ಬಿ.ಸಿ.ರೋಡ್‌-ಅಡ್ಡಹೊಳೆ; ಚತುಷ್ಪಥ ಕಾಂಕ್ರೀಟ್‌ ಕಾಮಗಾರಿಗೆ ಚಾಲನೆ


Team Udayavani, May 24, 2017, 3:25 PM IST

2305mlr35.jpg

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿ ಘಾಟಿಯ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ವರೆಗಿನ ಸುಮಾರು 63 ಕಿ. ಮೀ. ದೂರದ ಮಾರ್ಗ ವನ್ನು ಚತುಷ್ಪಥ ಕಾಂಕ್ರೀಟ್‌ ರಸ್ತೆಯನ್ನಾಗಿ ಪರಿವರ್ತಿಸುವ ಕಾಮಗಾರಿಗೆ ಚಾಲನೆ ದೊರೆತಿದೆ. 

ಬೆಂಗಳೂರು-ಮಂಗಳೂರಿಗೆ ನೇರ ಸಂಪರ್ಕ ಕಲ್ಪಿಸುವ ಈ ರಾ.ಹೆ.ಯಲ್ಲಿ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ವರೆಗಿನ
ದ್ವಿಪಥ ರಸ್ತೆಯನ್ನು ನಾಲ್ಕು ಪಥಗಳ ರಸ್ತೆಯನ್ನಾಗಿ ಮೇಲ್ದªರ್ಜೆಗೇರಿಸಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಅದರಂತೆ ಈ ಹೆದ್ದಾರಿಯನ್ನು ವಿಸ್ತರಿಸುವ ಕಾಮಗಾರಿಗೆ ಚಾಲನೆ ದೊರೆತಿದ್ದು, ಮುಂದಿನ ಎರಡೂವರೆ ವರ್ಷದೊಳಗೆ ಕಾಮಗಾರಿ ಪೂರ್ಣವಾಗಬೇಕಿದೆ. ಸದ್ಯ ಗುಂಡ್ಯದಿಂದಉಪ್ಪಿನಂಗಡಿವರೆಗೆ ರಸ್ತೆಗೆ ಹೊಂದಿಕೊಂಡಿ ರುವ ಮರಗಳ ತೆರವು, ವಿದ್ಯುತ್‌ ಕಂಬಗಳು, ನೀರು ಹಾಗೂ ಇತರ ಕೊಳವೆ ಮಾರ್ಗಕ್ಕೆ ಪರ್ಯಾಯ ವ್ಯವಸ್ಥೆ ನಡೆಯುತ್ತಿದೆ. ಕೆಲವೇ ದಿನದಲ್ಲಿ ರಸ್ತೆ ಅಗಲೀಕರಣಕ್ಕೆ ಪೂರಕವಾಗಿ ಸಣ್ಣ-ಪುಟ್ಟ ಮೋರಿ ಕಾಮಗಾರಿ ಆರಂಭವಾಗಲಿದೆ. ಆ ವೇಳೆಗೆ ಮಳೆಗಾಲ ಪ್ರಾರಂಭಗೊಂಡರೆ ಕಾಮಗಾರಿಯನ್ನು ಅನಂತರ ನಡೆಸಲು ತೀರ್ಮಾನಿಸಲಾಗಿದೆ. 

ಹಾಸನದಿಂದ ಶಿರಾಡಿಯ ಮಾರ್ನಹಳ್ಳಿ ಯವರೆಗೆ ಒಟ್ಟು 45 ಕಿ.ಮೀ. ಹಾಗೂ ಶಿರಾಡಿಯ ಅಡ್ಡಹೊಳೆಯಿಂದ ಬಂಟ್ವಾಳದ ವರೆಗೆ ಒಟ್ಟು 63 ಕಿ.ಮೀ. ರಸ್ತೆಯು ಕೇಂದ್ರ ಹೆದ್ದಾರಿ ಪ್ರಾಧಿಕಾರದ ನೇತೃತ್ವದಲ್ಲಿ ಚತುಷ್ಪಥಗೊಳ್ಳಲಿದೆ. ಇದರ ಮಧ್ಯದ ಮಾರ್ನಹಳ್ಳಿಯಿಂದ ಅಡ್ಡಹೊಳೆಯವರೆಗಿನ (ಶಿರಾಡಿ ಘಾಟಿ) ರಸ್ತೆಯ ಮೊದಲ ಹಂತದ ಕಾಂಕ್ರೀಟೀಕರಣ ಕಾಮಗಾರಿ ರಾಜ್ಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಈಗಾಗಲೇ ನಡೆದಿದ್ದು, ಎರಡನೇ ಹಂತದ ಕಾಮಗಾರಿಗೆ ಇನ್ನೂ ಮುಹೂರ್ತ ದೊರಕಿಲ್ಲ. ಈ ಎಲ್ಲ ಕಾಮಗಾರಿಗಳು ಪೂರ್ಣಗೊಂಡರೆ ಮಂಗಳೂರು-ಬೆಂಗಳೂರು ಸುಮಾರು 349 ಕಿ.ಮೀ. ರಸ್ತೆ ಸುಸಜ್ಜಿತವಾಗಿ ಚತುಷ್ಪಥ ಗೊಂಡಂತಾಗುತ್ತದೆ. 

ಅಡ್ಡಹೊಳೆ-ಬಿ.ಸಿ.ರೋಡ್‌ ಕಾಮಗಾರಿ ನಡೆಸಲು 2016ರ ಮಾ.28ರಂದು ಪಣಂಬೂರಿನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಶಿಲಾನ್ಯಾಸ ನಡೆಸಿದ್ದರು. ಕಾಮಗಾರಿಯನ್ನು ಎಲ್‌ ಆ್ಯಂಡ್‌ ಟಿ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಒಟ್ಟು ಕಾಮಗಾರಿಗೆ 1,064 ಕೋ.ರೂ. ಯೋಜನಾ ವೆಚ್ಚವನ್ನು ಅಂದಾಜಿಸಲಾಗಿದೆ. 

ಕಾಮಗಾರಿ ಸಂಬಂಧ ಕಾಂಕ್ರೀಟ್‌ಗೆ ಜಲ್ಲಿ ಕ್ವಾರಿ ನಿರ್ಮಾಣ, ಮಿಕ್ಸಿಂಗ್‌ ಘಟಕ ಸ್ಥಾಪನೆ ಗುಂಡ್ಯದಲ್ಲಿ ಪ್ರಗತಿಯಲ್ಲಿದೆ. 
ಕಾಂಕ್ರೀಟ್‌ ರಸ್ತೆ ಹಾದುಹೋಗುವ ಕಡೆಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ಆಲೂರು ತಾಲೂಕಿನ 5 ಗ್ರಾಮಗಳು, ಸಕಲೇಶಪುರ ತಾಲೂಕಿನ 12 ಗ್ರಾಮಗಳು, ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿ, ಶಿರಿವಾಗಿಲು, ನೂಜಿಬಾಳ್ತಿಲ, ನೆಲ್ಯಾಡಿ, ಕೊನಾಲು, ಗೋಳಿತಟ್ಟು, ಬಜತ್ತೂರು, ಉಪ್ಪಿನಂಗಡಿ, ನೆಕ್ಕಿಲಾಡಿ, ಬೆಳ್ತಂಗಡಿ ತಾಲೂಕಿನ ರೇಖ್ಯಾ, ಬಂಟ್ವಾಳ ತಾಲೂಕಿನ ಬಿಳಿಯೂರು, ಪೆರ್ನೆ, ಕೆದಿಲಾ, ಮಾಣಿ, ಬಾಳ್ತಿಲ,ಗೋಳ್ತಮಜಲು, ಕಸಬಾ ಪಾಣೆಮಂಗ ಳೂರು, ನರಿಕೊಂಬು, ಬಿ.ಮೂಡ ಗ್ರಾಮ ದಲ್ಲಿ ನೂತನ ಚತುಷ್ಪಥ ರಸ್ತೆ ಸಾಗಿ ಬರಲಿದೆ.

10,197 ಮರಗಳಿಗೆ ಬೀಳಲಿದೆ ಕೊಡಲಿಯೇಟು..!
ಅಡ್ಡಹೊಳೆ-ಬಿ.ಸಿ.ರೋಡ್‌ ಚತುಷ್ಪಥ ಹೆದ್ದಾರಿ ನಿರ್ಮಾಣದ ಹಿನ್ನೆಲೆಯಲ್ಲಿ ಒಟ್ಟು 10,197 ಮರಗಳಿಗೆ ಕೊಡಲಿಯೇಟು ಬೀಳಲಿದ್ದು, ಬಹುತೇಕ ಮರಗಳನ್ನು ಈಗಾಗಲೇ ಕಡಿದು ನೆಲಕ್ಕುರುಳಿಸಲಾಗಿದೆ. ಅರಣ್ಯ ಇಲಾಖೆ ಇಷ್ಟೂ ಮರಗಳ ಲೆಕ್ಕ ಮಾಡಿಕೊಟ್ಟಿದ್ದು, ಮರಗಳ ತೆರವು ನಡೆಯುತ್ತಿದೆ. ಇದರಂತೆ ಮೀಸಲು ಅರಣ್ಯದಲ್ಲಿ 6494 ಹಾಗೂ ಸರಕಾರಿ ಭೂಮಿಯಲ್ಲಿದ್ದ 3702 ಮರಗಳನ್ನು ತೆರವು ಮಾಡಲಾಗುತ್ತದೆ. ತೆರವು ಮಾಡಿದ ಮರಗಳಿಗೆ ದುಪ್ಪಟ್ಟು ಹಣವನ್ನು ಅರಣ್ಯ ಇಲಾಖೆಗೆ ಪಾವತಿ ಮಾಡಲಾಗುತ್ತದೆ. ಆ ಹಣದ ಮೂಲಕ ಅದೇ ವ್ಯಾಪ್ತಿಯಲ್ಲಿ ಗಿಡಗಳನ್ನು ನೆಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉಪ್ಪಿನಂಗಡಿ-
ಕಲ್ಲಡ್ಕ  ಫ್ಲೈಓವರ್‌

ಚತುಷ್ಪಥ ಆಗುವ ಸಂದರ್ಭದಲ್ಲಿ ಉಪ್ಪಿನಂಗಡಿ ಹಾಗೂ ಕಲ್ಲಡ್ಕದಲ್ಲಿ ಫ್ಲೈಓವರ್‌ನಿರ್ಮಾಣವಾಗಲಿದೆ. ಧರ್ಮಸ್ಥಳ ಕ್ರಾಸ್‌
ರಸ್ತೆ (ಪೆರಿಯಶಾಂತಿ) ಹಾಗೂ ಮಾಣಿಯಲ್ಲಿ ಅಂಡರ್‌ಪಾಸ್‌ ನಿರ್ಮಾಣವಾಗಲಿದೆ. ಈ ಮಧ್ಯೆ ನೇತ್ರಾವತಿಗೆ ಬಿ.ಸಿ.
ರೋಡ್‌ನ‌ಲ್ಲಿರುವ ಈಗಿನ ಹೊಸ ಸೇತುವೆಯ ಸಮೀಪದಲ್ಲಿ ಇನ್ನೊಂದು ಹೊಸ ಸೇತುವೆ ನಿರ್ಮಾಣವಾಗ ಬೇಕಿದೆ. ಹಾಗೂ
ಕುಮಾರಧಾರಾ ನದಿಗೆ ಉಪ್ಪಿನಂಗಡಿಯಲ್ಲಿಯೂ ಹೊಸ ಸೇತುವೆ ನಿರ್ಮಾಣವಾಗಬೇಕಿದೆ. ಜತೆಗೆ 14 ಕಿರು ಸೇತುವೆಗಳು ಈ ವ್ಯಾಪ್ತಿಯಲ್ಲಿ ಬರಲಿವೆ. 

ತ್ವರಿತ ಕಾಮಗಾರಿಗೆ ಸೂಚನೆ
ಕೇಂದ್ರದ ಬಹುಕನಸಿನ ಹಾಸನ- ಬಿ.ಸಿ.ರೋಡ್‌ ರಸ್ತೆ ಕಾಂಕ್ರೀಟ್‌ ರೂಪದಲ್ಲಿ ಚತುಷ್ಪಥಗೊಳ್ಳಲಿದೆ. ಈಗಾಗಲೇ ಕಾಮ
ಗಾರಿಗೆ ಚಾಲನೆ ದೊರಕಿದ್ದು, ಅಧಿಕೃತ ಕಾಂಕ್ರೀಟ್‌ ಕಾಮಗಾರಿಗಳು ಕೆಲವೇ ದಿನದಲ್ಲಿ ಆರಂಭವಾಗಲಿದ್ದು, ತ್ವರಿತ ರೀತಿಯಲ್ಲಿ ನಡೆಸಲು ಸೂಚಿಸಲಾಗಿದೆ. ಈ ಮೂಲಕ ಈಗ ಇರುವ ದ್ವಿಪಥ ರಸ್ತೆ ಚತುಷ್ಪಥ ಕಾಂಕ್ರೀಟ್‌ ರಸ್ತೆಯಾಗಿ ರೂಪುಗೊಳ್ಳಲಿದೆ. 

    – ನಳಿನ್‌ ಕುಮಾರ್‌ ಕಟೀಲು, ಸಂಸದರು ದ.ಕ. – ದಿನೇಶ್‌ ಇರಾ
 

ಟಾಪ್ ನ್ಯೂಸ್

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Ravishankar

Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ

YouTuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್

You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

sand 1

Padubidri: ಮರಳು ಅಕ್ರಮ ಸಾಗಾಟ; ವಶ

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.