ಪ್ಲಾಸ್ಟಿಕ್ ಮಾಲಿನ್ಯವನ್ನು ಬೀಟ್ ಮಾಡಿ
Team Udayavani, Jun 7, 2018, 12:55 PM IST
ಮಹಾನಗರ : ವಿಶ್ವ ಪರಿಸರ ದಿನವನ್ನು ‘ಪ್ಲಾಸ್ಟಿಕ್ ಮಾಲಿನ್ಯವನ್ನು ಬೀಟ್ ಮಾಡಿ’ ಕಾರ್ಯಕ್ರಮವಾಗಿ ಪಣಂಬೂರು ಬೀಚ್‌ನಲ್ಲಿ ಆಯೋಜಿಸಲಾಯಿತು. ವಿವಿಧ ಆಡಳಿತ ಇಲಾಖೆಗಳು ಮತ್ತು ಕಾಲೇಜು ಆಫ್ ಫಿಶರೀಸ್, ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್
ಅಂಡ್ ಮ್ಯಾನೇಜ್‌ಮೆಂಟ್, ಸರಕಾರಿ ಪ್ರೌಢಶಾಲೆ ಚಿತ್ರಪುರಾ, ಎನ್‌ಐಟಿಕೆ ಹೈಸ್ಕೂಲ್, ಶ್ರೀನಿವಾಸಪುರ, ಸರಕಾರಿ ಪ್ರೌಢಶಾಲೆ ಬೈಕಾಂಪಡಿ, ಎನ್‌ಎಂಪಿಟಿ ಪ್ರೌಢಶಾಲೆ ಪಣಂಬೂರ್, ಎಂಸಿಎಫ್ ಸಿಬಂದಿ, ಎಮ್‌ಆರ್‌ಪಿಎಲ್ ಸಿಬಂದಿ, ಬಿಎಎಸ್‌ಎಫ್ ಸಿಬಂದಿ, ಜೇಸಿಐ ಮಂಗಳೂರು ಮತ್ತು ಎನ್‌ಜಿಒ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಮಾತನಾಡಿದ ಮೀನುಗಾರಿಕೆ ಕಾಲೇಜಿನ ಡೀನ್ ಡಾ| ಎಸ್.ಎಂ. ಶಿವಪ್ರಕಾಶ್, ಕಡಲತೀರದ ಶುದ್ಧತೆ ಮತ್ತು ಸಮುದ್ರ ಜೀವನದ ಮೇಲೆ ಪ್ಲಾಸ್ಟಿಕ್ ಋಣಾತ್ಮಕ ಪ್ರಭಾವವನ್ನು ವಿವರಿಸಿದರು. ಸುಮಾರು ಎರಡು ಟ್ರಕ್ ಪ್ಲಾಸ್ಟಿಕ್ ಕಸವನ್ನು ಬೀಚ್‌ನಿಂದ ಕಾರ್ಪೊರೇಷನ್ ಸಹಾಯದಿಂದ ಹೊರಹಾಕಲಾಯಿತು. ನಿನಾಸಮ್ ಪ್ರಕಾರ್ಥಿ ಗುಂಪು ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಬೀದಿ ಪ್ರದರ್ಶನವನ್ನು ಮತ್ತು ಪರಿಸರದ ಮೇಲೆ ಅದರ
ಪರಿಣಾಮವನ್ನು ಪ್ರದರ್ಶಿಸಿತು. ಮಂಗಳೂರು ಮೀನುಗಾರಿಕೆ ಕಾಲೇಜಿನ ಪ್ರೊಫೆಸರ್ ಡಾ| ಎಸ್. ಆರ್. ಸೋಮಶೇಖರ್, ಪಾಲಿಕೆ ಪರಿಸರ ಅಭಿಯಂತರ ಮಧು, ಡಾ| ರಾಜಶೇಖರ ಪುರಾಣ, ಮಧುರೈ ಶ್ರೀಲತಾ ಯು.ಎ., ಡಾ| ಎಸ್. ಮಂಜಪ್ಪ, ಜಯಪ್ರಕಾಶ್ ಎಸ್. ನಾಯ್ಕ, ಡಾ| ಉತ್ತಪ್ಪ ಎಸ್., ಮಹೇಶ್ ಕುಮಾರ್ ಯು., ಯತೀಶ್ ಬೈಕಂಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.