ಬಿ.ಸಿ.ರೋಡ್- ಕಾಸರಗೋಡು ಹೊಸ ಬಸ್ ಸೇವೆ
Team Udayavani, Oct 24, 2017, 1:55 PM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಸುಳ್ಯ ತಾಲೂಕು ಕೇಂದ್ರಗಳಿಂದ ನೆರೆಯ ರಾಜ್ಯ ಕೇರಳದ ಕಾಸರಗೋಡಿಗೆ ಬಸ್‌ಗಳು ಈಗಾಗಲೇ ಓಡುತ್ತಿದ್ದು, ಇದೀಗ ಬಂಟ್ವಾಳ ತಾಲೂಕು ಕೇಂದ್ರ ಬಿ.ಸಿ.ರೋಡಿನಿಂದಲೂ ಕಾಸರಗೋಡಿಗೆ ಇದೇ ಮೊದಲ ಬಾರಿಗೆ ಕರ್ನಾಟಕ ಕೆಎಸ್‌ಆರ್‌ಟಿಸಿಯ ಬಸ್ ಸಂಚಾರ ಆರಂಭಗೊಂಡಿದೆ.
ಅ. 22ರಂದು ಬಿ.ಸಿ.ರೋಡ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲೇ ಬಸ್‌ಗಳ ಓಡಾಟಕ್ಕೆ ಚಾಲನೆ ದೊರೆತಿದೆ. ಆರಂಭಿಕ ಹಂತದಲ್ಲಿ ಒಟ್ಟು ಐದು ಸರಕಾರಿ ಬಸ್‌ಗಳು ಓಡಾಟ ಆರಂಭಿಸಿದ್ದು, ಎರಡೂ ಭಾಗಗಳಿಂದಲೂ ಒಟ್ಟು 12 ಟ್ರಿಪ್‌ಗ್ಳಿರುತ್ತವೆ. ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಬಿ.ಸಿ.ರೋಡ್ ಡಿಪೋಗೆ ಸೇರಿರುವ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ.
ಈ ಬಸ್‌ಗಳು ಬಿ.ಸಿ. ರೋಡ್‌ನಿಂದ ಹೊರಟು ಮೆಲ್ಕಾರ್-ಸಜಿಪ- ಬೋಳಿಯಾರ್-ಮುಡಿಪು- ತೊಕ್ಕೊಟ್ಟು-ತಲಪಾಡಿ ಮಾರ್ಗವಾಗಿ ಕಾಸರ ಗೋಡಿಗೆ ಸಂಚರಿಸಲಿವೆ. ಕೆಎಸ್‌ಆರ್‌ಟಿಸಿ ಈ ಹೊಸ ಸಂಚಾರ ಬಿ.ಸಿ.ರೋಡ್-ತೊಕ್ಕೊಟ್ಟು ಮಧ್ಯೆ ಸಾಕಷ್ಟು ಸಂಖ್ಯೆಯಲ್ಲಿ ಓಡಾಡುವ ಖಾಸಗಿ ಬಸ್‌ನವರ ಆತಂಕಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಬಿ.ಸಿ.ರೋಡ್ – ಕಾಸರಗೋಡು ಬಸ್ ಆರಂಭ
ಗೊಂಡಿರುವುದು ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಬಹುತೇಕ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕೊಣಾಜೆ, ದೇರಳಕಟ್ಟೆ ಪ್ರದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೂ ಉಪಯೋಗವಾಗಲಿದೆ. ಕಾಸರಗೋಡಿನಿಂದ ದೇರಳಕಟ್ಟೆ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಿಗೆ ಆಗಮಿಸುವವರಿಗೂ ಈ ಬಸ್ ಓಡಾಟ ಅನುಕೂಲ ಕಲ್ಪಿಸಲಿದೆ.
ವಾರದ ಹಿಂದೆಯೇ ಸಿದ್ಧ
ನೂತನವಾಗಿ ಆರಂಭಗೊಂಡ ಅಂತಾರಾಜ್ಯ ಸಂಚಾರದ ಈ ಬಸ್‌ಗಳಿಗೆ ಕೇರಳ ತಿರುವನಂತಪುರದಿಂದ ಪರವಾನಿಗೆ ಲಭ್ಯವಾಗಿದೆ. ಒಂದು ವಾರದ ಹಿಂದೆಯೇ ಬಸ್‌ಗಳು ಸಿದ್ಧಗೊಂಡಿದ್ದರೂ ಅ. 22ರಂದು ಬಿ.ಸಿ.ರೋಡಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಉದ್ಘಾಟನೆ ಸಮಾರಂಭದಲ್ಲೇ ಚಾಲನೆ ನೀಡಬೇಕು ಎಂಬ ಕಾರಣಕ್ಕೆ ಅದೇ ದಿನ ಓಡಾಟ ಆರಂಭಿಸಲಾಗಿದೆ. ಈ ರಸ್ತೆಯಲ್ಲಿ ಬಸ್ ಓಡಾಟ ಆರಂಭಗೊಂಡಿದೆ ಎಂದು ಜನರಿಗೆ ಮಾಹಿತಿ ಸಿಗಬೇಕು ಎಂಬ ಕಾರಣಕ್ಕೆ ಬಿ.ಸಿ.ರೋಡ್-ಕಾಸರಗೋಡು ಸ್ಟಿಕ್ಕರ್ ಅಳವಡಿಸಿದ ಬಸ್‌ಗಳನ್ನು ಕೆಲವು ದಿನಗಳ ಹಿಂದೆಯೇ ಬಿ.ಸಿ.ರೋಡು -ಮಂಗಳೂರು ಮಧ್ಯೆ ಓಡಿಸಲಾಗಿದೆ. ಬಿ.ಸಿ.ರೋಡ್-ಕಾಸರಗೋಡು ಮಧ್ಯೆ ಆರಂಭಗೊಳ್ಳಲಿರುವ ಬಸ್ಸಿಗೆ ತಡೆಯಾಜ್ಞೆ ಬಂದಿದೆ ಎಂಬ ಸುಳ್ಳು ಸುದ್ದಿಯನ್ನೂ ಹಬ್ಬಿಸುವ ಪ್ರಯತ್ನವನ್ನೂ ಕೆಲವರು ಮಾಡಿದ್ದಾರೆ ಎಂದು ಬಿ.ಸಿ.ರೋಡ್ ಡಿಪೋ ಮ್ಯಾನೇಜರ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಮಾಹಿತಿ ನೀಡದೆ ಓಡಿದ ಬಸ್!
ಅಂತಾರಾಜ್ಯ ಸಂಪರ್ಕಿಸುವ ಹಾಗೂ ಬಹುತೇಕ ಭಾಗದ ಪ್ರಯಾಣಿಕರಿಗೆ ನೆರವಾಗುವ ಬಿ.ಸಿ. ರೋಡ್-ಕಾಸರಗೋಡು ನಡುವೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪ್ರಾರಂಭಿಸುವಂತೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದಿತ್ತು. ಆದರೆ ಇಷ್ಟೊಂದು ಜನಪ್ರಿಯ ಮಾರ್ಗದಲ್ಲಿ ಸಾರಿಗೆ ನಿಗಮ ಸದ್ದಿಲ್ಲದೆ ಸರಕಾರಿ ಪ್ರಾರಂಭಿಸಿರುವುದು ಆಚ್ಚರಿ ಮೂಡಿಸಿದೆ. ಏಕೆಂದರೆ ಈ ಮಾರ್ಗದಲ್ಲಿ ಈಗ ಬಸ್ ಓಡಾಟ ಆರಂಭಿಸಿರುವ ವಿಚಾರ ಇನ್ನು ಕೂಡ ಪ್ರಯಾಣಿಕರ ಗಮನಕ್ಕೆ ಬಂದಿಲ್ಲ. ಸಂಬಂಧ ಪಟ್ಟ ಡಿಪೋದವರು ಕೂಡ ಇಲ್ಲಿವರೆಗೆ ಹೊಸ ಬಸ್ ಸೇವೆ ಬಗ್ಗೆ ಪ್ರಯಾಣಿಕರಿಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಆದರೆ ಈ ರೀತಿ ಯಾವುದೇ ಮಾರ್ಗದಲ್ಲಿ ಹೊಸ ಬಸ್ ಸಂಚಾರ ಪ್ರಾರಂಭಿಸ ಬೇಕಾದರೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪ್ರಯಾಣಿಕರಿಗೆ ಸೂಕ್ತ ಮಾಹಿತಿ ನೀಡ ಬೇಕಾಗಿರುವುದು ಅತ್ಯಗತ್ಯ.
ಪ್ರಯಾಣಿಕರಿಗೆ ಯಾವುದೇ ಸುಳಿವು ನೀಡದೆ, ರವಿವಾರದಿಂದ ಹೊಸ ಬಸ್‌ಗಳು ಇಲ್ಲಿ ಓಡಾಟ ನಡೆಸಿರುವ ಬಗ್ಗೆ ಪ್ರಯಾಣಿಕರು ತಗಾದೆ ತೆಗೆದಿದ್ದಾರೆ. ಜನರಿಗೆ ಮಾಹಿತಿ ಒದಗಿಸದೆ ಹೊಸ ರೂಟ್ ಬಸ್‌ಗಳ ಓಡಾಟ ನಡೆಸಿದರೆ ಪ್ರಯಾಣಿಕರಿಗೆ ಯಾವುದೇ ಲಾಭವಾಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರವಿವಾರದಿಂದ ಆರಂಭವಾದ ಹೊಸ ಬಸ್‌ಗಳನ್ನು ನೋಡಿದ ಕೆಲವು ಪ್ರಯಾಣಿಕರು, ಇದು ಯಾವ ಬಸ್? ಎಲ್ಲಿಗೆ ಹೋಗುವುದು? ಯಾವಾಗದಿಂದ ಆರಂಭ? ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿ
ದ್ದಾರೆ. ನೂತನ ರೂಟ್‌ನ ಬಸ್ ಬಗ್ಗೆ ಪ್ರಯಾಣಿಕರಿಗೆ ಸಮರ್ಪಕ ಮಾಹಿತಿ ದೊರೆಯದಿದ್ದರೆ ಆ ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಎದುರಾಗಿ, ಹೊಸ ರೂಟ್‌ನಿಂದ ನಷ್ಟ ಎಂದು ಸಬೂಬು ನೀಡಿ ಸಂಚಾರ ಸ್ಥಗಿತಗೊಳಿಸಿದ ಕೆಲವು ಉದಾಹರಣೆಗಳು ಇರುವುದರಿಂದ, ಬಿ.ಸಿ.ರೋಡ್-ಕಾಸರಗೋಡು ಹೊಸ ಬಸ್‌ಗಳು ಕೂಡ ಇಂತಹುದೇ ಅಪವಾದ ಎದುರಿಸಬೇಕಾದೀತೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಬೆಳಗ್ಗೆ 7ರಿಂದ ರಾತ್ರಿ 8ರ ವರೆಗೆ
ಬಿ.ಸಿ.ರೋಡು ಹಾಗೂ ಕಾಸರಗೋಡಿನಿಂದ ಬಸ್‌ಗಳ ಓಡಾಟ ಬೆಳಗ್ಗೆ 7ಕ್ಕೆ ಆರಂಭಗೊಂಡರೆ ರಾತ್ರಿ 8ರ ವರೆಗೆ ಬಸ್‌ಗಳ ಸೇವೆ ಲಭ್ಯವಾಗಲಿದೆ. ಬಿ.ಸಿ.ರೋಡಿನಿಂದ ಬೆಳಗ್ಗೆ 7, 8, 9, 10, 11, ಮಧ್ಯಾಹ್ನ 1, 2, 3, ಸಂಜೆ 4, 6, ರಾತ್ರಿ 7, 8 ಗಂಟೆಗೆ ಹೊರಟರೆ, ಕಾಸರಗೋಡಿನಿಂದ ಬೆಳಗ್ಗೆ 7, 8, 10, 11, ಮಧ್ಯಾಹ್ನ 12, 1, 2, ಸಂಜೆ 4, 5, 6, ರಾತ್ರಿ 7 ಹಾಗೂ 8 ಗಂಟೆಗೆ ಹೊರಡಲಿವೆ. 2 ಗಂಟೆ 10 ನಿಮಿಷದ ಪ್ರಯಾಣ ಅವಧಿಯನ್ನು ನಿಗದಿ ಪಡಿಸಲಾಗಿದ್ದು, 64 ರೂ. ಪ್ರಯಾಣ ದರ ಇರುತ್ತದೆ. ಇದು ಶಟ್ಲ ಬಸ್ ಆಗಿದ್ದು, ಸಾಮಾನ್ಯವಾಗಿ ಎಲ್ಲ ತಂಗುದಾಣಗಳಲ್ಲೂ ನಿಲ್ಲಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5 ಬಸ್‌ಗಳ ಓಡಾಟ
ಪ್ರಸ್ತುತ 5 ಬಸ್‌ಗಳು ಈ ರಸ್ತೆಯಲ್ಲಿ ಓಡಲಿದ್ದು, ಎರಡೂ ಕಡೆಗಳಿಂದಲೂ 12 ಟ್ರಿಪ್ ಇರುತ್ತದೆ. ಒಂದು ವಾರದ ಹಿಂದೆ ಬಸ್‌ಗಳು ಸಿದ್ಧವಾಗಿದ್ದರೂ ಅ. 22ರಿಂದ ಸಂಚಾರ ಆರಂಭಗೊಂಡಿದೆ. ಹೊಸ ಬಸ್‌ಗಳ ಓಡಾಟಕ್ಕೆ ಪ್ರಯಾಣಿಕರಿಂದ ಉತ್ತಮ ಬೆಂಬಲ ಲಭ್ಯವಾಗುವ ನಿರೀಕ್ಷೆ ಇದೆ.
ಪಿ. ಇಸ್ಮಾಯಿಲ್, ಡಿಪೋ ಮ್ಯಾನೇಜರ್, ಕೆಎಸ್‌ಆರ್‌ಟಿಸಿ, ಬಿ.ಸಿ.ರೋಡ್
ಕಿರಣ್ ಸರಪಾಡಿ
ಬಿ.ಸಿ.ರೋಡ್-ಕಾಸರಗೋಡು ನಡುವೆ ಓಡಾಟ ಆರಂಭಿಸಿರುವ ಕೆಎಸ್‌ಆರ್‌ಟಿಸಿಯ ಹೊಸ ಬಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.