Drought ಎದುರಿಸಲು ಸಜ್ಜಾಗಿ: ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ
Team Udayavani, Nov 16, 2023, 12:05 AM IST
ಮಂಗಳೂರು: ಬರಗಾಲ ಬಾಧಿಸುವ ಸಾಧ್ಯತೆಗಳು ಗೋಚರಿಸುತ್ತಿರುವುದರಿಂದ ಪರ್ಯಾಯ ಪರಿಹಾರ ಕ್ರಮಗಳನ್ನು ಈಗಿಂದಲೇ ಸಜ್ಜು ಮಾಡಿಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬುಧವಾರ ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಜಿ.ಪಂ.ನ ಕಾರ್ಯ ನಿರ್ವಹಣಾ ಧಿಕಾರಿಯಿಂದ ಮಾಹಿತಿ ಪಡೆದು ನೀರಿನ ಸಮಸ್ಯೆ ಬಗೆಹರಿಸಲು ಈಗಿನಿಂ ದಲೇ ಕ್ರಮ ಕೈಗೊಳ್ಳಬೇಕು ಎಂದರು.
ಮಂಗಳೂರು, ಮೂಡುಬಿದಿರೆ ತಾಲೂಕುಗಳನ್ನು ಸಾಧಾರಣ ಬರದ ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೆ ಮಂಗಳೂರು, ಬಂಟ್ವಾಳ ಹಾಗೂ ಮೂಲ್ಕಿ ತಾಲೂಕುಗಳ 16 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇರುವುದಾಗಿ ಜಿ.ಪಂ. ಸಿಇಒ ಡಾ| ಆನಂದ್ ತಿಳಿಸಿದರು. ಮಳೆಯ ಕುರಿತು ಬರುವ ಮಾಹಿತಿಗಳನ್ನು ತಾ.ಪಂ. ಇಒಗಳಿಗೆ ಮುಟ್ಟಿಸಿ ಅವರು ಸ್ಥಳೀಯ ಶಾಸಕರಿಗೆ ಹಾಗೂ ಗ್ರಾಮಗಳಿಗೆ ಮಾಹಿತಿ ನೀಡುವ ಮೂಲಕ ಸಮನ್ವಯದಿಂದ ಯಾವುದೇ ರೀತಿಯ ಬರ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ನಡೆಸಬೇಕು. 20 ದಿನಕ್ಕೊಮ್ಮೆ ಸಂಬಂಧ ಪಟ್ಟ ಅಧಿಕಾರಿಗಳು ವಿಚಾರ ವಿಮರ್ಶೆ ನಡೆಸಬೇಕು ಎಂದರು.
ಅಧಿಕಾರಿಗಳಲ್ಲಿ ಸೋಮಾರಿತನ
ದ.ಕ. ಜಿಲ್ಲೆಯಲ್ಲಿರುವ ಗ್ರಾ.ಪಂ.ಗಳ ತೆರಿಗೆಗಳ ಬೇಡಿಕೆ, ವಸೂಲಾತಿ, ಬಾಕಿಗಳ ಕುರಿತು ತಾ.ಪಂ. ಇಒ ಗಳ ಸೋಮಾರಿತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ವರ್ಷದ ಕೊನೆಯ 4 ತಿಂಗಳಲ್ಲಿ ಶೇ. 70ರಿಂದ 80 ಸಂಗ್ರಹ ಮಾಡುವ ಕ್ರಮ ಸರಿಯಲ್ಲ; ಆರಂಭದಿಂದಲೇ ತೆರಿಗೆ ಸಂಗ್ರಹವಾಗಬೇಕು ಎಂದರು.
ಗ್ರಾ.ಪಂ. ಆಸ್ತಿಗಳ ಮ್ಯಾನ್ಯುವಲ್ ಸಮೀಕ್ಷೆಯಲ್ಲೂ ಜಿಲ್ಲೆ ಹಿಂದುಳಿದಿರು ವುದನ್ನು ಉಲ್ಲೇಖಿಸಿದ ಖರ್ಗೆ, ಗ್ರಾ.ಪಂ.ಗಳ ಸಂಪನ್ಮೂಲ ಹೆಚ್ಚಳಕ್ಕಾಗಿ ಈ ಕ್ರಮಕ್ಕೆ ಸೂಚಿಸಲಾಗಿದೆ; ಅದ ರಲ್ಲೂ ಹಿಂದುಳಿದಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜೆಜೆಎಂ ಪರಿಶೋಧನೆಗೆ ತಂಡ
ಜಲಜೀವನ್ ಮಿಷನ್ (ಜೆಜೆಎಂ) ಪ್ರಗತಿಯ ಕುರಿತು ಈಗಾಗಲೇ ಮುಖ್ಯಮಂತ್ರಿ ಸಲಹೆ ಮೇರೆಗೆ ಥರ್ಡ್ ಪಾರ್ಟಿಯಿಂದ ಆಡಿಟ್ ಮಾಡಲಾಗುತ್ತಿದೆ. ರಾಜ್ಯದ 1,500 ಗ್ರಾಮಗಳಿಗೆ ಈ ತಂಡ ಭೇಟಿ ನೀಡಿ ಪ್ರಗತಿ ಪರಿಶೀಲನೆ ಕೆಲಸ ಮಾಡಲಿದೆ. ಎಂದು ಸಚಿವರು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಡಾ| ಮಂಜುನಾಥ ಭಂಡಾರಿ, ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ನಿರ್ದೇಶಕ ನಾಗೇಂದ್ರ ಪ್ರಸಾದ್, ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತ ಪವನ್ ಕುಮಾರ್ ಮಾಲಪಾಟಿ ಉಪಸ್ಥಿತರಿದ್ದರು.
ಕ್ಲಪ್ತ ಸಮಯದಲ್ಲಿ ದೂರು ಇತ್ಯರ್ಥ
ಪಿಡಿಒ, ಕಾರ್ಯದರ್ಶಿ ಸಹಿತ ಅಧಿಕಾರಿಗಳ ಬಗ್ಗೆ ಸಾರ್ವಜನಿಕರು ನೀಡುವ ದೂರುಗಳನ್ನು ತಿಂಗಳುಗಟ್ಟಲೆ ಬಾಕಿ ಇರಿಸುವ ತಾ.ಪಂ. ಇಒಗಳನ್ನು ಅಮಾನತು ಮಾಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ಯಿತ್ತರು. ನಿಮ್ಮ ಕೆಲಸಗಳನ್ನು ನಾವು ವಿಧಾನಸೌಧದಲ್ಲಿ ಕೂತು ಪರಿಹರಿಸಲಾ ಗದು. ನೀವೇ ತ್ವರಿತವಾಗಿ ಇತ್ಯರ್ಥಪಡಿಸಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.