ಅವಧಿಗೆ ಮುಂಚೆ ನ.ಪಂ. ತಯಾರಿ; ಎದುರಾಗಲಿದೆ ಕುಡಿಯುವ ನೀರಿನ ಸಮಸ್ಯೆ
Team Udayavani, Feb 22, 2017, 2:26 PM IST
ಸುಳ್ಯ : ಕಳೆದ ಬೇಸಿಗೆಯಲ್ಲಿ ನ.ಪಂ. ನೀರಿನ ಪಾಠ ಕಲಿತಿರುವಂತೆ ತೋರುತ್ತಿದೆ. ಹಾಗಾಗಿ ಈ ಬಾರಿ ಬಲು ಬೇಗ ಎಚ್ಚರಗೊಂಡಿದೆ.
ಪಯಸ್ವಿನಿ ನದಿಗೆ ಮರಳಿನ ಒಡ್ಡು ಕಟ್ಟಿ ನೀರಿನ ಸಂಗ್ರಹಕ್ಕೆ ಫೆಬ್ರವರಿಯಲ್ಲೇ ಮುಂದಾ ಗಿದೆ. ಪ್ರತೀ ವರ್ಷ ಒಂದೆ ರಡು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದ ಮರಳಿನ ಒಡ್ಡು ಈ ಬಾರಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ನೀರು ಸಂಗ್ರಹಣಾ ಸ್ಥಳದ ವಿಸ್ತರಣೆ ಜತೆಗೆ ಬಳಿಯ ಹೊಳೆಯ ಹೂಳನ್ನೂ ಎತ್ತಲಾಗಿದೆ.
ಕಳೆದ ವರ್ಷ ಮಳೆ ಕೊರತೆಯಿಂದ ಪಯಸ್ವಿನಿ ಬಹು ಬೇಗನೆ ಬತ್ತಿತ್ತು. ಇದ ರಿಂದಾಗಿ ಕುಡಿಯುವ ನೀರಿಗೆ ಹಾಹಾ ಕಾರವೆದ್ದಿತ್ತು. ನೀರಿನ ಸಮಸ್ಯೆಯನ್ನು ಎದುರಿಸಲು 11 ಹೊಸ ಕೊಳವೆ ಬಾವಿಯನ್ನು ಕೊರೆಯಲಾಗಿತ್ತು.
ಕಿಂಡಿ ಅಣೆಕಟ್ಟು ಯೋಜನೆ ದೂರ
ನ.ಪಂ. ಆಡಳಿತಾತ್ಮಕವಾಗಿ 20 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಆದರೆ ಇಲ್ಲಿ ವ್ಯಾಪಾರ ವಹಿವಾಟು, ಶಿಕ್ಷಣಕ್ಕಾಗಿ ಬರುವವರ ಸಂಖ್ಯೆ ದಿನಕ್ಕೆ 15 ಸಾವಿರ ಮಂದಿ ಪ್ರತ್ಯೇಕ. ಇವರಿಗೂ ಕುಡಿಯುವ ನೀರು ಪೂರೈಸುವ ಹೊಣೆ ಆಡಳಿತದ್ದು. ಒಟ್ಟು 18 ವಾರ್ಡುಗಳಿದ್ದು, ದುಗ್ಗಲಡ್ಕ ವ್ಯಾಪ್ತಿಯ 2 ವಾರ್ಡು ಬಿಟ್ಟು ಉಳಿದೆಲ್ಲ ಜನವಸತಿ ಪ್ರದೇಶಗಳಿಗೆ ನದಿ ನೀರನ್ನೇ ಶುದ್ಧೀಕರಿಸಿ ಪೂರೈಸಲಾಗುತ್ತಿದೆ.
ಯೋಜನೆ ನನೆಗುದಿಗೆ
2 ವರ್ಷದ ಹಿಂದೆ ರೂಪಿಸಲಾದ 67 ಕೋಟಿ ರೂ. ವೆಚ್ಚದ ಸುಳ್ಯ ನಗರ ಸಮಗ್ರ ಕುಡಿಯುವ ನೀರು ಪೂರೈ ಸುವ ಯೋಜನೆಗೆ ಅನುದಾನ ಬಿಡುಗಡೆ ಯಾಗದ ಕಾರಣ ಯೋಜನೆ ನನೆಗುದಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯೂ ಮಣ್ಣಿನ ಒಡ್ಡೇ ಗತಿಯಾಗಿದೆ.
50 ವರ್ಷಗಳ ಹಿಂದೆ ನಿರ್ಮಿಸಲಾದ ಕಲ್ಲುಮುಟಿನ ಪಂಪ್ ಹೌಸ್ ಶಿಥಿಲ ಗೊಂಡು ಕುಸಿಯುವ ಸ್ಥಿತಿ ತಲುಪಿದೆ. ಮಳೆಗಾಲದಲ್ಲಿ ಒಳಗೆಲ್ಲ ಸೋರುತ್ತಿದ್ದು, ಟೆರೆಸ್‌ಗೆ ಪ್ಲಾಸ್ಟಿಕ್ ಹೊದಿಸ ಲಾಗಿದೆ. ಆದರೂ ಮಳೆ ನೀರು ಒಳಗೆ ಜಿನುಗು ತ್ತಿದೆ. ವಿದ್ಯುತ್ ಗೋಡೆಯಲ್ಲಿ ಪ್ರವ ಹಿಸಿ ಪ್ರಾಣ ಭೀತಿ ಒಡ್ಡುತ್ತಿದೆ. ಈ ಕಾರಣದಿಂದ ಪಂಪ್‌ಹೌಸ್‌ನಲ್ಲಿರುವ ಸಿಬಂದಿ ಇದರೊಳಗೆ ತಂಗಲು ಭಯ ಪಡುತ್ತಿ ದ್ದಾರೆ. ನಗರಾಡಳಿತ ಕೂಡಲೇ ನೂತನ ಪಂಪ್ ಹೌಸ್‌ನ್ನು ನಿರ್ಮಿಸಬೇಕಾಗಿದೆ.
ಬೇರೇನೆ ಪ್ರಸ್ತಾವನೆ
ಎರಡು ವರ್ಷಗಳ ಹಿಂದೆ ರೂಪಿಸಲಾದ 67 ಕೋಟಿ ರೂ. ವೆಚ್ಚದ ಸುಳ್ಯನಗರ ಸಮಗ್ರ ಕುಡಿಯುವ ನೀರು ಪೂರೈಸುವ ಯೋಜನೆ ಪ್ರಸ್ತಾವನೆಯಲ್ಲೇ ಇದೆ. ಈ ಯೋಜನೆಗೆ ಬೃಹತ್ ಪ್ರಮಾಣದಲ್ಲಿ ಅನುದಾನ ಬೇಕಾಗಿದ್ದು, ಅನುಮೋದನೆ ಸಿಗುವಲ್ಲಿ ವಿಳಂಬವಾಗುತ್ತದೆ. ಈಗ ಕಿಂಡಿ ಅಣೆಕಟ್ಟು ಯೋಜನೆಗೆ ಬೇರೇನೇ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿ ಅವರು ಸೂಚಿಸಿದ್ದಾರೆ. ಅದರಂತೆ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಲಿದ್ದೇವೆ. ನೂತನ ಪಂಪ್ ಹೌಸ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದ್ದು, ನಗರೋತ್ಥಾನ ಯೋಜನೆಯ ಅನುದಾನವನ್ನು ಬಳಸಿಕೊಳ್ಳುವ ಚಿಂತನೆ ಇದೆ.
– ಚಂದ್ರಕುಮಾರ್, ಮುಖ್ಯಾಧಿಕಾರಿ,
ನಗರ ಪಂಚಾಯತ್ ಸುಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.