ಸುಂದರ, ಸ್ವತ್ಛ ಮಂಗಳೂರು ನಿರ್ಮಾಣ: ಡಿ. ವೇದವ್ಯಾಸ ಕಾಮತ್
Team Udayavani, Apr 30, 2018, 10:49 AM IST
ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್ ಅವರು ರವಿವಾರ ಅಪಾರ ಜನ ಬೆಂಬಲದೊಂದಿಗೆ ಚುನಾವಣಾ ಪ್ರಚಾರ ನಡೆಸಿದರು.
ಈ ಬಾರಿ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆಲುವಿನ ವಿಶ್ವಾಸದಲ್ಲಿರುವ ವೇದವ್ಯಾಸ ಅವರು, ಅತ್ತಾವರದ ವಾರ್ಡ್ ನಂ.55, ಜಪ್ಪಿನಮೊಗರು ವಾರ್ಡ್ ನಂ. 54, ವೆಲೆನ್ಸಿಯಾ ವಾರ್ಡ್ ನಂ. 48, ಬಜಾಲ್ ವಾರ್ಡ್ ನಂ. 53ರ ಕನ್ನಗುಡ್ಡೆ ಗಾಣದಬೆಟ್ಟು ಮುಂತಾದ ಕಡೆಗಳಲ್ಲಿ ಮನೆ-ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಪರವಾಗಿ ಮತದಾರರಲ್ಲಿ ಮತಯಾಚಿಸಿದರು.
ತಮ್ಮ ಚುನಾವಣಾ ಪ್ರಚಾರದ ವೇಳೆ, ನಗರದ ಹಲವೆಡೆ ಒಳಚರಂಡಿ ಅವ್ಯವಸ್ಥೆ, ಬೀದಿ ದೀಪ ಅವ್ಯವಸ್ಥೆ, ನೀರಿನ ಸಮಸ್ಯೆ ಮತ್ತು ಮತ್ತಿತರ ಮೂಲಭೂತ ಸೌಕರ್ಯಗಳ ಕೊರತೆ-ಸಮಸ್ಯೆಗಳು ಇರುವುದನ್ನು ಮತದಾರರು ವೇದವ್ಯಾಸ ಅವರ ಗಮನಕ್ಕೆ ತಂದರು.
ಇದೇ ವೇಳೆ ಮಾತನಾಡಿದ ಡಿ. ವೇದವ್ಯಾಸ ಕಾಮತ್, ತಾನು ಶಾಸಕನಾಗಿ ಆಯ್ಕೆಯಾದರೆ, ವರ್ಷದೊಳಗೆ ಅವುಗಳಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರಲ್ಲದೆ, ಮುಂದಿನ ಐದು ವರ್ಷಗಳಲ್ಲಿ ಸುಂದರ ಹಾಗೂ ಸ್ವತ್ಛ ಮಂಗಳೂರು ನಿರ್ಮಾಣದ ತನ್ನ ಯೋಜನೆಯನ್ನು ಜನರ ಮುಂದಿಟ್ಟರು.
ಮತ ಪ್ರಚಾರದ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಹ ಸಂಚಾಲಕ್ ರವಿ
ಶಂಕರ್ ಮಿಜಾರ್, ವಸಂತ್ ಜೆ. ಪೂಜಾರಿ, ಅಜಯ್, ಕಿರಣ್, ದೇವೋಜಿ ರಾವ್, ಶಿವಾಜಿ ರಾವ್, ವೇಣುಗೋಪಾಲ್, ಸುರೇಂದ್ರ, ರಮೇಶ್ ಕಂಡೆಟ್ಟು, ಯೋಗೀಶ್, ನವೀನ್ ಕೊಟ್ಟಾರಿ, ಕಾರ್ತಿಕ್, ಸಂದೇಶ್, ಗುರು ಪ್ರಸಾದ್, ಬಾಲಕೃಷ್ಣ, ವೀಣಾಮಂಗಲ, ನಯನ, ನಾಗೇಶ್, ಪ್ರತಾಪ್, ಸತೀಶ್, ನಿರಂಜನ್, ನಮಿತಾ, ಅಭಿಲಾಷಿಣಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.