೇಶ್, ಶಶಿಧರ, ಚಂದ್ರಶೇಖರ್, ವಿಶ್ವನಾಥ, ವೀರೇಶ್, ಕಾನ್ಸ್ಟೆಬಲ್ಗಳಾದ ಅರುಣ್ ಕುಮಾರ್, ಸುನೀಲ್, ಚಿತ್ರಾ ಅವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.