ಹಕ್ಕಿ ಜ್ವರ: ಇರಲಿ ಎಚ್ಚರ
Team Udayavani, Jan 9, 2021, 6:15 AM IST
ಮಂಗಳೂರು/ಉಡುಪಿ, ಜ. 8: ನೆರೆಯ ಕೇರಳ ಸೇರಿದಂತೆ ಗುಜರಾತ್, ಹರಿಯಾಣ ಮೊದಲಾದ ರಾಜ್ಯಗಳಲ್ಲಿ ಹಕ್ಕಿ ಜ್ವರ ಭೀತಿ ಮೂಡಿಸಿರುವುದರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಹಕ್ಕಿ ಜ್ವರ ವೈರಾಣುಗಳಿಂದ ಉಂಟಾಗುತ್ತದೆ. ಸೋಂಕು ತಗಲಿದ ಹಕ್ಕಿಗಳ ವಿಸರ್ಜನೆ, ಉಸಿರಾಟ ಕ್ರಿಯೆ ಮತ್ತು ರಕ್ತದಿಂದ ಹರಡುತ್ತದೆ. ಶೀತ ಜ್ವರ ಚಿಹ್ನೆ ಗಳಿಂದ ಪ್ರಾರಂಭವಾಗಿ ತೀವ್ರತರ ವಾದ ನ್ಯುಮೋ ನಿಯಕ್ಕೆ ತಿರುಗಿ ಮರಣಕ್ಕೆ ಕಾರಣವಾಗ ಬಹುದು. ಈ ನಿಟ್ಟಿ ನಲ್ಲಿ ಸರಕಾರ ಮಾರ್ಗಸೂಚಿಯನ್ನು ಹೊರಡಿಸಿದೆ.
- ಜಿಲ್ಲೆಯ ಗಡಿಭಾಗಗಳಲ್ಲಿ ಕೋಳಿ ಸಾಗಿಸುವ ವಾಹನಗಳ ತಪಾಸಣೆ
- ಕೋಳಿ ಅಥವಾ ಕಾಡುಹಂದಿ ಸಾವನ್ನಪ್ಪಿದರೆ ತತ್‌ಕ್ಷಣ ನಿಯಂತ್ರಣ ಕೊಠಡಿಗೆ ತಿಳಿಸುವುದು
- ಕೋಳಿ ಫಾರಂಗಳನ್ನು ಪ್ರತಿದಿನ ರಾಸಾಯನಿಕ ಬಳಸಿ ಶುಚಿಗೊಳಿಸುವುದು
- ಮೃತಪಟ್ಟ ಹಕ್ಕಿಗಳನ್ನು ಕೈಯಿಂದ ಮುಟ್ಟಬಾರದು ಮನೆಯಲ್ಲಿ ಸೋಂಕು ತಗಲಿದ ಹಕ್ಕಿಗಳ ಪುಕ್ಕಗಳನ್ನು ತೆಗೆಯಬಾರದು
- ವೈರಾಣು ಸೋಂಕಿತ ಹಕ್ಕಿಗಳನ್ನು ಸ್ಪರ್ಶಿಸಲು ಅಥವಾ ಅವುಗಳೊಂದಿಗೆ ಆಡಲು ಮಕ್ಕಳನ್ನು ಬಿಡಬಾರದು
- ಹಕ್ಕಿಗಳನ್ನು ಮುಟ್ಟಿದ ಅನಂತರ ಸಾಬೂನು ಮತ್ತು ನೀರಿನಿಂದ ತೊಳೆಯಬೇಕು
- ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ, ಕೋಳಿ ಕಚ್ಚಾ ಉತ್ಪನ್ನಗಳನ್ನು ತಿನ್ನಬೇಡಿ
- ಕೋಳಿಗಳ ಯಾವುದೇ ವಿಸರ್ಜನೆಗಳನ್ನು ಗೊಬ್ಬರ ವನ್ನಾಗಿ ಉಪಯೋಗಿಸಬಾರದು
- ಹಕ್ಕಿಗಳ ಅಸಹಜ ಸಾವಿನ ವಿಷಯ ತಿಳಿದುಬಂದರೆ ಕೂಡಲೇ ಅಧಿಕಾರಿಗಳಿಗೆ ವರದಿ ಮಾಡಿ. ಮೃತಹಕ್ಕಿ ಗಳನ್ನು ಮಣ್ಣು ಮಾಡುವಾಗಲೂ ಎಚ್ಚರಿಕೆ ವಹಿಸಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.