ರಾಷ್ಟ್ರ ಪ್ರೇಮ ಯುವ ಜನತೆಯ ಧ್ಯೇಯವಾಗಿರಲಿ: ಸಚಿವ ಬಿ.ಸಿ. ನಾಗೇಶ್
Team Udayavani, Jan 18, 2023, 11:43 PM IST
ಸುಬ್ರಹ್ಮಣ್ಯ: ಇಂದು ಭಾರತ ಜಗತ್ತಿನಲ್ಲೇ ಗುರುತಿಸಿಕೊಂಡಿದೆ. ಪ್ರಪಂಚದ ಸಮಸ್ಯೆಗಳಿಗೆ ಭಾರತದಲ್ಲಿ ಉತ್ತರ ಸಿಗುತ್ತದೆ ಎಂದು ತಿಳಿಯುವ ಕಾಲದವರೆಗೆ ಭಾರತ ಬೆಳೆದಿದೆ. ರಾಷ್ಟ್ರ ಭಕ್ತಿ, ರಾಷ್ಟ್ರ ಪ್ರೇಮ ಯುವ ಜನತೆಯ ಧ್ಯೇಯವಾಗಿರಲಿ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ. ಜಿಲ್ಲೆ, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ಜಿಲ್ಲಾ ಯುವಜನ ಒಕ್ಕೂಟ ಮಂಗಳೂರು ವತಿಯಿಂದ ಬುಧವಾರ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆದ ಯುವ ಸಮ್ಮೇಳನ ಮತ್ತು ತರಬೇತಿ ಕಾರ್ಯಾಗಾರ ಹಾಗೂ ರಾಜ್ಯ ಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಇಂದು ಸ್ವಾಮಿ ವಿವೇಕಾನಂದರ ಜೀವನ, ಆದರ್ಶಗಳನ್ನು ಮೈಗೂಡಿಸಿಕೊಂಡು, ರಾಷ್ಟ್ರೀಯ ಭಾವನೆ ಬೆಳೆಸಿಕೊಂಡು ಸಮಾಜಮುಖೀ ಜೀವನ ನಡೆಸಬೇಕಿದೆ ಎಂದ ಅವರು ಯುವಜನ ಒಕ್ಕೂಟ ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾ ಸಿದರು.
ಅಧ್ಯಕ್ಷತೆ ವಹಿಸಿದ್ದ ಸಚಿವ ಎಸ್. ಅಂಗಾರ ಮಾತನಾಡಿ, ಸಂಘ, ಸಂಘಟನೆಗಳು ಉದ್ದೇಶ ಇಟ್ಟುಕೊಂಡು ಮುಂದು ವರಿದಲ್ಲಿ ಗುರಿ ಮುಟ್ಟಲು ಸಾಧ್ಯ. ಸ್ವಾಮಿ ವಿವೇಕಾನಂದರ ಜೀವನ ನಮ್ಮ ಉಳಿವಿಗೆ ಸಹಕಾರಿ ಎಂದರು.
ಪ್ರಶಸ್ತಿ ಪ್ರದಾನ
ಜಿಲ್ಲೆಗೆ ಒಂದರಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ರಾಜ್ಯ ಮಟ್ಟದ ಯುವ ಪ್ರಶಸ್ತಿ, ಯುವಕ ಮಂಡಲಗಳಿಗೆ ಸಾಂ ಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದಿವ್ಯಶ್ರೀ (ದ.ಕ.), ರಿತೇಶ್ ಆರ್. ಸುವರ್ಣ (ಉಡುಪಿ), ಎಂ.ಡಿ. ಝಕೀರ್ (ಬೀದರ್), ಯಲ್ಲಾಲಿಂಗ ಝರಣಪ್ಪ ದಂಢೀನ್ (ಕಲಬುರಗಿ), ಪ್ರಶಾಂತ್ ಕಾಳೆ (ವಿಜಯಪುರ), ಮಲ್ಲಿಕಾರ್ಜುನ ಕಟ್ಟೆಮನಿ (ಯಾದಗಿರಿ), ಮಹದೇವ್ (ಬೆಳಗಾವಿ), ಸಾಗರ್ ಉಳ್ಳಾಗಡ್ಡಿ (ಬಾಗಲಕೋಟೆ), ರಮೇಶ್ (ರಾಯಚೂರು), ವಿಶ್ವನಾಥ್ ಹಿರೇಗೌಡರ್ (ಕೊಪ್ಪಳ), ಮೆಹಬೂಬ್ ತುಂಬರಮಟ್ಟಿ (ಗದಗ), ಶಿವಪ್ರಸಾದ (ಮದನಬಾವಿ), ವಿನಾಯಕ ಭಾಸ್ಕರ (ಉ.ಕ.), ಐಶ್ವರ್ಯಾ ಮಂಜುನಾಥ್ (ಹಾವೇರಿ), ನಾಗರತ್ನಾ (ಬಳ್ಳಾರಿ), ಡಿ.ಬಿ. ಶಶಿಕುಮಾರ್ (ದಾವಣಗೆರೆ), ಶೇಖ್ ಹಸೇನ್ ಕೆ. (ಶಿವಮೊಗ್ಗ), ಪ್ರದೀಪ್ ಯಾದವ್ (ಚಿತ್ರದುರ್ಗ), ಬಸವರಾಜ್ (ಚಿಕ್ಕಮಗಳೂರು), ದಿನೇಶ್ ಬಿ.ಎಲ್. (ತುಮಕೂರು), ಹರಿಪ್ರಿಯಾ ಹೊಸಮನಿ (ಚಿಕ್ಕಬಳ್ಳಾಪುರ), ಹರೀಶ್ (ಹಾಸನ), ಜೈ ಚಂದ್ರ (ಬೆಂಗಳೂರು ಗ್ರಾ.), ಪಿ.ಬಿ. ಶ್ರೀನಿವಾಸ್ (ಬೆಂಗಳೂರು ನಗರ), ಮಂಜುನಾಥ್ ಆರ್. (ಕೋಲಾರ), ರಾಜೇಶ್ ಟಿ.ಬಿ. (ಮಂಡ್ಯ), ಲಕ್ಷ್ಮೀ ಕಿಶೋರ್ ಅರಸ್ (ರಾಮನಗರ), ಕೆ.ಎಂ. ಮೋಹನ್ (ಕೊಡಗು), ತೇಜಸ್ ನಾಯಕ್ (ಮೈಸೂರು), ಶರಣ್ಯ ಎಸ್. ಋಗ್ವೇದಿ (ಚಾಮರಾಜನಗರ), ಎಚ್. ಪಂಪಾಪತಿ (ವಿಜಯನಗರ) ಅವರು ಪ್ರಶಸ್ತಿ ಸ್ವೀಕರಿಸಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ| ಎಸ್. ಬಾಲಾಜಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, ಸದಸ್ಯ ಮನೋಹರ ರೈ, ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಲಲಿತಾ ಗುಂಡಡ್ಕ, ಸದಸ್ಯರಾದ ರಾಜೇಶ್ ಎನ್.ಎಸ್., ಗಿರೀಶ್ ಪೈಲಾಜೆ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು, ಕೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ದಿನೇಶ್ ಪಿ.ಟಿ., ಎಸ್‌ಎಸ್ ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್,
ಪ್ರಮುಖರಾದ ತೇಜಸ್ವಿ ಕಡಪಲ, ಶಿವಪ್ರಸಾದ್ ಮೈಲೇರಿ ವೇದಿಕೆಯಲ್ಲಿದ್ದರು. ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿದರು. ಜಿಲ್ಲಾ ನೋಡೆಲ್ ಅಧಿಕಾರಿ ಮಾಮಚ್ಚನ್ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.