ಮಳೆಕೊಯ್ಲು ಪದ್ಧತಿ ಅಳವಡಿಸಿ ಜಲ ಸಾಕ್ಷರರಾದರು !

Team Udayavani, Jun 23, 2019, 5:00 AM IST

12

ಮಹಾನಗರ: ನಗರದಲ್ಲಿ ಮಳೆಕೊಯ್ಲು ಪದ್ಧತಿ ಮೂಲಕ ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಉದಯವಾಣಿಯು ‘ಸುದಿನ’ದಲ್ಲಿ ಕೈಗೊಂಡಿರುವ ‘ಮನೆ ಮನೆ ಮಳೆಕೊಯ್ಲು’ ಅಭಿಯಾನ ಪರಿಣಾಮ ಬೀರತೊಡಗಿದೆ.

ಮಳೆಕೊಯ್ಲು ಬಗ್ಗೆ ಮಾಹಿತಿ ನೀಡಲೆಂದು ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಸಹಯೋಗದಲ್ಲಿ ಕಾರ್ಯಾಗಾರ ನಡೆಸಲಾಗಿತ್ತು. ಈಗ ಉದಯವಾಣಿಯ ಅಭಿಯಾನಕ್ಕೆ ಸ್ಪಂದಿಸಿ ಪದವಿನಂಗಡಿಯ ಪ್ರಶಾಂತ್‌ ಪೈ ಹಾಗೂ ಉರ್ವ ನಿವಾಸಿ ವಿನಾಯಕ್‌ ಅವರು ಇದೀಗ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಪದ್ಧತಿಯನ್ನು ಅಳವಡಿಸಿ ಉಳಿದವರಿಗೆ ಪ್ರೇರಣೆಯಾಗಿದ್ದಾರೆ.

ಮಳೆ ನೀರು ಬಾವಿಯನ್ನು ತುಂಬಿಕೊಳ್ಳುವುದೇ ಖುಷಿ
‘ಮನೆ ಆವರಣದಲ್ಲೇ ಬಾವಿ ಇದ್ದರೂ ಅದನ್ನು ನಿರ್ಲಕ್ಷಿಸಿ ಪಾಲಿಕೆ ನೀರನ್ನೇ ಆಶ್ರಯಿಸಿದ್ದೆವು. ಆದರೆ ಈ ಬಾರಿ ಎಪ್ರಿಲ್-ಮೇ ತಿಂಗಳಲ್ಲಿ ಪಾಲಿಕೆ ನೀರು ರೇಷನಿಂಗ್‌ ಮಾಡಿದಾಗ ನೀರಿನ ಮಹತ್ವ ನಮಗೆ ಅರಿವಾಗಿತ್ತು. ಬೋರ್‌ವೆಲ್ ಕೊರೆಯಲು ಆಲೋಚಿಸಿದ್ದೆವು. ಆದರೆ, ಉದಯವಾಣಿ ಆಯೋಜಿಸಿದ್ದ ಮಳೆಕೊಯ್ಲು ಕಾರ್ಯಕ್ರಮಕ್ಕೆ ಬಂದಾಗ ಶ್ರೀ ಪಡ್ರೆ ಅವರು ಬೋರ್‌ವೆಲ್ಗಿಂತ ಬಾವಿಯೇ ಉತ್ತಮ ಎಂದು ಸೂಚಿಸಿದರು. ಅಲ್ಲೇ ಇದ್ದ ನಿರ್ಮಿತಿ ಕೇಂದ್ರದ ಮಳೆಕೊಯ್ಲು ಉಪಕರಣಗಳ ಪ್ರಾತ್ಯಕ್ಷಿಕೆ ನೋಡಿ ಅಲ್ಲಿನ ಸಿಬಂದಿಯನ್ನು ಅದೇದಿನ ಮನೆಗೆ ಕರೆಸಿ ಉಪಕರಣಗಳನ್ನು ಖರೀದಿಸಿ ಅಳವಡಿಸಿದೆವು’ ಎನ್ನುತ್ತಾರೆ ಪದವಿನಂಗಡಿಯ ಪ್ರಶಾಂತ್‌ ಪೈ.

‘ನಮ್ಮ ಮನೆ ಹತ್ತು ಸೆಂಟ್ಸ್‌ ಜಾಗದಲ್ಲಿದೆ. ಮನೆಯ ಸುತ್ತ-ಮುತ್ತ ಜಾಗವಿದೆ.

ಅಲ್ಲಿದ್ದ ಬಾವಿಯ ನೀರು ಬಳಸದೆ ಬತ್ತಿ ಹೋಗುತ್ತಿತ್ತು. ಮನೆಯ ಟೇರೆಸ್‌ನ ಮೇಲೆ ಬಿದ್ದ ನೀರೂ ಚರಂಡಿ ಸೇರುತ್ತಿತ್ತು. ನೀರು ವ್ಯರ್ಥವಾಗುತ್ತಿದೆ ಎನಿಸುತ್ತಿತ್ತು. ಆದರೆ ಮಳೆಕೊಯ್ಲು ಬಗ್ಗೆ ಗಂಭೀರವಾಗಿ ಯೋಚಿಸಿರಲಿಲ್ಲ. ಈಗ ಅರಿವಾಗಿದೆ. ಈಗ ಛಾವಣಿ ಮೇಲೆ ಬೀಳುವ ಮಳೆ ನೀರು ಬಾವಿಯನ್ನು ತುಂಬಿಕೊಳ್ಳುವುದೇ ನೋಡಲು ಖುಷಿ. ಮುಂದಿನ ವರ್ಷ ನೀರಿನ ಸಮಸ್ಯೆ ಕಾಡದು ಎಂಬ ವಿಶ್ವಾಸವೂ ಇದೆ. ಫಿಲ್ಟರ್‌ ಹೊಂದಿರುವ ಮಳೆಕೊಯ್ಲು ಉಪಕರಣಕ್ಕೆ 5750 ರೂ., ಪೈಪ್‌ ಹಾಗೂ ಇತರ ಖರ್ಚು ಸುಮಾರು 5, 000 ರೂ. ಸೇರಿ ಒಟ್ಟು 10 ಸಾವಿರ ಖರ್ಚಾಗಿದೆ’ ಎಂದು ವಿವರಿಸುತ್ತಾರೆ ಪ್ರಶಾಂತ್‌ ಪೈ.

‘ನಾನು ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡಿದ್ದೆ. ಆ ಬಗ್ಗೆ ವಿಚಾರಿಸಿ ನನಗೂ ಈಗ ಮಳೆಕೊಯ್ಲಿನ ಬಗ್ಗೆ ಹಲವು ಕರೆಗಳು ಬರುತ್ತಿವೆ. ಅವರಿಗೆಲ್ಲಾ ಮಾಹಿತಿ ನೀಡುತ್ತಿದ್ದೇನೆ’ ಎಂದರು.

ಉದಯವಾಣಿ ಕಾರ್ಯಾಗಾರವೇ ನಮಗೆ ಪ್ರೇರಣೆ

‘ವರ್ಷಗಳ ಹಿಂದೆ ನೀರಿನ ಸಮಸ್ಯೆ ಎದುರಾದಾಗ ಮಳೆ ನೀರನ್ನು ಸದ್ಭಳಕೆ ಮಾಡಿಕೊಳ್ಳುವ ಬಗ್ಗೆ ಚಿಂತಿಸಿ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದೆವು. ಮನೆಯ ಟೆರೇಸ್‌ನ ಒಂದು ಬದಿಗೆ ಪೈಪ್‌ ಅಳವಡಿಸಿ ಬಾವಿಗೆ ಸಂಪರ್ಕ ಕೊಟ್ಟಿದ್ದೆವು. ಆದರೆ, ಮಳೆಕೊಯ್ಲಿನ ಮಹತ್ವದ ಬಗ್ಗೆ ಅಷ್ಟೊಂದು ತಿಳಿದಿರಲಿಲ್ಲ. ಆದರೆ, ಪತ್ರಿಕೆಯ ಕಾರ್ಯಾಗಾರದಲ್ಲಿ ಭಾಗವಹಿಸಿದ ಬಳಿಕ ಮಳೆಕೊಯ್ಲಿನ ಅಗತ್ಯ ಮನವರಿಕೆಯಾಯಿತು. ಹಾಗಾಗಿ, ಮರುದಿನವೇ ನಮ್ಮ ಟೆರೇಸ್‌ನ ಇನ್ನೊಂದು ಬದಿಗೂ ಪೈಪ್‌ ಅಳವಡಿಸಿ ಮಳೆಕೊಯ್ಲು ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಿದ್ದೇವೆ’ ಎನ್ನುತ್ತಾರೆ ಉರ್ವಾದ ವಿನಾಯಕ್‌. ‘ಮಳೆಕೊಯ್ಲಿಗೆ ನಾವು ಯಾವುದೇ ಪ್ಲಂಬರ್‌ ಅನ್ನು ಸಂಪರ್ಕಿಸಿಲ್ಲ. ನಾನು ಹಾಗೂ ಮನೆಮಂದಿ ಸೇರಿ ಪೈಪ್‌ ತಂದು ಬಾವಿಗೆ ಸಂಪರ್ಕ ಕಲ್ಪಿಸಿದ್ದೇವೆ. ಮನೆಯ ಆಸು-ಪಾಸು ಮರಗಿಡಗಳಿಲ್ಲ. ಹಾಗಾಗಿ ಟೇರೆಸ್‌ ಶುಚಿಯಾಗಿದೆ. ಆ ಕಾರಣಕ್ಕೆ ಫಿಲ್ಟರ್‌ ಅಳವಡಿಸಿಲ್ಲ. ಹೀಗಾಗಿ, ನೀರು ಟೆರೇಸ್‌ನಿಂದ ನೇರವಾಗಿ ಫಿಲ್ಟರ್‌ ವ್ಯವಸ್ಥೆಯಿಲ್ಲದೆ ಬಾವಿಗೆ ಹೋಗುತ್ತಿದೆ. ಹೀಗಾಗಿ, ನಮಗೆ ಕೇವಲ 750 ರೂ. ವೆಚ್ಚ ತಗಲಿದೆ. ಕಳೆದ ಬಾರಿ ಸುಮಾರು 1000 ರೂ. ಖರ್ಚಾಗಿತ್ತು. ಮಳೆ ನೀರಿನ ಮಹತ್ವ ಅರಿತು ಅದನ್ನು ಸಂರಕ್ಷಿಸುವ ಮನೋಭಾವ ಎಲ್ಲರಲ್ಲೂ ಬೆಳೆಯಬೇಕು. ಆಗ ನೀರಿನ ಸಮಸ್ಯೆಗೆ ಪರಿಹಾರ ಹೇಳಬಹುದು’ ಎನ್ನುತ್ತಾರೆ ಅವರು.

ಮನೆಮನೆಗೆ ಮಳೆಕೊಯ್ಲು ಉದಯವಾಣಿ ಸುದಿನ ಅಭಿಯಾನದಿಂದ ಪ್ರೇರಿತಗೊಂಡು ಈಗಾಗಲೇ ನಗರದ ಹಲವಾರು ಮಂದಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ. ಇವರ ಈ ಸಾಧನೆಯ ಹಿಂದೆ ಇರುವ ಸಾಧ್ಯತೆಗಳ ಕುರಿತು ಬೆಳಕುಚೆಲ್ಲುವ ಪ್ರಯತ್ನ.

ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ಜತೆಗೆ ತಮ್ಮ ಖುಷಿಯನ್ನು ಉಳಿದವರೊಂದಿಗೂ ಹಂಚಿಕೊಳ್ಳುತ್ತಿದ್ದಾರೆ. ಹೀಗಿರುವಾಗ, ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೊ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. ವಾಟ್ಸಪ್‌ ನಂಬರ್‌: 9900567000

ಟಾಪ್ ನ್ಯೂಸ್

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

1

Kadri: ಬೃಹತ್‌ ಗಾತ್ರದ ಚಿಟ್ಟೆ, ಜೀರುಂಡೆ !

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Ullala: ಗ್ಯಾಸ್‌ ಸಿಲಿಂಡರ್‌ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.