![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 8, 2019, 12:30 AM IST
ಮಂಗಳೂರು: ಭಂಡಾರಿ ಬಿಲ್ಡರ್ ನಿರ್ಮಾಣದ ಪಟ್ಲ ಗಾರ್ಡನ್ ವಸತಿ ಸಮುಚ್ಚಯಕ್ಕೆ ಬಿಕರ್ನಕಟ್ಟೆ- ಶಕ್ತಿನಗರ ನಡುವಣ ದತ್ತನಗರ ಬಳಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಬುಧವಾರ ಶಿಲಾನ್ಯಾಸಗೈದು ಆಶೀರ್ವಚನವಿತ್ತರು.
ಭಂಡಾರಿ ಬಿಲ್ಡರ್ನ ಆಡಳಿತ ನಿರ್ದೇಶಕ ಲಕ್ಷ್ಮೀಶ ಭಂಡಾರಿ ಮತ್ತು ಪಟ್ಲ ಪ್ರತಿಷ್ಠಾನದ ಪಟ್ಲ ಸತೀಶ್ ಶೆಟ್ಟಿ ಅವರ ಈ ಯೋಜನೆಯು ಕ್ಷಿಪ್ರ ಗತಿಯಲ್ಲಿ ನಿರ್ಮಾಣವಾಗಿ ನಗರಕ್ಕೆ ವಿಶೇಷ ಕೊಡುಗೆಯಾಗಲೆಂದು ಸ್ವಾಮೀಜಿಯವರು ಆಶೀರ್ವಚಿಸಿದರು.
ಈ ಯೋಜನೆಯು ನಿಸರ್ಗದ ಸುಂದರ ಮಡಿಲಿನಲ್ಲಿದೆ. ಭಂಡಾರಿ ಮತ್ತು ಪಟ್ಲ ಅವರು ಸದಭಿರುಚಿಯ ಸಾಧನೆಯಿಂದ ಗಮನ ಸೆಳೆದವರು. ಅವರೀರ್ವರ ಪರಿಕಲ್ಪನೆಯ ಈ ಪಟ್ಲಗಾರ್ಡನ್‌ಗೆ ಗ್ರಾಹಕರು ಈಗಾಗಲೇ ತುಂಬು ಸ್ಪಂದನೆ ನೀಡಿರುವುದು ಸಂತಸ ತಂದಿದೆ ಎಂದರು.
ಡಾ | ಎ. ಜೆ. ಶೆಟ್ಟಿ ಅವರು ಮಾಹಿತಿ ಪತ್ರ ಬಿಡುಗಡೆಗೊಳಿಸಿದರು. 36 ಸಮುಚ್ಚಯಗಳ ಈ ಯೋಜನೆಯ ವಾಸ್ತು ಶೈಲಿ ಗಮನಾರ್ಹ ಎಂದರು. ಉದ್ಯಮಿ ಎ. ಸದಾನಂದ ಶೆಟ್ಟಿ, ಮಾಜಿ ಮೇಯರ್ ಮಿಜಾರುಗುತ್ತು ಶಶಿಧರ ಹೆಗ್ಡೆ, ಕ್ರೆಡಾೖ ಅಧ್ಯಕ್ಷ ನವೀನ್ ಕಾಡೋìಜಾ, ಕಾರ್ಪೊರೇಟರ್ ಅಖೀಲಾ ಆಳ್ವ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.
“ಯೋಜನೆಗೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ರೇಷ್ಠ ರೀತಿಯಲ್ಲಿ ನಿರ್ಮಾಣ ಕಾರ್ಯ ನಡೆಯಲಿದೆ. ಕೆಳಗಿನ ಮೂರು ಅಂತಸ್ತುಗಳಲ್ಲಿ ಪಾರ್ಕಿಂಗ್, ಮೇಲಿನ ಆರು ಅಂತಸ್ತುಗಳಲ್ಲಿ 36 ವಸತಿ ಸಮುಚ್ಚಯಗಳಿರುತ್ತವೆ. ಯೋಜನೆ ಬೆಂಬಲಿಸಿದ ಜನತೆಗೆ ಕೃತಜ್ಞರಾಗಿದ್ದೇವೆ’ ಎಂದು ಲಕ್ಷ್ಮೀಶ ಭಂಡಾರಿ, ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು. ಲಕ್ಷಿ$¾àಶ ಭಂಡಾರಿ, ನಿಖೀತಾ ಭಂಡಾರಿ ಅತಿಥಿಗಳನ್ನು ಸಮ್ಮಾನಿಸಿದರು. ಪ್ರಸ್ತಾವನೆಗೈದ ವೇಣು ಶರ್ಮಾ ಅವರು ಕದ್ರಿ ಕಂಬಳ ಬಳಿ ಭಂಡಾರಿ ಬಿಲ್ಡರ್ನ ಪ್ರತಿಷ್ಠಿತ 56 ಅಂತಸ್ತುಗಳ ಭಂಡಾರಿ ವರ್ಟಿಕಾ ಯೋಜನೆ ಇದೀಗ ಕಾರ್ಯಾರಂಭಗೊಂಡಿದೆ ಎಂದು ತಿಳಿಸಿದರು.
You seem to have an Ad Blocker on.
To continue reading, please turn it off or whitelist Udayavani.