ಬಿ.ಸಿ. ರೋಡ್-ಮೆಲ್ಕಾರ್: ಸುಗಮ ಸಂಚಾರಕ್ಕೆ ಕ್ರಮವಾಗಲಿ
Team Udayavani, Jan 20, 2019, 4:34 AM IST
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯಲ್ಲಿ ಬಿ.ಸಿ. ರೋಡ್ ನಗರ ಮತ್ತು ಮೆಲ್ಕಾರ್‌ನಲ್ಲಿ ವ್ಯಾಪಕ ವಾಹನ ದಟ್ಟಣೆಯಿಂದ ಸಂಚಾರವೇ ಅಸಾಧ್ಯ ಎಂಬ ಸ್ಥಿತಿ ನಿತ್ಯದ ಸಮಸ್ಯೆಯಾಗಿದೆ.
ಸಂಚಾರ ನಿಬಿಡ ಸಮಯದಲ್ಲಿ ನಗರ ಕೇಂದ್ರದ ಎಲ್ಲಿಯೂ ವಾಹನ ನಿಲುಗಡೆಗೆ ಸ್ಥಳವಿಲ್ಲ. ಜನ ಸಂಚಾರಕ್ಕೆ ಸೂಕ್ತ ವ್ಯವಸ್ಥೆಯೂ ಆಗಿಲ್ಲ. ವಾಹನ ಸಂಚಾರದಲ್ಲಿ ಅಡಚಣೆ ಆದರೆ ಕೆಲವೇ ನಿಮಿಷಗಳಲ್ಲಿ ಹೆದ್ದಾರಿ ಯಲ್ಲಿ ಮೈಲುದ್ದಕ್ಕೆ ವಾಹನ ಸಾಲು ಉಂಟಾಗುತ್ತದೆ.
ಮೆಲ್ಕಾರ್‌ನಲ್ಲಿ ಕೊಣಾಜೆ, ವಿಟ್ಲ, ಮಂಚಿ, ಪುತ್ತೂರು, ಕಲ್ಲಡ್ಕ, ಮಂಗಳೂರು ಕಡೆಗಳಿಂದ ಬರುವ ವಾಹನಗಳು ಒಂದೆಡೆ ಸೇರುವುದರಿಂದ ವಾಹನ ದಟ್ಟಣೆ ಉಂಟಾಗುತ್ತದೆ.
ತಾ|ನ ಹೃದಯಭಾಗ ಬಿ.ಸಿ. ರೋಡ್‌ನಲ್ಲಿ ಅವಕಾಶ ಸಿಕ್ಕಿದಲ್ಲೆಲ್ಲ ವಾಹನ ನಿಲುಗಡೆ ಆಗುತ್ತದೆ. ಮಿನಿ ವಿಧಾನಸೌಧ, ನ್ಯಾಯಾಲಯ, ಪೊಲೀಸ್ ಠಾಣೆ ಆಸುಪಾಸು, ಶ್ರೀ ರಕ್ತೇಶ್ವರಿ ದೇವಿ ಕ್ಷೇತ್ರ ವಠಾರ, ಕೃಷಿ ಇಲಾಖೆ, ತಾ.ಪಂ. ಕಚೇರಿ ವಠಾರ ದಲ್ಲೆಲ್ಲ ವಾಹನಗಳ ಸಾಲು ಇರುತ್ತದೆ.
ಬದಲಾವಣೆ ಸಾಧ್ಯವಾಗಿಲ್ಲ:
2016ರಲ್ಲಿ ಅಂದಿನ ಜಿಲ್ಲಾಧಿಕಾರಿ ಕೆ.ಜೆ. ಜಗದೀಶ್ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸುವ ಹಾಗೂ ಇಡೀ ಬಂಟ್ವಾಳದ ಚಿತ್ರಣ ಬದಲಿಸುವ ಪ್ರಯತ್ನ ನಡೆಸಿದ್ದರು. ಅದಾದ ಬಳಿಕ ಗಂಭೀರವಾದ ಯಾವುದೇ ಪ್ರಯತ್ನಗಳು ನಡೆದಿಲ್ಲ.
ರಕ್ತೇಶ್ವರಿ ಕ್ಷೇತ್ರ ಬಳಿಯಿಂದ ಕೈಕುಂಜೆಗೆ ತೆರಳುವ ಮಾರ್ಗ ಬಿ.ಸಿ. ರೋಡ್‌ನ ಪ್ರಮುಖ ರಸ್ತೆ. ಇದರ ಇಕ್ಕೆಲಗಳಲ್ಲೂ ಮಿನಿ ವಿಧಾನಸೌಧ, ತೋಟ ಗಾರಿಕೆ ಇಲಾಖೆ ಕಚೇರಿ, ಎಪಿಎಂಸಿ, ಮೆಸ್ಕಾಂ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ತಾ.ಪಂ. ಕಚೇರಿ, ನ್ಯಾಯಾಲಯಗಳಿವೆ. ಆದರೆ ಇವುಗಳಿಗೆ ವಾಹನಗಳಲ್ಲಿ ಬರುವವರು ಪರದಾಟ ನಡೆಸಬೇಕಾಗಿದೆ. ಮಿನಿ ವಿಧಾನಸೌಧ ಎದುರೇ ವಾಹನಗಳು ಪಾರ್ಕ್ ಮಾಡುತ್ತವೆ. ಟೂರಿಸ್ಟ್ ಟ್ಯಾಕ್ಸಿಗಳು, ಆಟೋಗಳು ಸ್ಟೇಟ್ ಬ್ಯಾಂಕ್‌ವರೆಗೆ ನಿಲ್ಲುತ್ತವೆ. ಎಲ್ಲಿಯೂ ವ್ಯವಸ್ಥಿತ ಜಾಗವಿಲ್ಲ. ಬಿ.ಸಿ. ರೋಡ್, ಕೈಕಂಬ, ಬಂಟ್ವಾಳಕ್ಕೆ ವ್ಯಾಪಾರ ವಹಿವಾಟುಗಳಿಗೆ ಬರುವವರು ಪಾರ್ಕಿಂಗ್‌ಗೆ ಪರದಾಡ ಬೇಕಾದ ಸ್ಥಿತಿ ಇದೆ.
ಕೆಎಸ್ಸಾರ್ಟಿಸಿಗೆ ನೋ ಎಂಟ್ರಿ:
ಈಗಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದೊಳಗೆ ಯಾವ ವಾಹನಗಳಿಗೂ ಪ್ರವೇಶವಿಲ್ಲ. ಅಲ್ಲಿನ ಬೇಸ್‌ಮೆಂಟ್‌ನಲ್ಲಿ ಪಾರ್ಕಿಂಗ್‌ಗೆ ಅವಕಾಶವಿದ್ದರೂ ಖಾಲಿ ಬಿಡಲಾಗಿದೆ. ಕೋರ್ಟ್ ಆವರಣದಲ್ಲಿ ಕೆಲವೊಮ್ಮೆ ಕಕ್ಷಿದಾರರೂ ಹೊರಗೆ ವಾಹನ ನಿಲ್ಲಿಸಬೇಕಾದ ಸ್ಥಿತಿ. ಮಿನಿ ವಿಧಾನಸೌಧದ ಸುತ್ತಮುತ್ತ ನಾಲ್ಕಾರು ವಾಹನಗಳು ನಿಂತರೂ ಹೆಚ್ಚಿನ ಜಾಗವಿಲ್ಲ ಎಂಬಂತಾಗಿದೆ.
ಮುಂದಿನ ದಿನಗಳಲ್ಲಿ ಪ್ರತಿಭಟನೆ
ಬಿ.ಸಿ. ರೋಡ್‌ನ ಪಾರ್ಕಿಂಗ್ ಸಮಸ್ಯೆ ಬಗ್ಗೆ ಹಲವಾರು ಸಲ ಜಿಲ್ಲಾಡಳಿತಕ್ಕೆ ಬರೆದುಕೊಳ್ಳಲಾಗಿದೆ. ಆದರೆ ಸಮಸ್ಯೆಯ ಬಗ್ಗೆ ಚರ್ಚಿಸಲಾಗಿಲ್ಲ. ಸಾರ್ವಜನಿಕ ವ್ಯವಸ್ಥೆನ್ನು ನಿರ್ವಹಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಸಮಸ್ಯೆ ಪರಿಹಾರ ಆಗ್ರಹಿಸಿ ಮುಂದಿನ ದಿನಗಳಲ್ಲಿ ಸಮಾನ ಮನಸ್ಕ ಸಂಘಟನೆಗಳ ಮೂಲಕ ಪ್ರತಿಭಟನೆ, ಧರಣಿಯಂತಹ ಗಂಭೀರ ಕ್ರಮಗಳನ್ನು ಮಾಡಲಾಗುವುದು.
– ಬಿ.ಎಂ. ಪ್ರಭಾಕರ ದೈವಗುಡ್ಡೆ
ಸಂಚಾಲಕರು, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ
ಪಾರ್ಕಿಂಗ್ ಸ್ಥಳಕ್ಕೆ ಕ್ರಮ
ಬಿ.ಸಿ. ರೋಡ್ ನಗರ ಸೌಂದರ್ಯ ಹೆಚ್ಚಿಸಲು ಈಗಾಗಲೇ ಯೋಜನೆ ರೂಪಿಸಲು ಲೊಕೋಪಯೋಗಿ ಇಲಾಖೆಗೆ ಸೂಚಿಸಿದೆ. ಫ್ಲೈಓವರ್ ತಳದಲ್ಲಿ ಡಾಮರು ಕಾಮಗಾರಿ ಮೂಲಕ ಅವ್ಯವಸ್ಥೆ ನಿವಾರಿಸಿದೆ. ಮುಂದಿನ ಹಂತದ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು ಸರಕಾರಕ್ಕೆ ಬರೆಯಲಾಗಿದೆ. ಆಟೋ, ಸರ್ವಿಸ್ ವಾಹನಗಳಿಗೆ ಪಾರ್ಕಿಂಗ್ ಸ್ಥಳವನ್ನು ತೋರಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಭವಿಷ್ಯದ ಹೆದ್ದಾರಿ ಆರು ಪಥ ಆಗುವಾಗ ಸಂಚಾರ ದಟ್ಟಣೆಗೆ ಪರಿಹಾರ ಸಿಗಲು ಸಾಧ್ಯ.
– ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು,
ಶಾಸಕರು
ರಾಜಾ ಬಂಟ್ವಾಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Year Ender 2024: ಗೂಗಲ್ ನಲ್ಲಿ ಈ ವರ್ಷ ಅತೀ ಹೆಚ್ಚು ಹುಡುಕಲ್ಪಟ್ಟ ವಿಷಯ ಯಾವುದು ಗೊತ್ತಾ?
ಪಾರ್ಟಿಗೆ ಕರೆದು ಬಟ್ಟೆ ಬಿಚ್ಚಿಸಿ, ಮೂತ್ರ ವಿಸರ್ಜಿಸಿ ಅವಮಾನ… ಮನನೊಂದ ಬಾಲಕ ಆತ್ಮಹತ್ಯೆ
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.