ಬಿ.ಸಿ. ರೋಡ್ ಸರ್ವಿಸ್ ರಸ್ತೆ ವೈಜ್ಞಾನಿಕವಾಗಿ ರೂಪಿಸಿ
Team Udayavani, Mar 29, 2018, 11:25 AM IST
ಬಂಟ್ವಾಳ: ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿದ ಬಿ.ಸಿ. ರೋಡಿನ ಸರ್ವಿಸ್ ರಸ್ತೆ ಮಾ. 14ರ ಒಂದೇ ಮಳೆಗೆ ಅಧ್ವಾನವಾಗಿದೆ. ರಸ್ತೆಯಲ್ಲಿ ನೀರು ತುಂಬುವ, ಚರಂಡಿ ನಿರ್ಮಾಣವಾಗದ, ಸಂಚಾರಕ್ಕೆ ಅಡಚಣೆ ಎದುರಾಗುವ ರಸ್ತೆಯಾಗಿದ್ದು, ಅದನ್ನು ವೈಜ್ಞಾನಿಕ ಪುನರ್ ನಿರ್ಮಿಸುವ ಅಗತ್ಯವಿದೆ.
ಮಳೆ ನೀರು ತುಂಬಿದಾಗ ಎಲ್ಲಿ ಆಳ, ಎಲ್ಲಿ ಹೊಂಡ, ಎತ್ತ ಚರಂಡಿ ಎಂಬುದೇ ವಾಹನ ಚಾಲಕರಿಗೆ ತಿಳಿಯದಷ್ಟು ಅವೈಜ್ಞಾನಿಕವಾಗಿದೆ. ನಿರ್ಮಾಣದಲ್ಲಿ ಉಂಟಾಗಿರುವ ಅವ್ಯವಸ್ಥೆಯಿಂದ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಲ್ಲ.
ಹೊಸದಾಗಿ ನಿರ್ಮಿಸಿದ ಕಾಂಕ್ರೀಟ್ ಸರ್ವೀಸ್ ರಸ್ತೆಯಲ್ಲಿ ಪಾದಚಾರಿಗಳಿಗೆ ವ್ಯವಸ್ಥೆ ಆಗಬೇಕು. ಚರಂಡಿಯ ನಿರ್ಮಾಣ ಮಾಡಬೇಕು. ಅಪೂರ್ಣವಾಗಿರುವ ಕೆಲಸಗಳನ್ನು ಸಾಧ್ಯವಾದಷ್ಟು ಬೇಗ, ಮಳೆಗಾಲಕ್ಕೂ ಮೊದಲೇ ನಿರ್ವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸರ್ವಿಸ್ ರಸ್ತೆಯ ಅವೈಜ್ಞಾನಿಕ ಕಾಮಗಾರಿಗೆ ಯಾರು ಹೊಣೆ ಎಂದು ಬೊಟ್ಟು ಮಾಡುವು ದರಲ್ಲಿ ಫಲವಿಲ್ಲ. ಜನಪ್ರತಿನಿಧಿಗಳಿಗೆ, ಇಲಾಖೆಗೆ, ಗುತ್ತಿಗೆ ದಾರರಿಗೆ, ಕಾಮಗಾರಿ ನಿರ್ವಹಿಸುವ ಕೆಲಸಗಾರರಿಗೆ ಪರಸ್ಪರ ಸಮನ್ವಯ, ಹೊಂದಾಣಿಕೆ ಇಲ್ಲದಂತೆ ಇಲ್ಲಿ ಕೆಲಸ ನಡೆದಿದೆ.
ಈ ಕಾಮಗಾರಿಯ ಗುತ್ತಿಗೆ ಪಡೆದವರು ಒಬ್ಬರು. ರಾಜ್ಯ ಮಟ್ಟದಲ್ಲಿಯೇ ಅಥವಾ ಕೇಂದ್ರ ಮಟ್ಟದಲ್ಲಿ ಪಡೆದಿ ದ್ದಾರೆಯೇ
ಎಂಬುದು ಸ್ಪಷ್ಟ ಇಲ್ಲ. ಇಲ್ಲಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರ ಮಾತ್ರ ನಾಲ್ಕನೆ ಉಪ ಗುತ್ತಿಗೆದಾರ ಎಂದು ತಿಳಿದು ಬಂದಿದೆ. ಅರ್ಧಕ್ಕೆ ಕಾಂಕ್ರೀಟ್, ಉಳಿದ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು. ಇದು ಯಾವ ಮಾದರಿ ಕೆಲಸ ಎಂಬುದೇ ಅರ್ಥ ಆಗಿಲ್ಲ.
ಮಿನಿ ವಿಧಾನಸೌಧಕ್ಕೆ ತೆರಳುವ ಪದ್ಮಾ ಕಾಂಪ್ಲೆಕ್ಸ್ ಮತ್ತು ಫ್ಲೈ ಓವರ್ ಅಡಿ ಭಾಗ ಇರುವ ಸರ್ವೀಸ್ ರಸ್ತೆ ಹಾದು ಹೋಗುವ ಜಾಗ ಎತ್ತರವಾಗಿದೆ. ಸರ್ವೀಸ್ ರಸ್ತೆಗೆ ತೆರಳಬೇಕಿದ್ದರೆ ಪರ್ವತ ಏರಿದಂತೆ ಭಾಸವಾಗುತ್ತದೆ. ಜಾರಿ ಬೀಳುವ ಅಪಾಯವೂ ಇದೆ. ಫ್ಲೈ ಓವರ್ ಅಡಿ ಭಾಗದ ಎತ್ತರ, ಅನಂತರದ ಭಾಗ ಆಳ, ಪುನಃ ಕಾಂಕ್ರೀಟ್ ಹಾಕಿದ ಸ್ಥಳ ಎತ್ತರವಾಗಿ ಮಳೆ ನೀರು ಹರಿಯಲು ಜಾಗವೇ ಇಲ್ಲದಂತಾಗಿದೆ. ಈ ಅವ್ಯವಸ್ಥೆ ಸರಿಯಾಗ ಬೇಕಿದ್ದರೆ ಪುನರ್ ನಿರ್ಮಾಣವೇ ಆಗಬೇಕು ಎನ್ನುತ್ತಾರೆ ಸಾರ್ವಜನಿಕರು ಮತ್ತು ಅನುಭವಿ ಗುತ್ತಿಗೆದಾರರು.
ಒಂದು ಮಳೆಗೇ ಕೃತಕ ನೆರೆ
ಒಂದು ಮಳೆಗೇ ಕೃತಕ ನೆರೆ ಸೃಷ್ಟಿಯಾದರೆ, ಇಡೀ ಮಳೆಗಾಲ ಹೇಗಿರಬಹುದು ಎಂಬುದನ್ನು ಊಹಿಸಿ. ಬಿ.ಸಿ. ರೋಡ್‌ನ ಗಣೇಶ್ ಮೆಡಿಕಲ್ಸ್ ಎದುರು ಭಾಗದಲ್ಲಿ ರಸ್ತೆಯುದ್ದಕ್ಕೂ ಒಂದೇ ಮಳೆಗೆ ಹೊಳೆಯಂತೆ ನೀರು ಹರಿದಿದೆ. ಕಳೆದ ವರ್ಷವೂ ಇದು ಸಮಸ್ಯೆಯ ಕೇಂದ್ರವಾಗಿತ್ತು. ಆದರೆ ಈ ಸಮಸ್ಯೆ ಪರಿಹಾರವಾಗದಿರುವ ಕಾರಣ ಈ ಮಳೆಗಾಲದಲ್ಲಿ ಮತ್ತೂಮ್ಮೆ ವಾಹನ ಚಾಲಕ, ಮಾಲಕ, ಸಾರ್ವಜನಿಕ ಪಾದಾಚಾರಿಗಳು ತೊಂದರೆಗೆ ಒಳಗಾಗುವುದು ಖಚಿತ. ಇಲ್ಲಿ ವಾಹನ ನಿಲುಗಡೆ, ಆಟೋ ಸ್ಟ್ಯಾಂಡ್, ಸರ್ವಿಸ್ ಕಾರ್ ಸ್ಟ್ಯಾಂಡ್, ದ್ವಿಚಕ್ರ ನಿಲುಗಡೆ ಎಂಬಿತ್ಯಾದಿ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಆಗಬೇಕು.
ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಲಿ
ಕಾಮಗಾರಿಯ ಬಗ್ಗೆ ಬಹಳಷ್ಟು ದೂರುಗಳು ಕೇಳಿ ಬಂದಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದಕ್ಕೆ ಸೂಕ್ತ ಕ್ರಮ
ಕೈಗೊಳ್ಳಬೇಕು. ಅವರಿಗೆ ಪುರಸಭೆಯಿಂದ ಮಾಹಿತಿ ನೀಡಲಾಗಿದೆ. ಜನರ ಸಮಸ್ಯೆಗೆ ಪುರಸಭೆ ಸ್ಪಂದಿಸುವುದು.
– ಪಿ. ರಾಮಕೃಷ್ಣ ಆಳ್ವ
ಅಧ್ಯಕ್ಷರು, ಬಂಟ್ವಾಳ ಪುರಸಭೆ
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.