ಬಿಎಡ್‌: ಸರಕಾರಿ ಸೀಟ್‌ಗೂ ಡೊನೇಷನ್‌!


Team Udayavani, Feb 8, 2018, 8:15 AM IST

34.jpg

ಪುತ್ತೂರು: ಖಾಸಗಿ ಕಾಲೇಜುಗಳ ಡೊನೇಷನ್‌ ದಾಹ ಸರಕಾರಿ ಸೀಟುಗಳನ್ನು ಬಿಡುತ್ತಿಲ್ಲ. ಬಿ.ಎಡ್‌.ಗೆ ಸರಕಾರ ನಿಗದಿಪಡಿಸಿದ ಶುಲ್ಕ ಪಾವತಿಸಿ ಕಾಲೇಜು ಆಯ್ಕೆ ಮಾಡಿಕೊಂಡ ಬಳಿಕವೂ ಡೊನೇಷನ್‌ ಪಾವತಿಸುವಂತೆ ಒತ್ತಡ ಹೇರುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಹಗಲಿರುಳು ಶ್ರಮಪಟ್ಟು ಓದಿ, ರಾಜ್ಯದ ಅಷ್ಟು ಅಭ್ಯರ್ಥಿಗಳ ಜತೆ ಸ್ಪರ್ಧಿಸಿ ಸಿಇಟಿಯಲ್ಲಿ ರ್‍ಯಾಂಕ್‌ ಗಳಿಸಿ ದರೂ ಡೊನೇಷನ್‌ ಪಾವತಿಸಬೇಕೆಂಬ ಧೋರಣೆ ಬಗ್ಗೆ ವಿದ್ಯಾರ್ಥಿ ವಲಯ ದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣ ವಾಗಿದೆ. ಕೆಲವು ವಿದ್ಯಾರ್ಥಿಗಳು ಡೊನೇಷನ್‌ ಪಾವತಿಸುವುದಿಲ್ಲ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಸವಾಲೆಸೆದ ಘಟನೆಯೂ ನಡೆದಿದೆ.

ಪದವಿ ವ್ಯಾಸಂಗದ ಬಳಿಕ ಹೆಚ್ಚಿ ನವರು ಬಿ.ಎಡ್‌. ವ್ಯಾಸಂಗದತ್ತ ಮುಖ ಮಾಡುತ್ತಾರೆ. ಸದ್ಯದ ಪರಿಸ್ಥಿತಿ ಯಲ್ಲಿ ಸ್ನಾತಕೋತ್ತರ ಪದವಿ ಪಡೆ ದರೂ ಉಪನ್ಯಾಸಕ ನೇಮಕಾತಿಗೆ ಬಿ.ಎಡ್‌. ಕಡ್ಡಾಯ ಮಾಡಲಾಗಿದೆ. ಇದರ ಲಾಭ ಪಡೆದುಕೊಳ್ಳುತ್ತಿರುವ ಖಾಸಗಿ ಬಿ.ಎಡ್‌. ಕಾಲೇಜುಗಳು, ಡೊನೇಷನ್‌ ಭಾರವನ್ನು ವಿದ್ಯಾರ್ಥಿಗಳ ಮೇಲೆ ಹೊರಿಸುತ್ತಿದೆ. 

ಸಿಇಟಿಯಲ್ಲಿ ರ್‍ಯಾಂಕ್‌ ಪಡೆದು, ಸರಕಾರಿ ಸೀಟ್‌ ಗಿಟ್ಟಿಸಿ ಕೊಂಡ ಅಭ್ಯರ್ಥಿ ವರ್ಷಕ್ಕೆ 10,150 ರೂ. ಪಾವತಿಸಬೇಕು. ಇದಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ 1,560 ರೂ. ಅಫೀಲಿಯೇಶನ್‌ ಶುಲ್ಕ ಕಟ್ಟ ಬೇಕು. ಹೀಗೆ ವರ್ಷಕ್ಕೆ 11,710 ರೂ. ಎರಡು ವರ್ಷಕ್ಕೆ 23,420 ರೂ. ಪಾವ ತಿಸಿ ದರೆ ಸಾಕು. ಅಭ್ಯರ್ಥಿ ಗಳಿಗೆ ಸಿಕ್ಕಿರುವ 

ಖಾಸಗಿ ಅಥವಾ ಅನುದಾನಿತ ಕಾಲೇಜುಗಳ ಪೈಕಿ ಆಯ್ಕೆಗೆ ಅವಕಾಶವಿದೆ. ಆದರೆ ಇಲ್ಲಿ ಯಾವುದೇ ಶುಲ್ಕವನ್ನು ನೀಡು ವಂತಿಲ್ಲ ಎಂದು ದಾಖಲಾತಿ ಪತ್ರದಲ್ಲೇ ಬರೆಯಲಾಗಿದೆ. ಹಾಗಿ ದ್ದರೂ ಅಭ್ಯರ್ಥಿಗಳಿಗೆ ಐದು ಸಾವಿರ ರೂ., 10 ಸಾವಿರ ರೂ. ಮತ್ತು 15 ಸಾವಿರ ರೂ. ಗಳಂತೆ ರಶೀದಿ ನೀಡ ಲಾಗು ತ್ತದೆ. ಇದನ್ನು ಪಾವತಿಸಲೇ ಬೇಕು ಎಂದು ಒತ್ತಡವನ್ನೂ ಹೇರುತ್ತಿವೆ. ಇದರಿಂದ ಬಡ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ.

ಡೊನೇಷನ್‌ ವಸೂಲಿ
ಪದವಿ ಪೂರೈಸಿದ ಅಭ್ಯರ್ಥಿಗಳಿಗೆ ಬಿ.ಎಡ್‌. ಸಿಇಟಿ ಪರೀಕ್ಷೆ ನಡೆಯುತ್ತದೆ. ಮೆರಿಟ್‌ ಆಧಾರದಲ್ಲಿ ಸರಕಾರಿ ಸೀಟ್‌ ನೀಡಲಾಗುತ್ತದೆ. ಹೀಗೆ ಮೆರಿಟ್‌ ಸೀಟ್‌ ಪಡೆದುಕೊಂಡ ಅಭ್ಯರ್ಥಿಗಳು ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಕೂಡಲೇ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಪತ್ರ ವೊಂದನ್ನು ಅಭ್ಯರ್ಥಿಗೆ ನೀಡ ಲಾಗುತ್ತದೆ. ಇದನ್ನು ತಾವು ಸೇರ ಬಯಸುವ ಕಾಲೇಜಿನಲ್ಲಿ ತೋರಿಸಿ ಪ್ರವೇಶ ಪಡೆದುಕೊಳ್ಳಬೇಕು. ಈ ಪತ್ರದಲ್ಲಿ ಉಲ್ಲೇಖೀಸಿದಂತೆ-ಸಂಸ್ಥೆಯ ಶುಲ್ಕವಾಗಿ ಅಭ್ಯರ್ಥಿಯು ಪಾವ ತಿಸಿ ದ್ದಾರೆ. ಪಾವತಿಸಿರುವ ಶುಲ್ಕದ ವಿವರವನ್ನು ಪತ್ರದ ಹಿಂಬದಿಯಲ್ಲಿ ನಮೂದಿಸಲಾಗಿದೆ. ಈ ರೀತಿ ಪಾವತಿ ಸಿರುವ ಶುಲ್ಕವನ್ನು ಹೊರತುಪಡಿಸಿ ಇನ್ನಾವುದೇ ಶುಲ್ಕವನ್ನು ಸಂಸ್ಥೆಯವರು ವಸೂಲು ಮಾಡಬಾರದು- ಎಂದು ಹೇಳಲಾಗಿದೆ.

ಸರಕಾರಿ ಸೀಟ್‌ಗೆ ವರ್ಷದ ಶುಲ್ಕ 
ಸರಕಾರಕ್ಕೆ  10,150 ರೂ. ಪಾವತಿ
ಬಿ.ಎಡ್‌. ಅಫೀಲಿಯೇಶನ್‌ ಶುಲ್ಕ  1,560 ರೂ.
ಒಟ್ಟು  11,710 ರೂ. ಮಾತ್ರ

ರಶೀದಿಯೂ ಇದೆ!
ಬಿ.ಎಡ್‌.ನ ಸರಕಾರಿ ಸೀಟ್‌ ಪಡೆದುಕೊಂಡ ಅಭ್ಯರ್ಥಿಯಿಂದ ಖಾಸಗಿ ಅಥವಾ ಅನುದಾನಿತ ಕಾಲೇಜುಗಳು ಡೊನೇಷನ್‌ ರಶೀದಿಯನ್ನು ನೀಡು ತ್ತವೆ. ಅಷ್ಟು ಹಣವನ್ನು ಅಭ್ಯರ್ಥಿ ಪಾವತಿಸಲೇಬೇಕು. ಆದರೆ ಇಲ್ಲಿ  ಗಮ ನಿಸ ಬೇಕಾದದ್ದು , ರಶೀದಿ ನೀಡುವುದು ಅಭ್ಯರ್ಥಿ ಹೆಸರಿಗಲ್ಲ. ಆತನ ಅಥವಾ ಆಕೆಯ ಗಂಡ ಅಥವಾ ಹೆತ್ತವರ ಹೆಸರಿಗೆ. ಅಭ್ಯರ್ಥಿಗಳು ಸ್ವಇಚ್ಛೆಯಿಂದ ಡೊನೇಷನ್‌ ನೀಡುವುದಾದರೆ, ಕಾಲೇಜಿನ ಟ್ರಸ್ಟ್‌ಗೆ ನೀಡಲು ಅವಕಾಶ ಇದೆ. ಆದರೆ ಬಲವಂತದಿಂದ ವಸೂಲಿ ಮಾಡುವಂತಿಲ್ಲ.

ಬಿ.ಎಡ್‌. ಸೇರಲಿಚ್ಛಿಸುವ ಆಕಾಂಕ್ಷಿಗಳು ಸರಕಾರದ ಸೀಟ್‌ ಪಡೆದುಕೊಂಡಿದ್ದರೆ, ಸರಕಾರ ವಿಧಿಸುವ ಶುಲ್ಕವನ್ನು ಮಾತ್ರ ಪಾವತಿಸಬೇಕು. ಹೆಚ್ಚುವರಿ ಶುಲ್ಕ ಅಥವಾ ಡೊನೇಷನ್‌ ಬೇಡಿಕೆ ಇಟ್ಟರೆ ನಮ್ಮಲ್ಲಿ ದೂರು ದಾಖಲಿಸಲು ಅವಕಾಶವಿದೆ. ಇದನ್ನು ರಾಜ್ಯದ ಪ್ರೌಢಶಿಕ್ಷಣ ನಿರ್ದೇಶಕರಿಗೆ ಹಾಗೂ ಕೇಂದ್ರೀಕೃತ ದಾಖಲಾತಿ ಘಟಕದ ಮೇಲಧಿಕಾರಿಗಳಿಗೆ ಕಳುಹಿಸಿ ಕೊಡುತ್ತೇವೆ.
– ನಾರಾಯಣ ಗೌಡ, ಪ್ರಾಂಶುಪಾಲ, ಬಿ.ಎಡ್‌. ಕಾಲೇಜು, ಮಂಗಳೂರು

ಸರಕಾರಿ ಸೀಟ್‌ ಪಡೆದುಕೊಂಡರೂ ಖಾಸಗಿ ಕಾಲೇಜು ಡೊನೇಷನ್‌ಗೆ ಬೇಡಿಕೆ ಮುಂದಿಡುತ್ತಿವೆ. 10 ಸಾವಿರ ರೂಪಾಯಿಗಳಿಗೆ ರಶೀದಿ ನೀಡಿದ್ದಾರೆ. ಹೆಚ್ಚುವರಿ ಶುಲ್ಕ ನೀಡದಂತೆ ದಾಖಲಾತಿ ಪತ್ರದಲ್ಲಿ ಉಲ್ಲೇಖ ಮಾಡಿರುವುದರಿಂದ, ಹಣ ನೀಡಿಲ್ಲ. ನೀಡುವುದೂ ಇಲ್ಲ.     
– ಹೆಸರು ಹೇಳಲಿಚ್ಛಿಸದ ಅಭ್ಯರ್ಥಿ

 ಗಣೇಶ್‌ ಎನ್‌. ಕಲ್ಲರ್ಪೆ

ಟಾಪ್ ನ್ಯೂಸ್

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2(1)

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

1(1)

Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

courts

Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು

Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ

Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

4(1)

Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್‌ ಹೊಂಡಗಳು!

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.