![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 10, 2023, 6:00 AM IST
ಬಂಟ್ವಾಳ: ಕೆಲವು ವರ್ಷಗಳ ಹಿಂದೆ ನಿರ್ಮಾಣಗೊಂಡು ಅಸ್ಥವ್ಯಸ್ಥ ಸ್ಥಿತಿಯಲ್ಲಿದ್ದ ಬಿ.ಸಿ.ರೋಡ್‌ನ ಫ್ಲೈ ಓವರ್ ತಳಭಾಗಕ್ಕೆ ದುರಸ್ತಿ ಭಾಗ್ಯ ದೊರಕಿದ್ದು, ಪ್ರಸ್ತುತ ಫ್ಲೈ ಓವರ್ ಪಿಲ್ಲರ್‌ಗಳಲ್ಲಿ ಬಣ್ಣ ಬಣ್ಣದ ಚಿತ್ತಾರಗಳನ್ನು ಬಿಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರ ಬಿ.ಸಿ.ರೋಡ್ ಸುಂದರೀಕರಣ ಯೋಜನೆಯ ಮೂಲಕ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಚರಂಡಿ ನಿರ್ಮಾಣ, ಇಂಟರ್‌ಲಾಕ್ ಅಳವಡಿಕೆಯ ಕಾರ್ಯಪೂರ್ಣಗೊಂಡು, ಫ್ಲೈ ಓವರ್ ತಳಭಾಗವನ್ನು ತೊಳೆದು ಪೈಟಿಂಗ್ ಕಾರ್ಯವೂ ಪೂರ್ಣಗೊಂಡಿದೆ.
ಯೋಜನೆಗೆ ಶಿಲಾನ್ಯಾಸ ನಡೆದು ಹಲವು ಕಾರಣಕ್ಕೆ ವಿಳಂಬವಾಗಿದ್ದ ಕಾಮಗಾರಿ ಬಳಿಕ ಪುನರಾರಂಭಗೊಂಡಿತ್ತು. ಬಸ್‌ನಿಲ್ದಾಣದ ಬಳಿ ಫ್ಲೈ ಓವರ್ ತಳಭಾಗದಲ್ಲಿ ಶೌಚಾಲಯ ಕೂಡ ನಿರ್ಮಾಣಗೊಂಡಿದೆ. ಇದೀಗ ಚಿತ್ರಗಳನ್ನು ಬಿಡಿಸಲಾಗುತ್ತಿದ್ದು, ಪ್ರತೀ ಪಿಲ್ಲರ್‌ಗಳ ಎರಡೂ ಬದಿಗಳಲ್ಲೂ ಹಲವು ಬಗೆಯ ಚಿತ್ರಗಳು ರಚನೆಯಾಗಲಿವೆ.
ಈ ಮೂಲಕ ಸಂಪೂರ್ಣವಾಗಿ ಪಾಚಿ ತುಂಬಿ ಅಸಹ್ಯ ಸ್ಥಿತಿಯಲ್ಲಿದ್ದ ಪಿಲ್ಲರ್‌ಗಳು ಚಿತ್ರಗಳೊಂದಿಗೆ ಕಂಗೊಳಿಸಲಿದ್ದು, ಆದರೆ ನಿರ್ವಹಣೆ ಇಲ್ಲದೇ ಹೋದರೆ ಮತ್ತೆ ಹಿಂದಿನ ಸ್ಥಿತಿಗೆ ಬರುವ ಸಾಧ್ಯತೆಯೂ ಇದೆ. ಮಳೆಗಾಲದಲ್ಲಿ ಪಿಲ್ಲರ್‌ಗಳ ಬಳಿ ಮೇಲಿನ ರಸ್ತೆಯಿಂದ ನೀರು ಬೀಳುವ ಸಮಸ್ಯೆಯಿದ್ದು, ಅದಕ್ಕೆ ಪರಿಹಾರ ಕಲ್ಪಿಸದೇ ಇದ್ದಲ್ಲಿ ಚಿತ್ರಗಳ ಮೇಲೆಯೂ ನೀರು ಬಿದ್ದು ಮತ್ತೆ ಪಾಚಿ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಮಾನ ನಾಗರಿಕ ಸಂಹಿತೆ: ಸಮಿತಿ ರಚನೆ ತಪ್ಪೇನಿಲ್ಲ: ಸು. ಕೋರ್ಟ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.